Top

ಉಪ್ಪಿ, ದಚ್ಚು, ರಾಗಿಣಿ ಮನೆಯಲ್ಲಿ ಏಕದಂತನ ಆರಾಧನೆ.!

ಉಪ್ಪಿ, ದಚ್ಚು, ರಾಗಿಣಿ ಮನೆಯಲ್ಲಿ ಏಕದಂತನ ಆರಾಧನೆ.!
X

ಸ್ಯಾಂಡಲ್​ವುಡ್​ನಲ್ಲಿ ಗಣೇಶನ ಸ್ತುತಿ ಬಲು ಜೋರಾಗಿತ್ತು.. ನಟ, ನಟಿಯರ ಜೊತೆಗೆ ನಿರ್ದೇಶಕ , ನಿರ್ಮಾಪಕರು ಗಣಪತಿ ಬೊಪ್ಪ ಮೋರಿಯಾ ಎಂದು ಕೈಮುಗಿದ್ರು.. ಚಂದನವನದ ಚಂದದ ಸೆಲೆಬ್ರಿಟಿಯ ಗೌರಿ ಗಣೇಶ ಸಂಭ್ರಮ ಸವಿಘಳಿಗೆ ನಿಮ್ಮಗಾಗಿ..

ಈ ಬಾರಿ ಸ್ಯಾಂಡಲ್​​ವುಡ್​ನ ಗಣೇಶ ಹಬ್ಬ ಬಲು ಜೋರಾಗಿ ಮತ್ತು ವಿಭಿನ್ನವಾಗಿ ಆಚಾರಿಸಿದ್ದು ನಿರ್ದೇಶಕ ಜೋಗಿ ಪ್ರೇಮ್.. ಬಹುನಿರೀಕ್ಷಿತ ದಿ ವಿಲನ್ ರಿಲೀಸ್ ಡೇಟ್ ಫಿಕ್ಸ್ ಮಾಡಿ, ಪರಿಸರ ಸ್ನೇಹಿ ಗಣಪನಿಗೆ ಕೈ ಮುಗಿದ್ರು.. ಆರು ಅಡಿ ಎತ್ತರದ ಗರ್ಕೆ, ತೆಂಗಿನ ಗರಿ, ಮಾವಿನ ಸೊಪ್ಪಿನಿಂದ ಗಣಪತಿಯನ್ನು ಸಿದ್ಧ ಪಡಿಸಿದ್ದು ವಿಶೇಷವಾಗಿತ್ತು.

ಮುಂಬರುವ ಅಕ್ಟೋಬರ್ 18ಕ್ಕೆ ದೇಶಾದ್ಯಂತ ದಿ ವಿಲನ್ ತೆರೆಕಾಣಲಿದೆ.. ದಿ ವಿಲನ್ ಚಿತ್ರತಂಡ ಗಣೇಶೋತ್ಸವದಲ್ಲಿ ನಿರ್ಮಾಪಕ ಸಿ.ಆರ್.ಮನೋಹರ್, ನಿರ್ದೇಶಕ ಜೋಗಿ ಪ್ರೇಮ್, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ರು.

ಪ್ರತಿ ವರ್ಷದಂತೆ ಈ ವರ್ಷವೂ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಗಣಪತಿ ಆರಾಧನೆ ಅದ್ಧೂರಿಯಾಗಿ ನೆರವೆರಿತ್ತು.. ಬೆಂಗಳಿ ಚೆಲುವೆ , ಬೆಂಗಳೂರಿನ ಸೊಸೆ ಪ್ರೀಯಾಂಕಾ ಉಪೇಂದ್ರ ಗಣಪತಿಯನ್ನು ಪೂಜೆ ಮಾಡಿ ಸಂಭ್ರಮಿಸಿದ್ರು.

ಇನ್ನು ಉಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಡದಿ ವಿಜಯಲಕ್ಷ್ಮೀ , ನಟಿ ರಾಗಿಣಿ, ಎರಡನೆ ಸಲ ಖ್ಯಾತಿಯ ಸಂಗೀತಾ ಭಟ್ ಸೇರಿದಂತೆ ಅನೇಕ ತಾರೆಯರು ಗಣಪತಿ ಬಪ್ಪಾ ಮೋರಿಯಾ ಎಂದರು.

ವರದಿ : ಶ್ರೀಧರ್ ಶಿವಮೊಗ್ಗ, ಎಂಟರ್​​ಟೈನ್ಮೆಂಟ್ ಬ್ಯೂರೋ, Tv5

Next Story

RELATED STORIES