`ಕಬ್ಬು ಹೆಚ್ಚು ಬೆಳೆದರೆ ಸಕ್ಕರೆ ಕಾಯಿಲೆ ಬರುತ್ತೆ, ಬೇರೆ ಬೆಳೆಯಿರಿ’

ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಮಧುಮೇಹ( ಸಕ್ಕರೆ ಕಾಯಿಲೆ) ಕಾಯಿಲೆ ಬರುತ್ತದೆ. ಆದ್ದರಿಂದ ರೈತರು ಬೇರೆ ಬೆಳೆಗಳನ್ನು ಬೆಳೆಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹೇಳಿದ್ದಾರೆ.

ಹೆಚ್ಚೆಚ್ಚು ಕಬ್ಬು ಬೆಳೆಯುವುದರಿಂದ ಹೆಚ್ಚೆಚ್ಚು ಸಕ್ಕರೆ ಸೇವಿಸುತ್ತಾರೆ. ಇದು ಸಕ್ಕರೆ ಕಾಯಿಲೆಗೆ ಕಾರಣವಾಗುತ್ತದೆ. ಹೀಗಾಗಿ ಕಬ್ಬಿನ ಬದಲು ಬೇರೆ ಬೆಳೆ ಬೆಳೆಯಿರಿ ಎಂದು ರೈತರಿಗೆ ಯೋಗಿ ಆದಿತ್ಯನಾಥ್ ಸಲಹೆ ನೀಡಿದ್ದಾರೆ.

ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಕಬ್ಬನ್ನು ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.  2017-18ನೇ ಸಾಲಿನ ಕಬ್ಬು ಅರೆಯುವ ಕೆಲಸ ಅಕ್ಟೋಬರ್ 20 ರಿಂದ ನವೆಂಬರ್ 5 ರವರೆಗೆ ನಡೆಯುತ್ತದೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯ 32 ದಶಲಕ್ಷ ಟನ್ ಸಕ್ಕರೆ ಉತ್ತರ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 15ರೊಳಗೆ ರೈತರ ಕಬ್ಬಿನ ಹಣ ಪಾವತಿ ಮಾಡದಿದ್ದರೆ ಅಂತಹ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬಡ ಜನ ಹಾಗೂ ರೈತರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಪ್ರಮುಖ ಉದ್ದೇಶವಾಗಿದೆ, ಸಕ್ಕರೆ ಕಾರ್ಖಾನೆ ಮಾಲೀಕರು ಅಕ್ಟೋಬರ್ 15 ರೊಳಗೆ ರೈತರ ಹಣ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ALSO READ  ರಾಜ್ಯಾದ್ಯಂತ ಮತ್ತೆ ಆರ್ಭಟಿಸಲಿದೆ ಮುಂಗಾರು : ಮುಂದಿನ 3 ದಿನಗಳಲ್ಲಿ ಭಾರಿ ಮಳೆ