ಇದು ಶಿವರಾಮಕಾರಂತ ಬಡಾವಣೆ ಬಿಡಿಎ ಪ್ರಾಬ್ಲಂ ಕತೆ.!

ಬೆಂಗಳೂರು : ಬಿಡಿಎ ಹಾಗೂ ಭೂ ಮಾಲೀಕರ ನಡುವೆ ಇದೀಗ ಭೂದಿ ಮೆಚ್ಚಿದ ಕೆಂಡದ ಹಾಗೇ ಒಳಗೊಳಗೆ ಬಾರೀ ಗುದ್ದಾಟ ನಡೆಯುತ್ತಿದೆ. ಶಿವರಾಮ ಕಾರಂತ್ ಲೇ ಔಟ್ನಲ್ಲಿ ಫೈನಲ್ ನೊಟಿಫಿಕೇಶನ್ ಹೊರಡಿಸಲು ಬಿಡಿಎ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನವಾಗಿದೆ.

ಬಿಡಿಎ ಅಧಿಕಾರಿಗಳು ಲೇ ಔಟ್ ನಿರ್ಮಾಣಕ್ಕೆ ಪ್ಲಾನ್ ಮಾಡ್ತಿದ್ದಂತೆ, ಅತ್ತ ಭೂ ಮಾಲೀಕರು ತಮ್ಮ ಅಸಲಿ ಆಟ ಶುರುಮಾಡಿದ್ದಾರೆ. ಪ್ರಾಣಹೋದ್ರು ಸರಿ ನಮ್ಮ ಜಾಗಗಳನ್ನ ಬಿಟ್ಟುಕೊಡಲ್ಲ ಅಂತಾ ಕೆಲ ರೈತರು ಪಟ್ಟುಹಿಡಿದಿದ್ದಾರೆ.

ಹೌದು.., ಬಿಡಿಎ ಪರ ಬಂದಿರುವ ತೀರ್ಪನ್ನೇ ಪ್ರಶ್ನೆಸಿ ಶಿವರಾಮ ಕಾರಂತ್ ಲೇ ಔಟ್ ನ 17 ಹಳ್ಳಿಯ ರೈತರು, ಸೈಟ್ ಮಾಲೀಕರು, ಮನೆ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನೆ ಪ್ರಶ್ನೆಸಿ, ಪುನರ್ ಪರಿಶೀಲನೆ ಮಾಡುವಂತೆ ನ್ಯಾಯಲಯದ ಮೆಟ್ಟಿಲೇರಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಮಂದಿ ಈ ತೀರ್ಪನಿಂದ ನಮ್ಮ ಜೀವನಕ್ಕೆ ಕಂಟಕವಾಗುತ್ತೆ. ಇದರಿಂದ ನಮ್ಮ ಜೀವನಗಳೇ ಹಾಳಾಗ್ತಾವೆ. ಹೀಗಾಗಿ ಇನ್ನೊಮ್ಮೆ ಪರಿಶೀಲಿಸಿ ತೀರ್ಪು ನೀಡುವಂತೆ ಕೋರ್ಟ್ ಮೊರೆಹೋಗಿದ್ದಾರೆ. ಯಾಕೆಂದ್ರೆ ಎಲ್ಲಾ ಗ್ರಾಮಗಳಲ್ಲೂ ಬಹುತೇಕ 70 ಪರ್ಸೆಂಟ್ನಷ್ಟು ಜಾಗ ಡೆವಲಪ್ ಆಗಿದೆಯಂತೆ.

ಅಷ್ಟೆಅಲ್ಲ ಸುಮಾರು 10 ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆಯಂತೆ. ಹೀಗಾಗಿ ಅವುಗಳನ್ನೆಲ್ಲ ಕೆಡಿವಿದರೇ ನಮ್ಮ ಬದುಕುಗಳೇ ಮೂರಾಬಟ್ಟೆಯಾಗುತ್ತೆ ಅಂತಾ ಎಲ್ಲರು ಈಗ ಬಂದಿರುವ ತೀರ್ಪನ್ನ ಮತ್ತೊಮ್ಮೆ ಪರಿಶೀಲಿಸುವಂತೆ, ಮತ್ತೆ ನ್ಯಾಯಲಯದ ಕದವನ್ನೆ ತಟ್ಟುತ್ತಿದ್ದಾರೆ.

ಇನ್ನು ಬಿಡಿಎ ಒಟ್ಟು 3546 ಎಕರೆಗೆ ಫೈನಲ್ ನೊಟಿಫಿಕೇಶನ್ ಮಾಡಲಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬಿಲ್ಡಿಂಗ್ಗಳು, ಮನೆಗಳು ತಲೆ ಎತ್ತಿವೆ. ಅಷ್ಟೆಅಲ್ಲ ಅದೆಷ್ಟೋ ಜನ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರೇ ಹೆಚ್ಚಾಗಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ನ ಈಗಿನ ತೀರ್ಪಿನಿಂದ ಎಲ್ಲರು ಬೀದಿಗೆ ಬೀಳ್ತಾರೆ. ಆದ್ದರಿಂದ ಮತ್ತೊಮ್ಮೆ ಪರಿಶೀಲಿಸಬೇಕು ಅನ್ನೋದು ಅಲ್ಲಿನ ಜನರ ವಾದ. ಅಷ್ಟೆಅಲ್ಲ ಬಹುತೇಕ ಮಂದಿ ಕೋರ್ಟ್ ಮೆಟ್ಟಿಲೇರಲು ಶಕ್ತಿಯಿಲ್ಲ, ಹೀಗಾಗಿ ನಾವೆಲ್ಲ ಚಂದಾ ಎತ್ತಿಕೊಂಡು ಲಾಯರ್ ಫೀಜ್ ಕಟ್ಟಬೇಕಿದೆ ಅಂತಾರೆ.

ಈ ಬಗ್ಗೆ ಬಿಡಿಎ ಭೂ ಸ್ವಾಧೀನ ವಿಭಾಗದ ಉಪ ಆಯುಕ್ತ ಲಿಂಗಮೂರ್ತಿ ಅವರನ್ನು ಕೇಳಿದ್ರೆ ಅವರು ನ್ಯಾಯಲಯಕ್ಕೆ ಹೋಗಲಿ, ಆದ್ರೆ ಸದ್ಯ ನಾವೂ ಸುಪ್ರೀಂಕೋರ್ಟ್ ಆದೇಶದಂತೆ ಫೈನಲ್ ನೊಟಿಫಿಕೇಶನ್ ಹೊರಡಿಸುತ್ತೇವೆ. ಒಂದು ವೇಳೆ ನಮಗೆ ನೊಟೀಸ್ ಬಂದ್ರೆ ಆಗ ನೋಡುತ್ತೇವೆ ಎಂದು ಹೇಳಿದ್ದಾರೆ.

ಒಟ್ನಲ್ಲಿ ಬಿಡಿಎನಲ್ಲಿ ಇದೀಗ ಶಿವರಾಮ ಕಾರಂತ್ ಜಪತಪ ಶುರುವಾಗಿದೆ. ಬಿಡಿಎ ಅಧಿಕಾರಿಗಳು ಲೇ ಔಟ್ ನಿರ್ಮಾಣದ ಸಿದ್ದತೆ ನಡೆಸ್ತಿದ್ರೆ, ಅತ್ತ ಹಳ್ಳಿಯ ಜನರು ಹೇಗಾದ್ರು ಮಾಡಿ ಇದಕ್ಕೆ ಬ್ರೇಕ್ ಬಿದ್ರೆ ಸಾಕಪ್ಪಾ ಅಂತಾ ದೇವರನ್ನ ಪರಿಪರಿಯಾಗಿ ಬೇಡಿಕೊಳ್ತಿದ್ದಾರೆ.

ವರದಿ : ಕೃಷ್ಣಮೂರ್ತಿ, ಟಿವಿ5 ಬೆಂಗಳೂರು