‘ತವರಿಗೆ ಬಾ ತಂಗಿ’ಎಂದು ಮಾಜಿ ಸಂಸದೆಗೆ ಬಿಜೆಪಿ ಕಾರ್ಯಕರ್ತರ ಭಾಗಿನ.!

ಮಂಡ್ಯ : ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಜವಾಬ್ದಾರಿ ಹೊಣೆಗಾರಿಕೆ ಹೊತ್ತ ಮೇಲೆ, ಮಾಜಿ ಸಂಸದೆ ರಮ್ಯ ತವರನ್ನೇ ಮರೆತಿದ್ದಾರೆ.

ಈ ಕಾರಣಕ್ಕೆ ತವರು ಮರೆತಿರುವ ತಂಗಿಯನ್ನು ತವರಿಗೆ ಬಾ ತಂಗಿ ಎಂಬ ವಿನೂತನ ರೀತಿಯಲ್ಲಿ ಭಾಗಿನ ಕಳುಹಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ನೆನಪು ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಹೂ, ಬಳೆ ಹಾಗೂ ತೆಂಗಿನ ಕಾಯಿ ಒಳಗೊಂಡ ಭಾಗಿನವನ್ನು, ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್‌ ಕ್ವೀನ್‌ಗೆ ಭಾಗಿನ ರವಾನಿಸಿ ಆಹ್ವಾನಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಕಾರ್ಯಕರ್ತರು, ಸಹೋದರಿ ರಮ್ಯ ತವರು ಮರೆತಿದ್ದು, ಅವರಿಗೆ ತವರು ಮಂಡ್ಯ ನೆನಪಾಗ್ಲೀ ಅಂತಾ ಭಾಗಿನ ರವಾನೆ ಮಾಡಿದ್ದೇವೆ. ಪೋಸ್ಟ್‌ ಮೂಲಕ ಭಾಗಿನ ಕಳುಹಿಸಿದ್ದೇವೆ.

ಈ ಮೂಲಕ ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗೂ ಮತ ಚಲಾಯಿಸಲು ಬಾರದ ರಮ್ಯ ಅವರಿಗೆ ತವರನ್ನು ನೆನಪು ಮಾಡಿಕೊಳ್ಳುವಂತೆ ಮನವರಿಕೆ ಮಾಡಿಕೊಡಲಾಗಿದೆ.

ಅಲ್ಲದೇ ಗೌರಿ ಗಣೇಶ ಹಬ್ಬಕ್ಕಾದರೂ ಮಂಡ್ಯಕ್ಕೆ ಆಗಮಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ಇನ್ನಾದರೂ ತವರಿಗೆ ಮಾಜಿ ಸಂಸದೆ, ನಟಿ ರಮ್ಯ ಆಗಮಿಸಿ, ತವರಿನ ಜನರ ಕಷ್ಟಕ್ಕೆ ಸ್ಪಂದಿಸಲಿ ಎಂದರು.

ಇದೇ ವೇಳೆ ಕಳೆದ ಎರಡು ವರ್ಷದಿಂದ ಮಾಜಿ ಸಂಸದೆ ರಮ್ಯ ಮಂಡ್ಯದಿಂದ ಕಣ್ಮರೆಯಾಗಿದ್ದಾರೆ. ಈಗಲಾದ್ರೂ ಮಂಡ್ಯಕ್ಕೆ ಆಗಮಿಸದಿದ್ರೆ ಮುಂದಿನ ಲೋಕಸಭಾ ಚುನಾವಣೆಗೆ ಆಗಮಿಸಿದ್ರೆ ಘೇರಾವ್ ಹಾಕೋ ಎಚ್ಚರಿಕೆ ಕೂಡ ನೀಡಿದರು.

Recommended For You

Leave a Reply

Your email address will not be published. Required fields are marked *