Top

ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡರಿಂದ ಹಿಗ್ಗಾಮುಗ್ಗಾ ಕ್ಲಾಸ್

ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡರಿಂದ ಹಿಗ್ಗಾಮುಗ್ಗಾ ಕ್ಲಾಸ್
X

ಕೊಡಗು: ಸಂಸದ ಪ್ರತಾಪ್ ಸಿಂಹ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಕಿಡಿಕಾರಿದ್ದು, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಹೆಬ್ಬಟ್ಟಗೇರಿ ಬಳಿ ಮಾತನಾಡಿದ ಬಿಜೆಪಿ ಮುಖಂಡ ಎಂ.ಬಿ ದೇವಯ್ಯ ಸಂಸದರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೇಂದ್ರ ಅಧ್ಯಯನ ತಂಡ ಆಗಮಿಸಿದ ವೇಳೆ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=YQeR4n8kjn4&feature=youtu.be

ನೀವು ನಮ್ಮ ಜನಪ್ರತಿನಿಧಿಗಳು. ನಮ್ಮ ಪರ ಕೆಲಸ ಮಾಡಿ. ನಿಮ್ಮನ್ನು ಗೆಲ್ಲಿಸಿದ್ದೇ ತಪ್ಪಾಯ್ತು. ಭೂಪರಿವರ್ತನೆ ಮಾಡ್ತಿದ್ದಾರೆ ಎಂಬ ಮಾಹಿತಿ ನಿಡುತ್ತಿರುವುದು ತಪ್ಪು, ಇದರಿಂದ ಇಲ್ಲಿನ ಜನರಿಗೆ ಸಮಸ್ಯೆ ಸೃಷ್ಠಿಯಾಗುತ್ತೆ. ಮೊದಲು ಜನಪರ ಕೆಲಸ ಮಾಡಿ ಎಂದು ಸಂಸದರ ಜೊತೆ, ಶಾಸಕ ಬೋಪಯ್ಯ, ಅಪ್ಪಚ್ಚು ರಂಜನ್ ವಿರುದ್ಧ ದೇವಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದೀರಾ. ಪಕ್ಷವನ್ನು ಹಾಳು ಮಾಡ್ತಿರೋದೆ ನೀವುಗಳು. ನಮ್ಮೊಡನೆ ಮೊದಲು ಚರ್ಚೆ ಮಾಡಿ, ನಿಮ್ಮಂಥವರಿಂದ ಪಕ್ಷ ಉದ್ಧಾರವಾಗಿಲ್ಲ ಎಂದು ದೇವಯ್ಯ ಕಿಡಿ ಕಾರಿದರು.

Next Story

RELATED STORIES