Top

ಕಾಂಗ್ರೆಸ್ ವಿರುದ್ಧ ಜಾತಿನಿಂದನೆ ಆರೋಪ: ದೂರು ದಾಖಲು

ಕಾಂಗ್ರೆಸ್ ವಿರುದ್ಧ ಜಾತಿನಿಂದನೆ ಆರೋಪ: ದೂರು ದಾಖಲು
X

ಚಿಕ್ಕಮಗಳೂರು: ಕಾಂಗ್ರೆಸ್‌ಗೆ ದಲಿತರ ಓಟ್ ಬೇಕು, ಅವರು ತಯಾರಿಸಿದ ಊಟ ಬೇಡ ಎಂದು ಚಿಕ್ಕಮಗಳೂರಿನಲ್ಲಿ ದಲಿತರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಚೌಡಿಕಟ್ಟೆ ಗ್ರಾಮದಲ್ಲಿ ವಾರ್ಷಿಕ ಕ್ರೀಡಾ ಉತ್ಸವದ ವೇಳೆ, ದಲಿತರು ಅಡುಗೆ ಮಾಡಿದ್ದು, ಈ ಊಟ ಮಾಡಲು ಕಾಂಗ್ರೆಸ್ ಮುಖಂಡರು ಹಿಂಜರಿದಿದ್ದಾರೆ.

ದಲಿತರು ಅಡುಗೆ ಮಾಡಬಾರದು, ಅಡುಗೆ ಮಾಡಲು ಈ ಜಾತಿಯವರೇ ಬೇಕೆಂದು ತಾಕೀತು ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ದಲಿತರು, ಕಾಂಗ್ರೆಸ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ಗೆ ನಮ್ಮ ಓಟ್ ಬೇಕು. ಆದರೆ ನಾವು ತಯಾರಿಸಿದ ಊಟ ಬೇಡ. ಇನ್ನು ಮುಂದೆ ಓಟ್ ಕೇಳಲು ಯಾವ ರಾಜಕಾರಣಿಯೂ ಚೌಡಿಕಟ್ಟೆಗೆ ಬರಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ, ಮುಖಂಡರಿಂದ ದೂರು ನೀಡದಂತೆ ಬೆದರಿಕೆ ಬಂದಿದೆ.

ಮೊದಲು ಒತ್ತಡಕ್ಕೆ ಮಣಿದ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು, ನಂತರ ಕಾಂಗ್ರೆಸ್ ಮುಖಂಡ ಸತೀಶ್ ಸೇರಿ ಹಲವರ ವಿರುದ್ಧ ದೂರು ದಾಖಲಿಸಿಕೊಂಡರು.ಜಾತಿ ನಿಂದನೆಯಡಿ ಯುವಕರು ದೂರು ದಾಖಲಿಸಿದ್ದಾರೆ. ಠಾಣೆಯ ಮುಂದೆ ದಲಿತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸ್ಥಳೀಯರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.

Next Story

RELATED STORIES