Top

15-20 ನಿಮಿಷ ಜೇಟ್ಲಿ-ಮಲ್ಯ ಮಾತು: ಸಿಸಿಟಿವಿ ದೃಶ್ಯ ನೋಡಿ ಎಂದ ಕಾಂಗ್ರೆಸ್

15-20 ನಿಮಿಷ ಜೇಟ್ಲಿ-ಮಲ್ಯ ಮಾತು: ಸಿಸಿಟಿವಿ ದೃಶ್ಯ ನೋಡಿ ಎಂದ ಕಾಂಗ್ರೆಸ್
X

ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಹಾರುವ ಎರಡು ದಿನ ಮುನ್ನ ಸಂಸತ್​ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಕುಳಿತು ಮಾತನಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸಂಸದರೇ ಸಾಕ್ಷಿ. ಕನಿಷ್ಠ 15ರಿಂದ 20 ನಿಮಿಷ ಮಾತನಾಡಿದ್ದಾರೆ. ಬೇಕಾದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಜಯ್ ಮಲ್ಯ ಪರಾರಿಯಾಗಲು ಕೇಂದ್ರ ಸರಕಾರವೇ ನೇರ ಕಾರಣ. ಭೇಟಿಯಾಗಿದ್ದು ನಿಜವಾದರೆ ಆಗಲೇ ಯಾಕೆ ಮಾತುಕತೆಯ ವಿವರ ಬಹಿರಂಗಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

2016ರಲ್ಲಿ ಲಂಡನ್​ಗೆ ಬರುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಆಗ ಸಾಲ ತೀರಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಿದ್ದೆ ಎಂದು ಮಲ್ಯ ಲಂಡನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಜೇಟ್ಲಿ, ಸಂಸತ್ ಕಾರಿಡಾರ್​ನಲ್ಲಿ ಆಕಸ್ಮಿಕ ಭೇಟಿ ಮಾಡಿ ಔಪಚಾರಿಕ ಮಾತುಕತೆ ನಡೆದಿತ್ತು ಎಂದು ಸ್ಪಷ್ಟನೆ ನೀಡಿದ್ದರು.

ಜೇಟ್ಲಿ ಮತ್ತು ಮಲ್ಯ ಪರಸ್ಪರ ಮಾತನಾಡುವಾಗ ಇದ್ದ ಕಾಂಗ್ರೆಸ್ ಸಂಸದ ಪಿ.ಎಲ್​. ಪೂನಿಯಾ ಇದ್ದರು. ಈ ಮಾತುಕತೆ ಕೇವಲ ಔಪಚಾರಿಕವಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಆದರೆ ಘಟನೆ ದಿನ ಅರುಣ್ ಜೇಟ್ಲಿ ಶೇ.90ರಷ್ಟು ಕಚೇರಿಗೆ ಆಗಮಿಸಿರಲಿಲ್ಲ. ಸರಿಯಾದ ಅಂಕಿ-ಅಂಶ ಇಲ್ಲದೇ ಆರೋಪ ಮಾಡುತ್ತಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

Next Story

RELATED STORIES