Top

ಬೇಸಿಗೆ ಮುನ್ನವೇ ಬರಗಾಲದ ಛಾಯೆ : ಜಾನುವಾರಗಳ ಮೇವಿಗಾಗಿ ಗುಳೆ

ಬೇಸಿಗೆ ಮುನ್ನವೇ ಬರಗಾಲದ ಛಾಯೆ : ಜಾನುವಾರಗಳ ಮೇವಿಗಾಗಿ ಗುಳೆ
X

ಚಿತ್ರದುರ್ಗ : ಕೋಟೆನಾಡು ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದ್ದು, ಮೇವು ಅರಸಿ ಜಾನುವಾರುಗಳೊಂದಿಗೆ ರೈತರು ಬೆಟ್ಟಗುಡ್ಡ ಅಲೆಯುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮನವರಹಟ್ಟಿ ಗ್ರಾಮದ ಪಶುಪಾಲಕ ತಮ್ಮಯ್ಯ ಗೋವುಗಳೊಂದಿಗೆ ಜೋಗಿಮಟ್ಟಿ ಗಿರಿಧಾಮದಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ 35 ಜಾನುವಾರುಗಳೊಂದಿಗೆ 40 ಕಿ.ಮೀ. ದೂರದ ಹಳ್ಳಿಯಿಂದ ಬಂದು ತಿಂಗಳು ಸಮೀಪಿಸುತ್ತಿದೆ.

ತಮ್ಮಯ್ಯ ಅವರನ್ನು ಅನುಸರಿಸಲು ಈ ಗ್ರಾಮದ ಇತರರು ಸಜ್ಜಾಗಿದ್ದಾರೆ. ಮುಂಗಾರು ಆರಂಭದಲ್ಲಿ ಸ್ವಲ್ಪ ಮಳೆ ಬಂದಿತ್ತು. ಆಗ ಒಂದಷ್ಟು ಬಿತ್ತನೆ ಕಾರ್ಯ ಮಾಡಲಾಯಿತು. ನಂತರ ಯಾವ ಮಳೆಯೂ ಬರಲಿಲ್ಲ. ಬೆಳೆಯೂ ಒಣಗಿದೆ. ಇದರಿಂದ ಜಾನುವಾರುಗಳಿಗೂ ಮೇವಿನ ಕೊರತೆ ಉಂಟಾಗಿದೆ.

ಓಡುವ ಮೋಡಗಳತ್ತ ನೋಟ ಬೀರಿತ್ತಾರೆ ತಮ್ಮಯ್ಯ. ಊರು ತೊರೆದು ಹಸುಗಳೊಂದಿಗೆ ಕಾಲ್ನಡಿಗೆಯಲ್ಲೇ ಓಡಾಡುವ ಇವರು ಅರಣ್ಯದ ಸಮೀಪ ರಾತ್ರಿ ಬಿಡಾರ ಹೂಡಿದ್ದಾರೆ. ರಾತ್ರಿ ವೇಳೆ ಸಂಪೂರ್ಣ ನಿದ್ರೆಗೆ ಜಾರುವಂತಿಲ್ಲ.

ಇವರ ಬಿಡಾರಕ್ಕೆ ನುಗ್ಗಿದ ಗುಂಪೊಂದು ಈಚೆಗೆ ಹಸುವೊಂದನ್ನು ಕಳವು ಮಾಡಿದೆ. ಈ ನೋವು ಅವರ ನಿದ್ದೆಯನ್ನು ಕಸಿದುಕೊಂಡು, ಈಗ 32 ದನಗಳು ಉಳಿದಿವೆ. ಈ ಬಾರಿಯೂ ಬರದ ಛಾಯೆ ಮೂಡಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ ಎಂದು ಅಳಲು ತೊಡಿಕೊಂಡರು.

ಬಹುತೇಕರು ಪಶುಪಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೇವಿಲ್ಲದೆ ಊರಿನಲ್ಲಿಯೇ ಪರದಾಡುತ್ತಿದ್ದಾರೆ. ತಮ್ಮಯ್ಯ ಅವರಂತೆ ಜಾನುವಾರುಗಳೊಂದಿಗೆ ಬೆಟ್ಟಗುಡ್ಡಗಳ ಹಾದಿ ಹಿಡಿಯುತ್ತಿದ್ದಾರೆ. ಮೇವಿಲ್ಲದೆ ಬಹುತೇಕ ಜಾನುವಾರುಗಳು ಬಡಕಲಾಗುತ್ತಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 8 ವಾರಕ್ಕೆ ಆಗುವಷ್ಟು ಮಾತ್ರ ಮೇವು ಇದೆ. ಮೇವಿನ ಲಭ್ಯತೆಯ ಕುರಿತು ರೈತರ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದೇವೆ.

ಪಶುಪಾಲನೆಯಲ್ಲಿ ತೊಡಗಿದ ಇವರು ಹಾಲು ಮಾರಾಟ ಮಾಡುವುದಿಲ್ಲ. ಹಸು, ಕರು ಹಾಗೂ ಗೊಬ್ಬರ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಾರೆ. ಇದೀಗ ಸರ್ಕಾರ ಇವರ ನೇರವಿಗೆ ಬಾರದೆ ಹೊದರೆ ರಾಸುಗಳ ಪರಿಸ್ಥಿತಿ ಹೇಳತಿರದಾಗುತ್ತದೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5​ ಚಿತ್ರದುರ್ಗ

Next Story

RELATED STORIES