ಪ್ರವಾಹ ಪೀಡಿತ ಕೊಡಗುಗೆ ಕೇಂದ್ರ ಅಧ್ಯಯನ ತಂಡ

X
TV5 Kannada13 Sep 2018 6:35 AM GMT
ಪ್ರವಾಹದಿಂದ ತತ್ತರಿಸಿದ ಕೊಡುಗು ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭಾರೀ ಮಳೆ ಹಾಗೂ ಭೂಕುಸಿತದಿಂದ ತತ್ತರಿಸಿದ ನೀಡುಗಣೆ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಕುಸಿದಿರುವ ರಸ್ತೆ, ಭೂಕುಸಿತ ಪ್ರದೇಶಗಳ ವೀಕ್ಷಿಸಿತು.
ಕೇಂದ್ರದ ಹಿರಿಯ IAS ಅಧಿಕಾರಿಗಳ ತಂಡವನ್ನು ಶಾಸಕರಾದ ಬೋಪಯ್ಯ, ಅಪ್ಪಚ್ಚು ರಂಜನ್ , ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ವಿವರ ನೀಡಿದರು.
ಕಾಲೂರು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಮಾಂದಲ್ ಪಟ್ಟಿ, ಮದೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅಧ್ಯಯನ ತಂಡ, ಜಿಲ್ಲಾಡಳಿತದಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿದರು.
Next Story