Top

ಇಂಗ್ಲೆಂಡ್ ಕ್ರಿಕೆಟಿಗನಿಗೆ ಓಸಾಮ’ ಎಂದು ಕರೆದ ಆಸೀಸ್ ಕ್ರಿಕೆಟಿಗ!

ಇಂಗ್ಲೆಂಡ್ ಕ್ರಿಕೆಟಿಗನಿಗೆ ಓಸಾಮ’ ಎಂದು ಕರೆದ ಆಸೀಸ್ ಕ್ರಿಕೆಟಿಗ!
X

ಆಸ್ಟ್ರೇಲಿಯಾದ ಆಟಗಾರನೊಬ್ಬ ಪಂದ್ಯದ ವೇಳೆ ತನ್ನನ್ನು 'ಓಸಾಮಾ’ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದ ಎಂಬ ಗಂಭೀರ ಆರೋಪವನ್ನು ಇಂಗ್ಲೆಂಡ್​ನ ಆಲ್​ರೌಂಡರ್​ ಮೊಯಿನ್ ಅಲಿ ಮಾಡಿದ್ದಾರೆ.

ಮೊಯಿನ್ ಅಲಿ 2015ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ವೇಳೆ ನಡೆದ ಈ ಘಟನೆಯನ್ನು ಬಹಿರಂಗಪಡಿಸಿದ್ದು, ತನ್ನನ್ನು ಭಯೋತ್ಪಾದಕ ಓಸಾಮಾ ಬಿನ್ ಲಾಡೆನ್ ಹೆಸರಿನಲ್ಲಿ ಕರೆದ ಆಸ್ಟ್ರೇಲಿಯಾದ ಆಟಗಾರನ ಹೆಸರು ಬಹಿರಂಗಪಡಿಸಿಲ್ಲ.

31 ವರ್ಷದ ಮೊಯಿನ್ ಅಲಿ, ದಿ ಟೈಮ್ಸ್ ಹೆಸರಿನ ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಇದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಾರ್ಡಿಫ್​ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆಟಗಾರ ಓಸಾಮಾ ಎಂದು ಕರೆಯುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ನನ್ನ ಮೊದಲ ಆ್ಯಷಸ್ ಸರಣಿಯಲ್ಲಿನ ಪ್ರದರ್ಶನ ನನಗೆ ತೃಪ್ತಿ ನೀಡಿತ್ತು. ಆದರೆ ಆ ಪಂದ್ಯದ ವೇಳೆ ನಡೆದ ಘಟನೆ ನನ್ನನ್ನು ವಿಚಲಿತಗೊಳಿಸಿತು ಎಂದು ಮೊಯಿನ್ ಅಲಿ ಸ್ಥಳೀಯ ವೆಬ್ ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟೇಕ್ ದಟ್ ಓಸಾಮಾ (ಆ ಓಸಾಮನನ್ನು ತೆಗೆಯಿರಿ) ಎಂದು ಆಸ್ಟ್ರೇಲಿಯಾದ ಆಟಗಾರನೊಬ್ಬ ಮೈದಾನದಲ್ಲಿ ಮತ್ತೊಬ್ಬ ಆಟಗಾರನ ಬಳಿ ನನಗೆ ಕೇಳಿಸುವಂತೆ ಹೇಳಿದ.

ಟ್ರೆವೋರ್ ಬೈಲಿಸ್ ಈ ರೀತಿ ನನ್ನನ್ನು ಕರೆದಿರಬಹುದು. ಕೆಲವು ಸಹ ಆಟಗಾರರು ಈ ವಿಷಯವನ್ನು ನನ್ನ ಗಮನಕ್ಕೆ ತಂದು ಪ್ರಶ್ನಿಸಿದರು. ಆಸ್ಟ್ರೇಲಿಯಾದ ಕೋಚ್ ಲೆಹ್ಮನ್ ಬಳಿ ಈ ವಿಷಯ ಪ್ರಸ್ತಾಪಿಸಿದ್ದೆ. ಅವರು ಬೈಲಿಸ್ ಕರೆದು ಕೇಳಿದಾಗ, ನಾನು ಹಾಗೆ ಹೇಳಲೇ ಇಲ್ಲ. ನಾನು ಟೇಕ್ ದಟ್ ಪಾರ್ಟ್ ಟೈಮರ್ ಎಂದೇ ಸಮಜಾಯಿಷಿ ಕೊಟ್ಟಿದ್ದ ಎಂದು ಮೊಯಿನ್ ವಿವರಿಸಿದ್ದಾರೆ.

ಆದರೆ ನನಗೆ ಆತ ಹೇಳಿದ್ದು ಸ್ಪಷ್ಟವಾಗಿ ಕೇಳಿತ್ತು. ಓಸಾಮಾ ಮತ್ತು ಪಾರ್ಟ್ ಟೈಮರ್ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಈ ಪ್ರಕರಣ ಅಲ್ಲಿಗೆ ಮುಗಿದಿತ್ತು. ಆದರೆ ಇಡೀ ಸರಣಿಯುದ್ದಕ್ಕೂ ನನ್ನಲ್ಲಿ ಆಕ್ರೋಶ ಕೆರಳಿಸಿತ್ತು ಎಂದು ಮೊಯಿನ್ ಹೇಳಿದ್ದಾರೆ.

Next Story

RELATED STORIES