Top

ಎಲ್ಲೆಡೆ ಜೋರಾಗಿದೆ ಏಕದಂತನ ಆರಾಧನೆ

ಎಲ್ಲೆಡೆ ಜೋರಾಗಿದೆ ಏಕದಂತನ ಆರಾಧನೆ
X

ದೇಶದೆಲ್ಲೆಡೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೆಂದರೆ ಅದು ಗೌರಿ- ಗಣೇಶನ ಹಬ್ಬ. ಮಹಾರಾಷ್ಟ್ರಕ್ಕೆ ಈ ಹಬ್ಬ ನಾಡಹಬ್ಬವಾದರೂ, ಉಳಿದೆಲ್ಲೆಡೆಯೂ ಇದನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗತ್ತೆ.

ಬೆಂಗಳೂರಿನ ಬಸವನಗುಡಿಯಲ್ಲೂ ಕೂಡ ಅದ್ಧೂರಿ ಗೌರಿ ಗಣೇಶ ಹಬ್ಬ ಆಚರಿಸಲಾಗುತ್ತಿದ್ದು, ಬೆಳಿಗ್ಗೆಯಿಂದಲೇ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ನಡೆಸಲಾಗುತ್ತಿದೆ.

ದೊಡ್ಡಗಣಪನಿಗೆ ಬೆಳಗ್ಗೆ 3.30ಕ್ಕೆ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ನಡೆದಿದ್ದು, ಎರಡು ಸಾವಿರ ಲೀಟರ್ ಹಾಲಿನಲ್ಲಿ ಗಣೇಶನಿಗೆ ಅಭಿಷೇಕ ಮಾಡಲಾಗಿದೆ.

ಅಲ್ಲದೇ ಹೂ, ಖರ್ಜಿಕಾಯಿಯಿಂದ ದೊಡ್ಡಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ನೂರು ಲೀಟರ್ ಎಳನೀರು, ನೂರು ಲೀಟರ್ ಮೊಸರು, ಮೂವತ್ತು ಕೆ.ಜಿ ಸಕ್ಕರೆ, ಜೇನುತುಪ್ಪ, ಎರಡು ಸಾವಿರ ಲೀಟರ್ ಹಾಲು, ತುಪ್ಪದ ಅಭಿಷೇಕ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೊಡ್ಡಗಣಪನ ದರ್ಶನ ಪಡೆದಿದ್ದಾರೆ.

ಹಾಸನ: ಗಣೇಶ ಹಬ್ಬದ ಪ್ರಯುಕ್ತ ಆದಿಚುಂಚನಗಿರಿ ಮಠದ ಆವರಣದಲ್ಲಿ ಏಕದಂತನಿಗೆ ವಿಶೇಷ ಪೂಜೆ ಜೊತೆಗೆ, ಹೋಮ ಹವನ ನಡೆಸಲಾಯಿತು. ಮಠದ ಆವರಣದಲ್ಲಿರೋ ಗಣೇಶ ದೇವಾಲಯದಲ್ಲಿ ಗಣಹೋಮ, ವಾಸ್ತುಹೋಮ, ಮೃತ್ಯುಂಜಯಹೋಮ ನಡೆಸಲಾಯಿತು.

ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯಲ್ಲೂ ಕೂಡ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ನಗರದ ಬಸವೇಶ್ವರ ಸರ್ಕಲ್ ಬಳಿ ಗಣೇಶನ ಮೂರ್ತಿ ಮೆರವಣಿಗೆ ವೇಳೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಸ್ಟೇಪ್ಸ್ ಹಾಕಿ ಗಮನ ಸೆಳೆದರು. ಕಾಲೇಜಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸೋ ಹಿನ್ನೆಲೆಯಲ್ಲಿ ಗಣೇಶ ಮೆರವಣಿಗೆ ವೇಳೆ ಡೋಲಕ್ ಸದ್ದಿನ ತಕ್ಕ ಹಾಗೆ ಸ್ಟೆಪ್ಸ್ ಹಾಕೋ ಮೂಲಕ ಕಾಲೇಜು ಹುಡುಗ-ಹುಡುಗಿಯರು ಸಂಭ್ರಮಿಸಿದ್ರು.

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಣೇಶಹಬ್ಬದ ಪ್ರಯುಕ್ತ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಗಜಪಡೆಯ ಆರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಅರ್ಜುನ, ವಿಕ್ರಮ, ಗೋಪಿ, ಧನಂಜಯ, ಚೈತ್ರ, ವರಲಕ್ಷ್ಮಿ ಆನೆಗಳಿಗೆ ಹೂವಿನಿಂದ ಅಲಂಕರಿಸಿ, ಪೂಜೆ ಮಾಡಲಾಯಿತು. ಈ ವೇಳೆ ಕಬ್ಬು, ಬೆಲ್ಲ, ಬಾಳೆಹಣ್ಣು ಸೇರಿದಂತೆ ಫಲಾಹಾರ ನೀಡಲಾಯಿತು. ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, ಗಜಪಡೆಯ ತಾಲೀಮು ರದ್ದುಗೊಳಿಸಲಾಯಿತು. ಗಜಪಡೆ ಪೂಜೆ ವೇಳೆಗೆ, ಅರಣ್ಯ ಇಲಾಖೆ ಡಿಸಿಎಫ್ ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Next Story

RELATED STORIES