Top

ರಶ್ಮಿಕಾಗೆ ಟಾಂಗ್ ಕೊಟ್ಟ ರಕ್ಷಿತ್ ಶೆಟ್ಟಿ

ರಶ್ಮಿಕಾಗೆ ಟಾಂಗ್ ಕೊಟ್ಟ ರಕ್ಷಿತ್ ಶೆಟ್ಟಿ
X

ರಕ್ಷಿತ್- ರಶ್ಮಿಕಾ ಮದ್ವೆ ಬ್ರೇಕಪ್ ಬೆನ್ನಲ್ಲೇ ರಶ್ಮಿಕಾ ಸೀಕ್ರೆಟ್ ಆಗಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ರಕ್ಷಿತ್​ನ ಭೇಟಿ ಆಗದೇನೇ ಹೈದ್ರಾಬಾದ್​ಗೆ ತೆರಳಿರೋ ರಶ್ಮಿಕಾ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತ ರಕ್ಷಿತ್ ಕೂಡ ತಾನೂ ಸಹ ಬ್ಯುಸಿ ಇರೋದಾಗಿ ಟಾಂಗ್ ಕೊಟ್ಟಿದ್ದಾರೆ.

ಕಿರಿಕ್ ಜೋಡಿಯ ಪ್ರೀತಿ-ಪ್ರೇಮ ಕಿರಿಕ್​ಗಳಿಂದ ತಾರಕಕ್ಕೇರಿ ಬ್ರೇಕಪ್ ಮೂಲಕ ಅಂತ್ಯವಾಗಿದೆ ಅನ್ನೋದು ಹಳೇ ಸುದ್ದಿ. ಅದ್ರ ಬೆನ್ನಲ್ಲೇ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ, ಹೈದ್ರಾಬಾದ್​ನಿಂದ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಅಷ್ಟೇ ಅಲ್ಲ, ಮಾನಸಿಕ ನೆಮ್ಮದಿಗಾಗಿ ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ಕೊಟ್ಟಿರೋ ರಶ್ಮಿಕಾ ಶ್ರೀಗಳ ಆಶೀರ್ವಾದ ಪಡೆದುಬಂದಿದ್ದಾರೆ.

ರಕ್ಷಿತ್ ಜೊತೆಗಿನ ಲವ್ ಬ್ರೇಕಪ್ ಮತ್ತು ವಿಜಯ್ ದೇವರಕೊಂಡ ಜೊತೆಗಿನ ಮದ್ವೆ ಗಾಸಿಪ್​ಗಳಿಂದ ಸಿಕ್ಕಾಪಟ್ಟೆ ಡಿಸ್ಟರ್ಬ್​ ಆಗಿರೋ ರಶ್ಮಿಕಾ, ನೆಮ್ಮದಿ ಹುಡುಕಾಟದಲ್ಲಿದ್ದಾರೆ. ಅಮ್ಮನ ಜೊತೆ ಮಠಕ್ಕೆ ಭೇಟಿ ನೀಡಿ ನಂತ್ರ ಸೈಲೆಂಟ್ ಆಗಿಯೇ ಹೈದ್ರಾಬಾದ್​ಗೆ ಹಾರಿದ್ದಾರೆ. ಇನ್ನು ಗೀತಾ ಗೋವಿಂದಂ ಸಕ್ಸಸ್​ನ ನಂತ್ರ ದೇವದಾಸ್, ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ಬ್ಯುಸಿ ಇರೋ ರಶ್ಮಿಕಾ, ಎಂದಿನಂತೆ ಶೂಟಿಂಗ್ ಸೆಟ್​ಗಳಿಗೆ ಮರಳಿದ್ದಾರೆ.

ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಭರದಿಂದ ಸಾಗ್ತಿದ್ದು, ಅದು ಕಂಪ್ಲೀಟ್ ಆಗೋಕ್ಕೂ ಮೊದಲೇ ಮತ್ತೊಂದು ಹೊಸ ಚಿತ್ರದ ಲುಕ್ ಟೆಸ್ಟ್ ರಿವೀಲ್ ಮಾಡಿದ್ದಾರೆ ರಕ್ಷಿತ್. ಸ್ವತಂತ್ರಪೂರ್ವ ಭಾರತದಲ್ಲಿ ನಡೆಯೋ ಡಿಟೆಕ್ಟೀವ್ ಥ್ರಿಲ್ಲರ್ ಕಥಾನಕವೊಂದರಲ್ಲಿ ಡಿಟೆಕ್ಟೀವ್ ಆಫೀಸರ್ ಪಾತ್ರದಲ್ಲಿ ರಕ್ಷಿತ್ ಕಾಣಸಿಗಲಿದ್ದಾರೆ.

ಗೋಧಿಬಣ್ಣ ಚಿತ್ರದ ನಂತ್ರ ಹೇಮಂತ್ ರಾವ್ ನಿರ್ದೇಶನದಲ್ಲಿ ತಯಾರಾಗಲಿರೋ ಈ ಚಿತ್ರಕ್ಕೆ ತೆನಾಲಿ ಅಂತ ಟೈಟಲ್ ಕೂಡ ಫಿಕ್ಸ್ ಆಗಿದ್ದು, ರಕ್ಷಿತ್ ಲುಕ್ ಟೆಸ್ಟ್ ಸಖತ್ ವೈರಲ್ ಆಗಿದೆ. ಸದ್ಯ ಕವಲುದಾರಿಯಲ್ಲಿ ಬ್ಯುಸಿ ಇರೋ ಹೇಮಂತ್, ಇದಾಗ್ತಿದ್ದಂತೆ ತೆನಾಲಿ ವರ್ಕ್​ ಶುರು ಮಾಡಲಿದ್ದಾರಂತೆ. ಆದ್ರೆ ರಕ್ಷಿತ್ ಮಾತ್ರ ರಶ್ಮಿಕಾಗೆ ತಾನು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋದನ್ನ ಈ ಸ್ಟಿಲ್ ಫೋಟೋ ಮೂಲಕ ಟಾಂಗ್ ಕೊಟ್ಟು ಹೇಳಿದಂತಿದೆ.

ಇನ್ನು ಬ್ರೇಕಪ್ ರಿಲ್ಯಾಕ್ಸ್​ಗಾಗಿ ಗೆಳೆಯರೊಂದಿಗೆ ರಕ್ಷಿತ್ ಥಾಯ್ಲೆಂಡ್​ ಟೂರ್​ನಲ್ಲಿದ್ದಾರೆ. ಅದೇನೇ ಇರಲಿ, ಸದ್ಯ ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರೂ ಸಹ ಒಳ್ಳೊಳ್ಳೆ ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದು, ಇಬ್ಬರಿಗೂ ನಿರೀಕ್ಷೆಗೆ ಮೀರಿದಂತಹ ಸಕ್ಸಸ್ ಸಿಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES