Top

ಅ.10ರಿಂದ 19ರ ವರೆಗೆ ಮೈಸೂರು ದಸರಾ : ವಿದೇಶದಲ್ಲೂ ನಾಡಹಬ್ಬದ ಪ್ರಚಾರ.!

ಅ.10ರಿಂದ 19ರ ವರೆಗೆ ಮೈಸೂರು ದಸರಾ : ವಿದೇಶದಲ್ಲೂ ನಾಡಹಬ್ಬದ ಪ್ರಚಾರ.!
X

ಮೈಸೂರು : ನಾಡಹಬ್ಬ ದಸರಾ ಹಬ್ಬ ವರ್ಷದಿಂದ ವರ್ಷಕ್ಕೆ ಕಳೆ ಗಟ್ಟುತ್ತಿದೆ. ಈ ಕುರಿತು ಮೈಸೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೆ.14ರಂದು ನಡೆದ ದಸರಾ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪಾರಂಪರಿಕ ದಸರಾಗೆ ಹೆಚ್ಚು ಹೊತ್ತು ನೀಡಲು ಕಾರ್ಯಕಾರಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ, ಸಾರಾ ಮಹೇಶ್ ಹಾಗೂ ಎನ್ ಮಹೇಶ್‌ ಅವರನ್ನು ದಸರಾ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. 25 ಕೋಟಿ ವೆಚ್ಚದಲ್ಲಿ ದಸರಾ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಜಿ ಟಿ ದೇವೇಗೌಡ ಮಾಹಿತಿ ನೀಡಿದರು.

ಈ ಸಭೆಯ ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಇದೇ ಮೊದಲ ಬಾರಿಗೆ ಸಮಿತಿ ಸಭೆಯಲ್ಲಿ ದಸರಾ ಪ್ರಚಾರಕ್ಕೆ ವಿದೇಶದಲ್ಲೂ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ.

ಇದರಂತೆ ಲಂಡನ್‌, ಪ್ಯಾರೀಸ್‌ ಹಾಗೂ ದುಬೈನಲ್ಲಿ Rally ನಡೆಸುವ ಮೂಲಕ, ಮೈಸೂರು ದಸರಾಗೆ ಪ್ರಚಾರ ನೀಡಲಿದ್ದೇವೆ.

ಈ ಪ್ರಚಾರಕ್ಕೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳೇ ಖುದ್ದು ತೆರಳಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಈಗಾಗಲೇ ವಿದೇಶದಲ್ಲೂ ಮಹತ್ವದ ಪ್ರಚಾರ ಪಡೆದಿರುವ ನಾಡ ಹಬ್ಬಕ್ಕೆ, ಮತ್ತಷ್ಟು ಪ್ರಚಾರ ನೀಡಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಈ ಮೂಲಕ ದಸರಾ ಹಬ್ಬವನ್ನು ವಿದೇಶದಲ್ಲೂ ಪ್ರಚಾರ ಮಾಡಿ, ದಸರಾಗೆ ವಿದೇಶಿಗರನ್ನು ಹೆಚ್ಚಾಗಿ ಆಕರ್ಷಿಸುವ ಪ್ಲಾನ್‌ ರೂಪಿಸಿದೆ.

Next Story

RELATED STORIES