ಹಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ನಟಿ..!

X
TV5 Kannada13 Sep 2018 4:13 AM GMT
ಬೆಂಗಳೂರು: ಮಹಿಳಾ ಸಂಘದ ಹಣಕ್ಕಾಗಿ ಚಿತ್ರನಟಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಹಣ, ಕಾರು ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಟಿ ಸುಷ್ಮಿತಾ ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತೆಯಾಗಿದ್ದು, ಇದೇ ಸಂಘದ ಕಾರ್ಯಕರ್ತ ರಘು ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾಳೆ.
ಸಂಘದಲ್ಲಿದ್ದುಕೊಂಡು ರಘು ಒಬ್ಬನೇ ಹಣ ಮಾಡುತ್ತಿದ್ದಾನೆಂದು ಆರೋಪಿಸಿದ ಸುಷ್ಮಿತಾ, ತನ್ನ ಸಹಚರರೊಂದಿಗೆ ಸೇರಿ, ರಸ್ತೆಯಲ್ಲಿ ಅಡ್ಡಗಟ್ಟಿ, ರಘು ಮೇಲೆ ಹಲ್ಲೆ ನಡೆಸಿದ್ದಾಳೆ. ಅಲ್ಲದೇ, ಆತನ ಕಾರು, ಹಣ, ಲ್ಯಾಪ್ಟಾಪ್ ದೋಚಿ ಪರಾರಿಯಾಗಿದ್ದಾಳೆ. ಸದ್ಯ ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story