Top

ಫ್ಯಾನ್ಸ್‌ಗೆ ಅಂಬಿ-ಕಿಚ್ಚ ಕೊಟ್ಟ ಡಬಲ್ ನ್ಯೂಸ್ ಏನ್ ಗೊತ್ತಾ..?

ಫ್ಯಾನ್ಸ್‌ಗೆ ಅಂಬಿ-ಕಿಚ್ಚ ಕೊಟ್ಟ ಡಬಲ್ ನ್ಯೂಸ್ ಏನ್ ಗೊತ್ತಾ..?
X

ಟೀಸರ್ ಮತ್ತು ಮೇಕಿಂಗ್​ನಿಂದಲೇ ಎಲ್ಲಿಲ್ಲದ ಹೈಪ್ ಕ್ರಿಯೇಟ್ ಮಾಡಿರೋ ವೀರಪರಂಪರೆ ಜೋಡಿ, ಅಭಿಮಾನಿಗಳಿಗೆ ತಾಜಾ ನ್ಯೂಸ್ ಕೊಟ್ಟಿದ್ದಾರೆ. ರೆಬೆಲ್ ಸ್ಟಾರ್ ಅಂಬಿ- ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೊಟ್ಟ ಆ ಡಬಲ್ ಸ್ವೀಟ್ ನ್ಯೂಸ್ ಬಗ್ಗೆ ಒಂದು ವರದಿ ಇಲ್ಲಿದೆ ಓದಿ.

ಅಂಬಿ ನಿಂಗ್ ವಯಸ್ಸಾಯ್ತೋ.. ಸ್ಯಾಂಡಲ್​ವುಡ್ ಅಂಗಳದ ಒನ್ ಆಫ್ ದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ. ಬಿಗ್ ಮಲ್ಟಿಸ್ಟಾರರ್ ಆಗಿರೋ ಈ ಸಿನಿಮಾ ಟೀಸರ್ ಮತ್ತು ಮೇಕಿಂಗ್​ನಿಂದ ಸಿನಿಪ್ರಿಯರಲ್ಲಿ ಎಲ್ಲಿಲ್ಲದ ಕ್ರೇಜ್ ಹುಟ್ಟಿಸಿದೆ. ಅದ್ರಲ್ಲೂ ಅಂಬಿ ಕಂಬ್ಯಾಕ್ ಸಿನಿಮಾ ಅನ್ನೋ ಕಾರಣಕ್ಕೆ ಇದು ಬೇರೆಯದ್ದೇ ರೀತಿಯ ಹೈಪ್ ಕ್ರಿಯೇಟ್ ಮಾಡಿದೆ.

ಅಂಬರೀಶ್, ಸುದೀಪ್, ಸುಹಾಸಿನಿ ಅಂತಹ ಘಟಾನುಘಟಿ ಕಲಾವಿದರಿರೋ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಆಡಿಯೋ ಹಾಗೂ ರಿಲೀಸ್ ಡೇಟ್ ರಿವೀಲ್ ಆಗಿದೆ. ಇದೇ ಸೆಪ್ಟೆಂಬರ್ 16ಕ್ಕೆ ಚಿತ್ರದ ಆಡಿಯೋ ಲಾಂಚ್ ಹಾಗೂ ತಿಂಗಳಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡೋ ಸೂಚನೆ ಕೊಟ್ಟಿದೆ ಜಾಕ್ ಮಂಜು ಅಂಡ್ ಟೀಂ.

ಮೈಸೂರ್ ಟಾಕೀಸ್ ಬ್ಯಾನರ್​ನಡಿ ಜಾಕ್ ಮಂಜು ನಿರ್ಮಿಸಿರೋ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನ ಸುದೀಪ್ ಗರಡಿಯಲ್ಲಿ ಪಳಗಿದ ಗುರುದತ್ತ ಗಾಣಿಗ ನಿರ್ದೇಶಿಸಿದ್ದಾರೆ. ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಇದೇ ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲೊಂದರಲ್ಲಿ ಗ್ರ್ಯಾಂಡ್ ಆಡಿಯೋ ಲಾಂಚ್ ಫಂಕ್ಷನ್ ನಡೆಯಲಿದೆ.

ಅಂಬಿ-ಸುದೀಪ್ ಜುಗಲ್ಬಂದಿಯ ಚಿತ್ರ ಇದಾದ್ದರಿಂದ ದರ್ಶನ್ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಸ್​ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇನ್ನು ಆಡಿಯೋ ಲಾಂಚ್​ನಲ್ಲೇ ಈ ತಿಂಗಳಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡೋ ವಿಚಾರ ಕೂಡ ಚಿತ್ರತಂಡ ಅನೌನ್ಸ್ ಮಾಡಲಿದೆಯಂತೆ.

ಸಿನಿಮಾ ಮೇಲಿನ ಪ್ರೀತಿಯಿಂದ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದ ಜಾಕ್ ಮಂಜು, ಡಿಸ್ಟ್ರಿಬ್ಯೂಷನ್​ಗೆ ಸೀಮಿತವಾಗಿದ್ರು. ಆದ್ರೀಗ ಅಂಬಿಯನ್ನ ಮತ್ತೆ ತೆರೆಮೇಲೆ ತರೋದಕ್ಕಾಗಿ ಕಿಚ್ಚನ ಜೊತೆ ಕೈಜೋಡಿಸಿ ನಿರ್ಮಾಣಕ್ಕೆ ಇಳಿದಿರೋದು ವಿಶೇಷ. ಅಂದಹಾಗೆ ಜಾಕ್ ಮಂಜುಗಿರೋ ಸಿನಿಮಾ ಫ್ಯಾಷನ್ ಟೀಸರ್ ಮತ್ತು ಮೇಕಿಂಗ್​ನಿಂದ ಎದ್ದು ಕಾಣ್ತಿದ್ದು, ಬಾಕ್ಸ್ ಆಫೀಸ್​ನ ಇದು ಯಾವ ರೀತಿ ಬ್ಯಾಂಗ್ ಮಾಡುತ್ತೆ ಅಂತ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES