Top

'ಸಿದ್ದರಾಮಯ್ಯ ಬರ್ಲಿ ಹೇಳ್ತೀನಿ'- ಸಚಿವರ ಅಸಮಾಧಾನ

ಸಿದ್ದರಾಮಯ್ಯ ಬರ್ಲಿ ಹೇಳ್ತೀನಿ- ಸಚಿವರ ಅಸಮಾಧಾನ
X

ಮೈಸೂರು: ದಸರಾ ಮಹೋತ್ಸವದ ಆರಂಭದಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.

ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯುವಾಗ, ಅಸಮಾಧಾನಗೊಂಡ ಕಾಂಗ್ರೆಸ್ ಸಚಿವ ಪುಟ್ಟರಂಗ ಶೆಟ್ಟಿ ಹೊರನಡೆದಿದ್ದಾರೆ. ಸಚಿವ ಜಿ.ಟಿ.ದೇವೇಗೌಡರನ್ನು ಬಿಟ್ಟರೆ ನಾನೇ ಸೀನಿಯರ್. ಆದರೆ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಪುಟ್ಟರಂಗ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಶಿಷ್ಠಾಚಾರ ಉಲ್ಲಂಘನೆಯಾಗಿದೆ ನಾನೇಕೆ ಸಭೆಯಲ್ಲಿರಬೇಕು. ಪೋಸ್ಟರ್ ನಲ್ಲಿ ಸಚಿವ ಜಿಟಿಡಿ, ಸಾರಾ ಮಹೇಶ್, ಸಚಿವೆ ಜಯಮಾಲಾ ಫೋಟೋಗಳಿವೆ. ಆದರೆ ನನ್ನ ಪೋಟೋ ಮಾತ್ರ ಇಲ್ಲ. ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಬರ್ಲಿ ಹೇಳ್ತೀನಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇವತ್ತು ಸಂಜೆಯವರೆಗೂ ಟೈಂ ಕೊಟ್ಟಿದ್ದೀನಿ ಸರಿಮಾಡಿಕೊಳ್ಳೊಕ್ಕೆ. ನಮಗೆ ತುಂಬಾನೆ ಅವಮಾನವಾಗ್ತಿದೆ. ಈಗ ಆಗಿರೋ ಅವಮಾನದ ಬಗ್ಗೆ ಸಮನ್ವಯ ಸಮಿತಿಯಲ್ಲಿ ಮಾತಾಡ್ತೀನಿ. ನನ್ ಪೊಟೋನೆ ಇಲ್ಲಾ ಅಂದ್ಮೆಲೆ ನಾನ್ ಯಾಕಿರ್ಬೇಕು ಅಲ್ಲಿ. ಎಲ್ಲಾನೂ ಅವ್ರವ್ರೆ ಮಾಡ್ಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಸಚಿವರ ವಿರುದ್ಧ ಕಾಂಗ್ರೆಸ್ ಸಚಿವ ಪುಟ್ಟರಂಗ ಶೆಟ್ಟಿ ಗರಂ ಆಗಿದ್ದಾರೆ.

Next Story

RELATED STORIES