Top

ಈ ನಟ ಸುದೀಪ್ ಅವರ ದೂರದ ಸಂಬಂಧಿಯಂತೆ..!

ಈ ನಟ ಸುದೀಪ್ ಅವರ ದೂರದ ಸಂಬಂಧಿಯಂತೆ..!
X

ನಟ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸೆಲ್ಫಿಯೊಂದನ್ನ ತೆಗೆದುಕೊಂಡು ಟ್ವೀಟರ್‌ನಲ್ಲಿ ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ. ಈ ಖುಷಿಗೆ ಕಾರಣ ಏನಂದ್ರೆ ಗಣೇಶ್ ಸುದೀಪ್‌ ಅವರ ದೂರದ ಸಂಬಂಧಿಯಂತೆ.

ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಕಿಚ್ಚ ಸುದೀಪ್ ಅವರ ಸಂಬಂಧಿ ಅಂತಾ, ಸುದೀಪ್‌ಗೆ ಗೊತ್ತಾಯಿತಂತೆ. ಈ ಕಾರಣಕ್ಕಾಗಿ ಕಿಚ್ಚ ಈ ಖುಷಿಯನ್ನ ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಗಣೇಶ್ ನನ್ನ ದೂರದ ಸಂಬಂಧಿ, ಇತ್ತೀಚೆಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಗಣೇಶ್ ನನ್ನ ದೂರದ ಸಂಬಂಧಿಕರಾಗಬೇಕೆಂದು ಗೊತ್ತಾಯಿತು. ಈಗ ನಮ್ಮ ಮನೆಯಲ್ಲಿ ಗೋಲ್ಡ್ ಇದೆ. ನಾನು ತುಂಬಾ ಶ್ರೀಮಂತ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES