ನವಜಾತ ಶಿಶುವನ್ನ ಬೇಲಿಯಲ್ಲಿ ಬಿಸಾಕಿ ಹೋದ ಪಾಪಿಗಳು.!

ಯಾದಗಿರಿ : ಆಗತಾನೆ ಹುಟ್ಟಿದ ಮಗುವನ್ನು, ಗ್ರಾಮದ ಬೇಲಿಯೊಂದರಲ್ಲಿ ಎಸೆದು ಹೋಗಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ವಂಕಸಂಬ್ರ ಗ್ರಾಮದಲ್ಲಿ ನಡೆದಿದೆ.
ದೂರದಲ್ಲಿ ಎಲ್ಲೋ ಮಗುವಿನ ಅಳುವಿನ ಧ್ವನಿ. ಆಕ್ರಂದನದ ಮುಗಿಲು. ಅಯ್ಯೋ... ಎಲ್ಲೋ ಮಗು ಅಳುವ ಧ್ವನಿ. ನೋಡೋಣ ಬನ್ನಿ ಎಂದು ಹೊರಟ ವಂಕಸಂಬ್ರ ಗ್ರಾಮದ ಜನರು.
ಹೀಗೆ ಘಟನೆಗೆ ಸಾಕ್ಷಿಯಾಗಿದ್ದು, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ವಂಕಸಂಬ್ರ ಗ್ರಾಮದಲ್ಲಿ. ಬೆಳಿಗ್ಗೆ ಬಹಿರ್ದೆಸೆಗೆ ತೆರಳಿದ್ದಾಗ ಕಂಡುಬಂದ ಹಸುಗೂಸಿನ ಅಳುವಿನ ಧ್ವನಿಗೆ, ಇಡೀ ಗ್ರಾಮವೇ ಶಾಕ್ ಆಗಿತ್ತು.
ಹೌದು.. ಕಳೆದ ಒಂದು ದಿನಗಳ ಹಿಂದೆ ಜನಿಸಿದ್ದ ಮಗುವೊಂದನ್ನು, ಯಾರೋ ಗ್ರಾಮದ ಮುಳ್ಳು ಬೇಲಿಯಲ್ಲಿ ಎಸೆದು ಹೋಗಿದ್ದರು. ಈ ಮಗುನಿವ ಅಕ್ರಂದನ ಕೇಳಿದ ಬಹಿರ್ದೆಸೆಗೆ ತೆರಳಿದ್ದ ಜನರು, ಮಗು ರಕ್ಷಣೆ ಮಾಡಿ ಗ್ರಾಮಕ್ಕೆ ತಂದಿದ್ದಾರೆ.
ವಂಕಸಂಬ್ರ ಗ್ರಾಮದ ಜನರು, ಹೆಣ್ಣು ಮಗುವನ್ನು ಕಂಡು, ಮಗುವಿಗೆ ಸ್ನಾನ ಮಾಡಿಸಿ, ಹಾಲು ಕುಡಿ, ಹೊಸ ಬಟ್ಟೆ ತೊಡಿಸಿ, ಹಾರೈಕೆ ಮಾಡಿ, ಜೋಲಿ ಹಾಕಿ, ಜೋಪಾನ ಮಾಡಿದ್ದಾರೆ.
ಸದ್ಯ ಮಗು ಗ್ರಾಮಸ್ಥರೊಬ್ಬರು ಹಾರೈಕೆ ಮಾಡುತ್ತಿದ್ದು, ಆರೋಗ್ಯದಿಂದ ಇದೆ. ಈ ಸಂಬಂಧ ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.