Top

ಇನ್ನೊಂದು ಸಾಹಸಕ್ಕೆ ರೆಡಿಯಾಗ್ತಿದ್ದಾರಾ ದರ್ಶನ್..?

ಇನ್ನೊಂದು ಸಾಹಸಕ್ಕೆ ರೆಡಿಯಾಗ್ತಿದ್ದಾರಾ ದರ್ಶನ್..?
X

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಕ್ರೇಜ್ ಎಂಥಾದ್ದು ಅಂತ ಎಲ್ಲರಿಗೂ ಗೊತ್ತೇಯಿದೆ. ಇದೀಗ ದರ್ಶನ್ ಸೂಪರ್ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡಿರೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ವೃತ್ತಿಪರ ರೇಸರ್ ಗಳ ರೀತಿ ದಚ್ಚು ಮೈಸೂರಿನ ಮಣ್ಣಿನ ರಸ್ತೆಗಳಲ್ಲಿ ಧೂಳೆಬ್ಬಿಸಿದ್ದಾರೆ. ದರ್ಶನ್ ಯಾವುದಾದರೂ ಸಿನಿಮಾಗಾಗಿ ರೇಸ್ ಕಾರ್ ಡ್ರೈವ್ ಪ್ರಾಕ್ಟೀಸ್ ಮಾಡ್ತಿದ್ದಾರಾ ಅನ್ನೋ ಅನುಮಾನ ಕೆಲವರಲ್ಲಿ ಮೂಡಿದೆ. ದರ್ಶನ್ ರೇಸ್ ಟ್ರ್ಯಾಕಿನಲ್ಲಿ ಓಡಿಸಿರೋ ಕಾರು ಪೋಲೋ ಜಿಟಿಐ. 150 ಹಾರ್ಸ್ ಪವರ್ ಹೊಂದಿರೋ ಕಾರಿದು.

ನುರಿತ ರೇಸರುಗಳು ಮಾತ್ರವೇ ಇಂತಹ ಕಾರು ಓಡಿಸಲು ಸಾಧ್ಯ ಅನ್ನೋರು ಇದ್ದಾರೆ. ಇಂಟರ್‌ನ್ಯಾಷನಲ್ ರೇಸಿಂಗ್ ಟೂರ್ನಮೆಂಟ್ನಲ್ಲಿ ಭಾಗವಹಿಸಲು ದಚ್ಚು ಈ‌ ರೀತಿ ಸ್ಪೋರ್ಟ್ಸ್ ಕಾರ್ ಡೈವಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಅಸಲಿ ಕಾರಣ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Next Story

RELATED STORIES