Top

ಕುಮಾರಸ್ವಾಮಿಯವರೇ, ಯಡಿಯೂರಪ್ಪ ನಿಜವಾದ ಕಿಂಗ್ : ಬಿಜೆಪಿ

ಕುಮಾರಸ್ವಾಮಿಯವರೇ, ಯಡಿಯೂರಪ್ಪ ನಿಜವಾದ ಕಿಂಗ್ : ಬಿಜೆಪಿ
X

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ, ವಾಕ್‌ ಸಮರ ಮುಂದುವರೆದಿದೆ. ಕಳೆದ ನಿನ್ನೆ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಯಡಿಯೂರಪ್ಪ ಕಿಂಗ್‌ ಪಿನ್‌ ಎಂಬ ಹೇಳಿಕೆಗೆ ಇಂದು ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಟ್ವಿಟ್ಟಿಸಿರುವ ರಾಜ್ಯ ಬಿಜೆಪಿ ಮುಖಂಡರು, ಮುಖ್ಯಮಂತ್ರಿಯವರದು ಹಿಟ್‌ ಅಂಡ್‌ ರನ್‌ ಹೇಳಿಕೆಯಾಗಿದೆ. ಮುಖ್ಯಮಂತ್ರಿಗಳು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು.

https://twitter.com/BJP4Karnataka/status/1040870059617316864

ನಿಮ್ಮ ಸುತ್ತಲೂ ಇರುವ ಸಚಿವರುಗಳೇ ನೀವು ಆರೋಪ ಮಾಡಿರುವ ಕಿಂಗ್‌ ಪಿನ್‌ಗಳಾಗಿದ್ದಾರೆ. 104 ಸ್ಥಾನ ಗಳಿಸಿರುವ ಬಿಜೆಪಿ ಹಾಗೂ ಕನ್ನಡಿಗರ ಆಶೀರ್ವಾದ ಪಡೆದಿರುವ ಯಡಿಯೂರಪ್ಪ ನಿಜವಾದ ಕಿಂಗ್‌.

ಮುಖ್ಯಮಂತ್ರಿಗಳಾಗಿ ನೀವು ಆಧಾರವಿಲ್ಲದೇ ಆರೋಪ ಮಾಡಿದ್ದೀರಿ. ನಿಮಗೆ ನಾವು ಚಾಲೆಂಜ್‌ ಮಾಡುತ್ತೇವೆ. ನೀವು ಆರೋಪ ಮಾಡಿದಂತೆ ಆಧಾರಗಳನ್ನು ಬಿಡುಗಡೆ ಮಾಡಿ. ಆಧಾರ ಸಹಿತ ಸಾಭೀತು ಪಡಿಸಲು ಆಗದೇ ಇದ್ದರೇ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಟ್ವಿಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಮುಖ್ಯಮಂತ್ರಿಗಳ ಹೇಳಿಕೆಗೆ ಖಾರವಾಗೇ ಟ್ವಿಟ್‌ ಮಾಡಿರುವ ರಾಜ್ಯ ಬಿಜೆಪಿ, ಹೆಚ್‌ಡಿಕೆ ಆರೋಪ ಆಧಾರ ರಹಿತವಾಗಿದ್ದು, ಇದು ಸುಳ್ಳು ಹೇಳಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

Next Story

RELATED STORIES