ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕ : ಕೋಡಿ ಮಠ ಶ್ರೀಗಳ ಭವಿಷ್ಯ

ಹಾಸನ : ರಾಜ್ಯ ರಾಜಕಾರಣ, ರಾಜಕೀಯ ವಿದ್ಯಾಮಾನ, ರಾಜ್ಯದ ಹಾಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಹಾಸನದ ಕೋಡಿ ಮಠ ಶೀಗಳು ರಾಜ್ಯ ಸರ್ಕಾರದ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ತಮ್ಮ ಭವಿಷ್ಯವನ್ನು ಹೇಳಿರುವ ಕೋಡಿ ಮಠ ಶ್ರೀಗಳು, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಾದಿದೆಯಾ ಕಂಟಕ ಒದಗಿ ಬರಲಿದೆ. ಬೆಳಗಾವಿ ಜಾರಕಿಹೋಳಿ ಸಹೋದರರ ಬಳಿಕ ಸರ್ಕಾರಕ್ಕೆ ಮತ್ತೋರ್ವ ಸಹೋದರು ಕಂಟಕವಾಗಲಿದ್ದಾರೆ.

ಮುಂಬರುವ ನವೆಂಬರ್ ವರೆಗೆ ರಾಜಕೀಯ ವಿಪ್ಲವ ಮುಂದುವರೆಯಲಿದೆ. ದೇಶದಲ್ಲಿ ಪ್ರಾಕೃತಿಕ ವಿಕೋಪ ಮುಂದುವರೆಯಲಿದೆ. ಭೂ ಕಂಪನದ, ಜೊತೆಗೆ ದೊಡ್ಡ ದೊಡ್ಡ ನಗರಗಳೂ ಕಂಪಿಸಲಿವೆ. ಸಾವು ನೋವುಗಳ ಸರಣಿ ಮುಂದುವರೆಯಲಿದೆ ಎಂದು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಅಂದಹಾಗೇ, ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಶ್ರೀಗಳು, ಎರಡು ತಿಂಗಳ ಹಿಂದೆಯೇ ಬ್ರಾತೃ ಬಲ ಹೆಚ್ಚೀತು ಎಂದು ಹೇಳಿದ್ದರು. ಇದೀಗ ಮತ್ತೆ ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು, ಸರ್ಕಾರದ ಮೇಲೆ ಸಹೋದರ ಕಂಟಕ ಹೇಗೆ ಸಂಕಷ್ಟ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.