Top

ಮಹಾರಾಜರ ಕಾಲದ ಉದ್ಯಾನವನ ಈಗ ಕುಡಕರ ಅಡ್ಡ.!

ಮಹಾರಾಜರ ಕಾಲದ ಉದ್ಯಾನವನ ಈಗ ಕುಡಕರ ಅಡ್ಡ.!
X

ಬೀದರ್ : ಅದು ಮೈಸೂರು ರಾಜರು ಆಡಳಿತ ನಡೆಸಿದದಿನಗಳು. ಆಗಿನ ಕಾಲದಲ್ಲಿ ಬೀದರ್ ನಗರದ ಹೃದಯಭಾಗ ವೆನಿಸಿಕೊಂಡಿದ್ದ ದರ್ಜಿಗಲ್ಲಿಯಲ್ಲಿ ಸುಮಾರು 5 ಎಕರೆ ಜಾಗದಲ್ಲಿ 1961 ರಲ್ಲಿ ನಿರ್ಮಾಣವಾಗಿತ್ತು.

ಮೈಸೂರು ಸರ್ಕಾರದ ಅವಧಿಯ ಹಣಕಾಸು ಸಚಿವ ಜೆ.ಹೆಚ್.ಶಂಶೂದ್ದಿನ್ ಅವ್ರ ಅಮೃತ ಹಸ್ತದಿಂದ ಸಾರ್ವಜನಿಕರ ಉದ್ಯಾನವನ ಆರಂಭವಾಗಿತ್ತು. ಅಂದಿನಿಂದ ಉದ್ಯಾನವನದಲ್ಲಿ ಪ್ರಾಣಿ ಸಂಗ್ರಹಾಲಯವಾಗಿ ಮಾರ್ಪಟ್ಟಿತ್ತು. ಈ ಮೂಲಕ ಸಾರ್ವಜನೀಕರಿಗೆ ಮರಂಜನೆ ನೀಡುತ್ತಿದ್ದ ತಾಣವಾಗಿತ್ತು.

ಆದ್ರೇ ಕಳೆದ ಹಲವು ವರ್ಷಗಳಿಂದ ಈ ಉದ್ಯಾನನವನ ಸರಿಯಾದ ನಿರ್ವಹಣೆ ಇಲ್ಲದ ಕಾರಣ, ಹಾಳು ಕೊಂಪೆಯಾಗಿದೆ. ಈ ಮೂಲಕ ಸಾರ್ವಜನಿಕ ಉದ್ಯಾನವನ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ.

60 ವರ್ಷಗಳ ಪುರಾತನವಾಗಿದ್ದ ಪಬ್ಲಿಕ್ ಗಾರ್ಡನ್ ಹಾಳು ಬಿದ್ದಿದ್ದು. ಇಲ್ಲಿ ವಯಸ್ಕರಿಗೂ ಹಾಗೂ ಮಕ್ಕಳಿಗೂ ವಾಯುವಿಹಾರಕ್ಕೂ ಬ್ರೇಕ್ ಬಿದ್ದಿದ್ದು, ಗಾರ್ಡ್ ಸಂಪೂರ್ಣವಾಗಿ ಗೇಟ್ ಬೀಗ ಹಾಕಿದ್ದ ಬಗ್ಗೆ ಟಿವಿ5ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ನಮ್ಮ ಟಿವಿ5 ತಂಡ ಭೇಟಿ ನೀಡಿತು.

ಆದರೇ ಸಾರ್ವಜನಿಕ ಉದ್ಯಾನವನಕ್ಕೆ ಬೀಗ ಹಾಗಿದ್ದು, ಗೇಟ್ ಮೇಲಿಂದಲ್ಲೇ ಸಾರ್ವಜನೀಕರು ಹಾರಿ ಪಾರ್ಕ್ ಒಳಗೆ ಹೋಗುತ್ತಿರುವ ದೃಶ್ಯಗಳು ಕಂಡು ಬಂದವು.. ಇದನ್ನ ಪ್ರಶ್ನಿಸಿದ್ದಕ್ಕೆ ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ್‌ ಸೇರಿದಂತೆ ಇತರರು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡೆಸಿದ್ರು.

ಇನ್ನು ಇತ್ತ ನಗರ ಸಭೆ ಪೌರಾಯುಕ್ತರಾದ ಮನೋಹರ್ ಅವ್ರನ್ನ ನಮ್ಮ ಟಿವಿ5 ತಂಡ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಬರುವಂತೆ ಕರೆ ಮಾಡಿದ್ರು. ಟಿವಿ5 ತಂಡ ಮಾಡಿದ್ದ ಕರೆಗೆ ಒಗ್ಗೊಟ್ಟು ಕೂಡಲೇ ಸ್ಥಳಕ್ಕೆ ಬಂದ ನಗರ ಸಭೆ ಪೌರಾಯುಕ್ತ ಮನೋಹರ್ ಉದ್ಯಾನವವನ್ನ ಪರಿಶೀಲಿಸಿ ಪಾರ್ಕ್ ಸುಪರ್ ವೈಸರ್ ಅವರನ್ನ ತರಾಟೆಗೆ ತೆಗೆದುಕೊಂಡರು.

ಪಬ್ಲಿಕ್ ಗಾರ್ಡ್ ನಲ್ಲಿ ಕೆಲ ಕಿಡಿಗೇಡಿಗಳು ಬೇದರಿಗೆ ಹಾಕುತ್ತಿದ್ದಾರೆ. ಜೊತೆಗೆ ಇಲ್ಲಿ ಕೆಲಸ ನಿರ್ವಹಿಸಲು ಸಿಬ್ಬಂದಿಗಳು ಇಲ್ಲಾ ಎಂದು ಸುಪರ್ ವೈಸರ್ ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ರು. ಇದನ್ನ ಆಲಿಸಿದ ನಗರಸಭೆ ಪೌರಾಯುಕ್ತರು ನಾಲ್ಕು ದಿನದಲ್ಲೇ ಇದ್ದನ ಸ್ವಚ್ಚಗೊಳಿಸಿ ಜನ್ರು ಈ ಪಾರ್ಕ್ ಅನ್ನು ಉಪಯೋಗಿಸುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಕೈಗೊಳ್ಳುವುದಾಗಿ ಎಚ್ಚರಿಗೆ ನೀಡಿದರು.

ಅದೇನೇ ಇರಲಿ ಸರ್ಕಾರ ಸಾರ್ವಜನಿಕರಿಗಾಗಿ ಹೊಸ ಹೊಸ ಉದ್ಯಾನವ ನಿರ್ಮಿಸಲು ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದೆ, ಆದ್ರೇ ಇದ್ದ ಒಂದು ಹಳೆ ಪಾರ್ಕ್ ನಿರ್ವಹಣೆಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತೊರಿದ್ದು, ವಿಪರ್ಯಾಸವೆ ಸರಿ.

ವರದಿ : ವಿಶ್ವಕುಮಾರ್, ಟಿವಿ5 ಬೀದರ್

Next Story

RELATED STORIES