video viral: ಬೀದಿನಾಯಿಗಳ ದಾಳಿ: ಬಾಲಕನಿಗೆ ಗಾಯ

ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದೆ. ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾಯಿಗಳ ದಾಳಿ ಹೆಚ್ಚಾಗುತ್ತಿದ್ದು, ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಯಾರನ್ನೂ ಬಿಡುತ್ತಿಲ್ಲ.

ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೀದಿನಾಯಿಗಳು ಬಾಲಕನೊಬ್ಬನನ್ನ ಎಳೆದಾಡಿ ಕಚ್ಚಿ  ಗಾಯಗೊಳಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆಯಲ್ಲಿ ಬಾಲಕ ತನ್ಮಯ್ ಗಾಯಗೊಂಡಿದ್ದಾನೆ. ಮೂರರಿಂದ 5 ನಾಯಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಒಂದು ನಾಯಿ ಕಾಲನ್ನು ಬಲವಾಗಿ ಕಚ್ಚಿ ಎಳೆದಿದೆ. 6 ಕಡೆ ಕಚ್ಚಿದ್ದು, ಕಾಲಿಗೆ ಗಾಯಗಳಾಗಿವೆ.

ಬಂದ್ ಇದ್ದ ಕಾರಣ ಸ್ನೇಹಿತರೊಂದಿಗೆ ತನ್ಮಯ್ ಬರುತ್ತಿದ್ದಾಗ ಏಕಾಏಕಿ ನಾಯಿಗಳು ದಾಳಿ ಮಾಡಿವೆ. ಇದನ್ನು ನೋಡಿ ಇಬ್ಬರು ಬಾಲಕರು ಓಡಿ ಹೋಗಿದ್ದಾರೆ. ಬಾಲಕನ ಕೂಗಾಟ ಕೇಳಿ ಓಡಿ ಬಂದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.