ತಲೆಕೆಳಗಾಗಿ ಹಾರಾಡಿದ ಸಚಿವರ ವಾಹನದ ರಾಷ್ಟ್ರಧ್ವಜ

ಹಾವೇರಿ : ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಾಟದಲ್ಲಿ ಎಡವಟ್ಟು ಆಗೋದು ನೋಡಿದ್ದೀರಿ. ಆದರೇ ಸಚಿವರ ಕಾರಿನ ಮುಂದೆ ಹಾಕಲಾಗಿದ್ದ ರಾಷ್ಟ್ರಧ್ವಜವೇ ಉಲ್ಟ ಹಾರಾಡಿದ್ದು ಇದೇ ಮೊದಲು.

ಇಂತಹ ಘಟನೆ ಹಾವೇರಿ ಜಿಲ್ಲೆಯ ಪ್ರವಾಸಿ ಮಂದಿರದ ಬಳಿ ನಡೆದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್‌ ವಾಹನದ ಮುಂಭಾಗದಲ್ಲಿ ರಾಷ್ಟ್ರಧ್ವಜ ಅಳವಡಿಸಲಾಗಿತ್ತು.

ಹೀಗೆ ಸಚಿವರ ಕಾರಿನ ಮುಂಭಾಗದಲ್ಲಿ ಅಳವಡಿಸಿದ್ದ ರಾಷ್ಟ್ರಧ್ವಜವನ್ನೇ ಉಲ್ಟ ಹಾಕಿದ್ದ ಪ್ರಕರಣ ಮಾಧ್ಯಮಗಳ ಹದ್ದಿನ ಕಣ್ಣಿನ ಮೂಲಕ ತೋರ್ಪಡೆಗೊಂಡಿದೆ.

ಹಾವೇರಿ ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿ ನಿಲ್ಲಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಕಾರಿನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾಕಿ ಹಾರಾಡಿಸಲಾಗಿದೆ.

ಸಚಿವರ ಕಾರಿನ ಮುಂಭಾಗದಲ್ಲಿ ಹಾಕಲಾಗಿದ್ದ ರಾಷ್ಟ್ರಧ್ವಜ ಉಲ್ಟಾ ಹಾಕಿದ್ದನ್ನು ಮಾಧ್ಯಮಗಳ ಮೂಲಕ ಗಮನಿಸಿದ ಚಾಲಕ, ಮತ್ತೆ ಸರಿಪಡಿಸಿ, ರಾಷ್ಟ್ರಧ್ವಜಕ್ಕೆ ಅಗುತ್ತಿದ್ದ ಅಪಮಾನವನ್ನು ಸರಿಪಡಿಸಿದ್ದಾರೆ.

ಕೇಸರಿ, ಬಿಳಿ, ಹಸಿರು ರೀತಿಯಲ್ಲಿ ಹಾಕಬೇಕಾಗಿದ್ದ ರಾಷ್ಟ್ರಧ್ವಜವನ್ನು ಹಸಿರು, ಬಿಳಿ, ಕೇಸರಿ ರೀತಿಯಲ್ಲಿ ತಲೆಕೆಳಗಾಗಿ ಹಾಕಿ ಹಾರಾಡುತ್ತಿತ್ತು. ಮಾಧ್ಯಮಗಳ ಮೂಲಕ ಕೆಂಗಣ್ಣಿಗೆ ಬಿದ್ದು, ಸರಿಪಡಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಆದ ಅಪಮಾನವನ್ನು ಸರಿಪಡಿಸಲಾಯಿತು.

Recommended For You

Leave a Reply

Your email address will not be published. Required fields are marked *