Top

ಪಾರಿಕ್ಕರ್ ಮತ್ತೆ ಆಸ್ಪತ್ರೆಗೆ: ಗೋವಾ ಸಿಎಂಗಾಗಿ ಶೋಧ

ಪಾರಿಕ್ಕರ್ ಮತ್ತೆ ಆಸ್ಪತ್ರೆಗೆ: ಗೋವಾ ಸಿಎಂಗಾಗಿ ಶೋಧ
X

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಮತ್ತೊಮ್ಮೆ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದಾರೆ. ಈ ಬಾರಿ ಪಾರಿಕ್ಕರ್ ಆರೋಗ್ಯದ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ.

ಮನೋಹರ್ ಪಾರಿಕ್ಕರ್ ಅನಾರೋಗ್ಯದಿಂದ ಬಳಲುತ್ತಿದ್ದು, ಪದೇಪದೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಬಾರಿ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದ್ದ ಪಾರಿಕ್ಕರ್ ಮತ್ತೊಮ್ಮೆ ಅನಾರೋಗ್ಯದ ಕಾರಣ ದೆಹಲಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

62 ವರ್ಷದ ಪಾರಿಕ್ಕರ್​ಗೆ ಪದೇಪದೆ ಅನಾರೋಗ್ಯ ಕಾಡುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಬಗ್ಗೆ ಬಿಜೆಪಿ ಚಿಂತೆಗೀಡಾಗಿದೆ. ಮುಖ್ಯಮಂತ್ರಿಗೆ ಪರ್ಯಾಯ ವ್ಯಕ್ತಿಯನ್ನು ಹುಡುಕಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೊತೆ ಸ್ವತಃ ಪಾರಿಕ್ಕರ್ ಮಾತುಕತೆ ನಡೆಸಿದ್ದು, ತಮ್ಮ ಅನಾರೋಗ್ಯ ಹಾಗೂ ಪರ್ಯಾಯ ಮುಖ್ಯಮಂತ್ರಿಯ ಹುಡುಕಾಟದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅನಾರೋಗ್ಯದ ಕಾರಣ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಶುಕ್ರವಾರ ರಾತ್ರಿ ಪಾರಿಕ್ಕರ್ ಸಚಿವ ಸಂಪುಟದ ಸಹದ್ಯೋಗಿಗಳು, ಮಿತ್ರ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ಗೋವಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ.

Next Story

RELATED STORIES