Top

ಸಮ್ಮಿಶ್ರ ಸರ್ಕಾರಕ್ಕೆ ಸ್ಥಿರತೆಯಿಲ್ಲ: ಭವಿಷ್ಯ ನುಡಿದ ಶ್ರೀಗಳು

ಸಮ್ಮಿಶ್ರ ಸರ್ಕಾರಕ್ಕೆ ಸ್ಥಿರತೆಯಿಲ್ಲ: ಭವಿಷ್ಯ ನುಡಿದ ಶ್ರೀಗಳು
X

ರಾಯಚೂರು: ರಾಜ್ಯದ ಸಮ್ಮಿಶ್ರ ಸರ್ಕಾರದ ಬಗ್ಗೆ ಈ ಹಿಂದೆ ಕೋಡಿಶ್ರೀಗಳು ಭವಿಷ್ಯ ನುಡಿದಂತೆ, ಮೂರುಸಾವಿರ ಮಠದ ಶ್ರೀಗಳೂ ಕೂಡ ಭವಿಷ್ಯ ನುಡಿದಿದ್ದಾರೆ.

ಈಗ ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿ ಇನ್ನೊಂದು ಕಡೆ ಅನಾವೃಷ್ಠಿ ಇದೆ, ಈ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಿ ಕೆಲವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಇದನ್ನೆಲ್ಲ ಬಿಟ್ಟು, ರಾಜಕಾರಣಿಗಳು ನಾಡಿನ ಜನತೆಯ ಸಂಕಷ್ಟಕ್ಕೆ ಭಾಗಿಯಾಗಬೇಕೆಂದು ಹುಬ್ಬಳ್ಳಿಯ ಮೂರು ಸಾವಿರಮಠದ ಶ್ರೀಗುರುಸಿದ್ದೇಶ್ವರ ರಾಜಯೋಗಿಂದ್ರ ಶ್ರೀಗಳು ಹೇಳಿದರು.

https://www.youtube.com/watch?v=ksc5FKh2s9U&feature=youtu.be

ರಾಯಚೂರಿನ ಕಿಲ್ಲೆಬ್ರಹನ ಮಠದಲ್ಲಿ ನಡೆದ ಪುರಾಣ ಮಂಗಳೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, ಈಗಿರುವ ಸಮ್ಮಿಶ್ರ ಸರ್ಕಾರವನ್ನು ಯಡಿಯೂರಪ್ಪ ಅಭದ್ರಗೊಳಿಸಬಾರದು, ಅವರಾಗಿಯೇ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಬಹುದು, ಸಮ್ಮಿಶ್ರ ಸರ್ಕಾರ ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟ ಎಂದು ಹೇಳಿದರು.

Next Story

RELATED STORIES