Top

ಗಣೇಶ ಹಬ್ಬಕ್ಕೆ 2.0 ಟೀಸರ್ ಬಿಡುಗಡೆ: ಕಣ್ಣುಮಿಟುಕಿಸದೇ ನೋಡಿ

ಗಣೇಶ ಹಬ್ಬಕ್ಕೆ 2.0 ಟೀಸರ್ ಬಿಡುಗಡೆ: ಕಣ್ಣುಮಿಟುಕಿಸದೇ ನೋಡಿ
X

ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಮೊದಲ ಬಾರಿ ಒಟ್ಟಿಗೆ ಅಭಿನಯಿಸಿ, ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ರೋಬೊ-2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಗೌರಿ-ಗಣೇಶ ಹಬ್ಬಕ್ಕೆ ಚಿತ್ರ ತಂಡ ಭರ್ಜರಿ ಉಡುಗೊರೆ ನೀಡಿದೆ.

ಸುಮಾರು ಎರಡು ವರ್ಷಗಳಿಂದ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಟೀಸರ್ ಅಬ್ಬಬ್ಬಾ ಎನಿಸುವಂತಿದೆ. ಕೆಲವು ಅದ್ಭುತ ಗ್ರಾಫಿಕ್ಸ್, ಸ್ಟಂಟ್ಸ್ ಈ ಟೀಸರ್ ಅನ್ನು ಆವರಿಸಿಕೊಂಡಿದೆ.

ರೋಬೊ ಚಿಟ್ಟಿ ಮತ್ತೆ ಬರುವುದು ಯಾಕೆ? ಅಕ್ಷಯ್ ಕುಮಾರ್ ಪಾತ್ರದ ಝಲಕ್.. ಹತ್ತು ಹಲವು ವಿಶೇಷಗಳಿದ್ದು, ಕಣ್ಣು ಮಿಟುಕಿಸದೇ ನೋಡುವಂತೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಟೀಸರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 40 ಲಕ್ಷ ಮಂದಿ ವೀಕ್ಷಿಸಿರುವುದು ಈ ಚಿತ್ರದ ನಿರೀಕ್ಷೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.

Next Story

RELATED STORIES