Top

ಸರ್ಕಾರವನ್ನ ಉಳಿಸಲು ದೇವರು ಮತ್ತು ಗುರುಗಳ ಅನುಗ್ರಹ ಬೇಕು.!

ಸರ್ಕಾರವನ್ನ ಉಳಿಸಲು ದೇವರು ಮತ್ತು ಗುರುಗಳ ಅನುಗ್ರಹ ಬೇಕು.!
X

ಶಿವಮೊಗ್ಗ : ಸರ್ಕಾರ ಉರುಳಿಸಲು ಬಿಜೆಪಿ ಅಪರೇಷನ್ ಕಮಲ ನಡೆಸುತ್ತಿದೆ ಎಂಬ ಗುಸು ಗುಸು ನಡುವೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಲೆನಾಡು ಕೋ- ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು, ಇಂದಿನ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಯತ್ನ ಮಾಡುತ್ತಿವೆ.

ಮೈತ್ರಿ ಸರ್ಕಾರದಲ್ಲಿ ಸಣ್ಣ ಪುಟ್ಟ ಗೊಂದಲಗಳಿವೆ. ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ರಾಜ್ಯದ ಇತಿಹಾಸದಲ್ಲಿ ಸಿಎಂ ಕುಮಾರಸ್ವಾಮಿ ಅವರು 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಇಂತಹ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೂ ಒಂದು ವೇಳೆ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಹೊರಟರೇ ಅವರಿಗೆ ದೇವರ ಅನುಗ್ರಹ ಮತ್ತು ಗುರುಗಳ ಅನುಗ್ರಹ ಬೇಕು ಎಂದು ಹೇಳಿದರು.

ಕಳೆದ 3 ತಿಂಗಳಿನಿಂದ ಸರ್ಕಾರ ಬೀಳಲಿದೆ ಎಂದು ಕೆಲವರು ಕಾಯುತ್ತಿದ್ದಾರೆ. ಸರ್ಕಾರ ಬೀಳಲಿದೆ ಎಂದು ಮಹೂರ್ತ, ದಿನಾಂಕ ಫಿಕ್ಸ್ ಮಾಡಿರುವವರಿಗೆ ನಿರಾಸೆ ಕಾದಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ ಎಂದರು.

ರಾಜ್ಯದ ಇತಿಹಾಸದಲ್ಲಿ ಸಿಎಂ ಕುಮಾರಸ್ವಾಮಿ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಹಕಾರ ಪಡೆದು ಸಾಲ ಮನ್ನ ಮಾಡಿದ್ದಾರೆ. ದೊಡ್ಡಮೊತ್ತದ ಸಾಲ ಮನ್ನಾ ಮಾಡಿದಾಗ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

14 ಗಂಟೆಗಳ ಕಾಲ ರಾಜ್ಯದ ಮುಖ್ಯಮಂತ್ರಿ ಜನತಾ ದರ್ಶನ ಮಾಡಲು ಸಾಧ್ಯವಿಲ್ಲ. ಆದರೇ ಆ ಕೆಲಸವನ್ನು ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿಯವರು ಮಾಡಿದ್ದಾರೆ. ನಾನು ವಾತ್ಸಲ್ಯದಿಂದ ಹೀಗೆ ಹೇಳುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ನುಡಿದರು.

ಇದೇ ವೇಳೆ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ, ನಿಮಗೆ ಸರ್ಕಾರ ಬೀಳಲಿದೆ ಎಂಬುದು ಪ್ರಾಮುಖ್ಯತೆ ಪಡೆದಿರುವ ವಿಷಯವೇ.? ಎಂದು ಮಾಧ್ಯಮದವರನ್ನೇ ಮರು ಪ್ರಶ್ನೆ ಮಾಡಿದರು.

ಕುಮಾರಸ್ವಾಮಿ ಮಾಡಿದ ಓಳ್ಳೆ ಕೆಲಸದ ಬಗ್ಗೆ ಯಾರು ಹೇಳುತ್ತಿಲ್ಲ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಬಳಿಕ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಡವರ- ಜನಪರ ಯೋಜನೆಗಳನ್ನ ತಂದಿದ್ದಾರೆ. ಕುಮಾರಸ್ವಾಮಿ ಜನಪರ ಕೆಲಸದ ಬಗ್ಗೆ ನೀವು ಹೇಳುತ್ತಿಲ್ಲ. ಮೂರು ತಿಂಗಳಿನಿಂದ ನಾನು ಗಮನಿಸುತ್ತಿದ್ದೇನೆ. ನೀವುಗಳು ಸರ್ಕಾರ ಯಾವಾಗ ಬೀಳುತ್ತೇ ಎಂದು ಲೆಕ್ಕಾಚಾರ ಹಾಕುತ್ತಿದೀರಿ ಅಷ್ಟೆೇ ಎಂದು ಕಾರವಾಗಿ ನುಡಿದರು.

Next Story

RELATED STORIES