Top

ಬಿಜೆಪಿಯ 104 ಶಾಸಕರಲ್ಲಿ ಒಬ್ಬರನ್ನು ಮುಟ್ಟಲಿ ನೋಡೋಣ.!

ಬಿಜೆಪಿಯ 104 ಶಾಸಕರಲ್ಲಿ ಒಬ್ಬರನ್ನು ಮುಟ್ಟಲಿ ನೋಡೋಣ.!
X

ಬಾಗಲಕೋಟೆ : ಒಂದು ಕಡೆ ಕಾಂಗ್ರೆಸ್‌ ಬಿಜೆಪಿಯವರಿಗೆ ಗಾಳದ ವಿಚಾರ, ಮತ್ತೊಂದು ಕಡೆ ಜೆಡಿಎಸ್‌ ನ ಶಾಸಕರಿಗೆ ಬಿಜೆಪಿ ಗಾಳ, ಮಗದೊಂದೆಡೆ ಬಿಜೆಪಿ ಐವರು ಶಾಸಕರಿಗೆ ಜೆಡಿಎಸ್ ಗಾಳ.

ಈ ಎಲ್ಲ ರಾಜಕೀಯ ಪಕ್ಷಗಳ ಅಪರೇಷನ್‌ಗಳ ನಡುವೆ, ಇದೀಗ ಬಿಜೆಪಿಯ 104 ಶಾಸಕರಲ್ಲಿ ಒಬ್ಬರನ್ನು ಮುಟ್ಟಲಿ ನೋಡೋಣ ಎಂದು ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರುತ್ತಾರೆ ಅನ್ನೋದು ಹುಸಿಬಾಂಬ್‌, ಇದು ಬರಿ ಹುಸಿಬಾಂಬ್‌ ಅಷ್ಟೇ.

ಸುಮ್ಮನೇ ನಮ್ಮ ಜೊತೆಗೆ 10 ಜನ ಬಿಜೆಪಿ ಶಾಸಕರು ಬರುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ.

ಇದೇ 18ಕ್ಕೆ ಬಿಜೆಪಿಯ ವಿಶೇಷ ಶಾಸಕಾಂಗ ಸಭೆ ಕರೆಯಲಾಗಿದೆ. ಈ ಸಭೆಯ ನಂತ್ರ ಸ್ಪಷ್ಟ ಚಿತ್ರಣ ಸಿಗಲಿದೆ. ಅಪರೇಷನ್‌ ಕಮಲದ ಬಗ್ಗೆ ಮೊದಲು ಕೆಟ್ಟ ಭಾವನೆ ಇತ್ತು. ಈ ಎಲ್ಲಾ ಬದಲಾದ ಚಿತ್ರಣ ನೋಡಿದರೇ, ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿ ಎನ್ನುತ್ತಿದ್ದಾರೆ ಜನ.

ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ಯಾರು ಯಾವ ಪಕ್ಷಕ್ಕೂ ಹೋಗೋದಿಲ್ಲ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಒಂಭತ್ತು ಶಾಸಕರು ಬೇಕು... ಅಷ್ಟು ಜನರು ನಮ್ಮ ಕಡೆಗೆ ಬಂದಾಗ ಸುಮ್ಮನಿರೋಕಾಗುತ್ತ? ಎಂದು ಪ್ರಶ್ನೆ ಮಾಡಿದರು.

ಇನ್ನೂ ಇದೇ ವೇಳೆ ಶಾಸಕ ವೀರಣ್ಣ ಚರಂತಿಮಠ, ತಾಕತ್ ಇದ್ದರೆ ಬಿಜೆಪಿಯ ಒಬ್ಬ ಶಾಸಕರನ್ನು ಸೆಳೆಯಲಿ ನೋಡೋಣ ಎಂದು ಸವಾಲ್ ಹಾಕಿದರು.

Next Story

RELATED STORIES