Top

ಫಾರಿನ್‌ನಲ್ಲೇ ಗೇಮ್ ಪ್ಲಾನ್ ಮಾಡ್ತಿದ್ದಾರಾ ಸಿದ್ದರಾಮಯ್ಯ..?

ಕಲಬುರಗಿ: ಸದ್ಯ ವಿದೇಶ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಫಾರಿನ್‌ನಲ್ಲೇ ಕೂತ್ಕೊಂಡು ಸಿಎಂ ಕುಮಾರಸ್ವಾಮಿಯನ್ನ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ಕಲಬುರಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಆಪ್ತರು ಈ ಮಾಹಿತಿ ಹೊರಹಾಕಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶದಿಂದಲೇ ಮೆಸೇಜ್ ಪಾಸ್ ಮಾಡಿದ್ದಾರೆನ್ನಲಾಗಿದೆ.

https://www.youtube.com/watch?v=Q1UGxuzLEIQ

ನನಗಾದ್ರೂ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ , ಇಲ್ಲಾ ಖರ್ಗೆಯವರಿಗಾದ್ರೂ ಈ ಸಲ ಸಿಎಂ ಮಾಡಿ. ಒಟ್ಟಾರೆ ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಮಾಜಿ ಸಿಎಂ ವಿದೇಶದಿಂದಲೇ ಮೆಸೇಜ್ ಪಾಸ್ ಮಾಡಿದ್ದಾರೆನ್ನಲಾಗಿದೆ.

ಒಟ್ಟಾರೆಯಾಗಿ ಬೆಂಬಲಿಗ ಕೈ ಶಾಸಕರ ಮೂಲಕ ಸಿದ್ದರಾಮಯ್ಯ ಗೇಮ್‌ಪ್ಲಾನ್ ಮಾಡಿದ್ದೆನ್ನಲಾಗಿದ್ದು, ಸೆಪ್ಟೆಂಬರ್ ಕ್ರಾಂತಿಗೆ ಯುರೋಪ್‌ನಲ್ಲೇ ಬ್ಲೂ ಪ್ರಿಂಟ್ ರೆಡಿಯಾಯ್ತಂತೆ.

ಹಾಸನ: ಇನ್ನೊಂದೆಡೆ ಹಾಸನದಲ್ಲಿ ಟಿವಿ5ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂದಿದ್ದು, ಸಮ್ಮಿಶ್ರ ಸರ್ಕಾರ ಕೇವಲ ಹತ್ತು ದಿನ ಉಳಿಯಲಿದ್ದು, ಹತ್ತರಿಂದ ಹನ್ನೆರಡು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಬರುವಿಕೆಗೆ ಕಾಯುತ್ತಿದ್ದು, ಕೇವಲ 15 ದಿನಗಳಲ್ಲಿ ಸರ್ಕಾರ ಉರುಳಿಸುವ ಪ್ಲಾನ್ ಮಾಡಲಾಗ್ತಿದೆಯಂತೆ. ಈ ಸ್ಪೋಟಕ ಮಾಹಿತಿಯ ಬಗ್ಗೆ ಕಾಂಗ್ರೆಸ್ ಪ್ರಭಾವಿ ವಲಯದಲ್ಲಿ ಚರ್ಚೆಯಾಗುತ್ತಿದೆ.

Next Story

RELATED STORIES