ಸಂಪ್ರದಾಯಬದ್ಧ ಗಣೇಶ ಚತುರ್ಥಿ ಆಚರಿಸಿದ ಯದುವೀರ್

X
TV5 Kannada13 Sep 2018 10:26 AM GMT
ಮೈಸೂರು: ನಿನ್ನೆ ಮೈಸೂರು ಅರಮನೆಯಲ್ಲಿ ತ್ರಿಷಿಕಾ ಒಡೆಯರ್ ಗೌರಿ ಪೂಜೆ ನಡೆಸಿದ್ದು, ಇಂದು ಯದುವೀರ್ ಒಡೆಯರ್ ಗಣಪತಿ ಪೂಜೆ ಮಾಡುವ ಮೂಲಕ ಸಂಪ್ರದಾಯಬದ್ಧ ಗಣೇಶ ಚತುರ್ಥಿ ಆಚರಿಸಿದರು.
ಯದುವಂಶದ ಮಹಾರಾಜ ಯದುವೀರ್ ಒಡೆಯರ್, ಅರಮನೆಯ ಆವರಣದಲ್ಲಿರುವ ಗಣೇಶಮೂರ್ತಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಪೂಜೆ ವೇಳೆ ಯದುವೀರ್ಗೆ ಅರಮನೆಯ ಕೆಲ ಅರ್ಚಕರು ಸಾಥ್ ನೀಡಿದರು. ಇನ್ನು ಯದುವೀರ್- ತ್ರಿಷಿಕಾ ಪುತ್ರ ಆದ್ಯವೀರ್ಗೆ ಇದು ಮೊದಲನೇ ಗಣೇಶ ಹಬ್ಬವಾಗಿದ್ದು, ಅರಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿದೆ.
ಅರಮನೆಯಲ್ಲಿ ನಡೆದ ಗಣೇಶ ಪೂಜೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯದುವೀರ್, ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದರು.
Next Story