ಒರಿಸ್ಸಾದ ಡುಡುಮ ಜಲಪಾತ : ನೋಡಲು ಬಲು ಸೊಬಗು

ಅರ್ಧವೃತ್ತಾಕಾರದಲ್ಲಿ ಧಮ್ಮಿಕ್ಕುವ ಡುಡುಮ ಜಲಪಾತ. ಪ್ರವಾಸಿಗರು ನೋಡಲೇ ಬೇಕಾದ ಈ ಸ್ಥಳ ಇರೋದು ಒರಿಸ್ಸಾ ಮತ್ತು ನಮ್ಮ ನೆರೆಯ ಅಂದ್ರ ಪ್ರದೇಶದ ಗಡಿ ಭಾಗದಲ್ಲಿ. ಸದಾ ಹಸಿರಿಂದ, ದುಮ್ಮಿಕ್ಕಿ ಹರಿನ ಹಾಲ್ ನೊರೆಯ ನೀರಿನಿಂದ ಕಂಗೊಳಿಸುವ ಇದನ್ನ ನೋಡುವುದೇ ಸೊಬಗು. ಈ ಕಾರಣಕ್ಕಾಗೇ ಪ್ರವಾಸಿಗರನ್ನ ಅಕರ್ಷಿಸುವ ಇದು, ಸದಾ ಪ್ರವಾಸಿಗರಿಂದ ತುಂಬಿ ತುಳುಕಿರುತ್ತದೆ. ಇದು ಮಳೆಗಾಲದಲ್ಲಿ ತುಂಬಾನೇ ಹೆಚ್ಚು.

ಡುಡುಮ ಜಲಪಾತ

ಅರ್ಧವೃತ್ತಾಕಾರದಲ್ಲಿ ಧಮ್ಮಿಕ್ಕುವ ಡುಡುಮ ಜಲಪಾತ, ಅರ್ಧ ಭಾಗ ನಮ್ಮ ನೆರೆಯ ರಾಜ್ಯ ಅಂದ್ರಪ್ರದೇಶಕ್ಕೆ ಮತ್ತರ್ಧ ಭಾಗ ಒರಿಸ್ಸಾ ರಾಜ್ಯಕ್ಕೆ ಸೇರಿದ್ದು ಪ್ರವಾಸಿಗರನ್ನ ಅತ್ಯಂತ ಅಕರ್ಷಿಸುತ್ತೆ. ಒರಿಸ್ಸಾದ ಮಯೂರ್ ಭಂಜ್ ಜಿಲ್ಲೆಗೆ ಸೇರಿರುವ ಈ ಡುಡುಮ ಜಲಪಾತ, ರಮಣೀಯತೆಯಲ್ಲಿ ಅತ್ಯಂತ ರಮಣೀಯ.

1941ರಲ್ಲಿ ಹೈಡ್ರೋ ಎಲೆಕ್ಟ್ರಾನಿಕ್ ಪ್ರಾಜೆಕ್ಟ್ ಗೆ ಬಳಸಿಕೊಂಡಿರುವ ಇದನ್ನ, ಇಲ್ಲಿಯವರೆಗೂ ವಿದ್ಯುತ್ ಉತ್ಪದಾನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಮಾಚಕುಂಡ ನದಿ ಧಮ್ಮಿಕ್ಕಿ ಹರಿದು ನಿರ್ಮಾಣವಾಗಿರುವ ಇದು, ಅತ್ಯಂತ ಸುಂದರ, ವಿಸ್ತಾರ ಜಲಪಾತಗಳಲ್ಲಿ ಒಂದು. 515 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಡುಡುಮ, ಅಂದ್ರ ಪ್ರದೇಶದಲ್ಲಿಯೂ ಮತ್ತೊಂದು ಜಲಪಾತವನ್ನ ನಿರ್ಮಿಸಿದೆ.

ಡುಡುಮ ಜಲಪಾತಕ್ಕೋ ಹೋಗೋದು ಹೇಗೆ.?

ಕೊರಪುಟ್ ಪ್ರದೇಶದಿಂದ 92 ಕಿ.ಮೀ, ವಿಶಾಖ ಪಟ್ನದಿಂದ 200ಕಿ.ಮೀ, ಹಾಗೂ ರೋರ್ಕೆಲಾದಿಂದ 570 ಕಿ.ಮೀಟರ್ ಸಾಗಬೇಕು. ಹೀಗೆ ಸಾಗಿದಾಗ ಅಂದ್ರ ಪ್ರದೇಶ-ಒರಿಸ್ಸಾ ಗಡಿ ಭಾಗದಲ್ಲಿ ಸಿಗೋದೇ ಡುಡುಮ ಜಲಪಾತ.

ಮಾಚಕುಂಡ ನದಿಯನ್ನ ಇಲ್ಲಿನ ಬೊಂಡಾಸ್ ಬುಡಕಟ್ಟು ಜನರು ದೇವರೆಂದೇ ಪೂಜಿಸ್ತಾರೆ. ಇವ್ರನ್ನೂ ನೀವಿಲ್ಲಿ ಕಾಣಬಹುದು. ಇವ್ರರಿಗೆ ಮಾಚಕುಂಡ ನದಿ ಮತ್ಸ್ಯ ತೀರ್ಥವಾಗಿದ್ದು, ಇದ್ರ ಸಮೀಪ ಇರೋ ಮತ್ಸ ಕುಂಡ ದಿನಂ ಪ್ರತಿ ನೂರಾರು ಯಾತ್ರಾರ್ಥಿಗಳು ಆಗಮಿಸಿ ಮತ್ಸ ಕುಂಡ ಕಂಡು ಪುನೀತರಾಗುತ್ತಾರೆ.

ಈ ಡುಡುಮ ಮಳೆಗಾಲದಲ್ಲಿ ಬೋರ್ಗರೆಯಾತ್ತಾ ಹರಿದು, ಚಳಿಗಾಲದಲ್ಲಿನ ಇದರ ಸೊಬಗು ಏನು ಕಡಿಮೆಯಾಗುವುದಿಲ್ಲ. ಇದಕ್ಕೆಲ್ಲ ಕಾರಣ ಇಲ್ಲಿನ ಪೂರ್ವ ಘಟ್ಟಗಳ ದಟ್ಟ ಕಾನನವೇ ಕಾರಣ…. ಸೋ ನೀವು ಹೋಗಿ, ನಿಮ್ಮ ಮನೆಯವರನ್ನೂ ಕರೆದೊಯ್ದು ನೋಡ್ಕೊಂಡು ಬನ್ನಿ..

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5