ವಿಲನ್​ಗಳಿಗೆ ‘ದುರ್ಯೋಧನ’ನ ಸವಾಲ್! ಹೇಗಿರುತ್ತೆ ಗೊತ್ತಾ ‘ಕುರುಕ್ಷೇತ್ರ’ ವೈಭವ.?

ಕಾದು ಕಾದು ಸುಸ್ತಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರವನ್ನ ಮರತೇ ಬಿಟ್ಟಿದ್ದಾರೆ.. ಆದ್ರೆ, ನಿರ್ಮಾಪಕರು ಮಾತ್ರ ಸದ್ದಿಲ್ಲದೇ ಕುರುಕ್ಷೇತ್ರ ಚಿತ್ರವನ್ನ ಗ್ರ್ಯಾಂಡಾಗಿ ತೆರೆಗೆ ತಂದು ಬಾಕ್ಸಾಫೀಸ್​ ಕೊಳ್ಳೆ ಹೊಡೆಯೋಕೆ ಕರಸತ್ತು ನಡೆಸಿದ್ದಾರೆ.. ದಿ ವಿಲನ್ ಕಲೆಕ್ಷನ್ ರೆಕಾರ್ಡ್ ಬ್ರೇಕ್​ ಮಾಡೋಕೆ ಕುರುಕ್ಷೇತ್ರ ಟೀಂ ಸೀಕ್ರೆಟ್ ಪ್ಲಾನ್ ಮಾಡ್ತಿದೆ..

ಕುರುಕ್ಷೇತ್ರ.. ದಿ ವಿಲನ್.. ಡೆಡ್ಲಿ ಕಾಂಬಿನೇಷನ್​, ಪ್ರೊಡಕ್ಷನ್ ವ್ಯಾಲ್ಯೂಸ್​​​​​ನಿಂದ ಸೆನ್ಸೇಷನ್ ಕ್ರಿಯೇಟ್​​​ ಮಾಡಿರೋ ಸಿನಿಮಾಗಳು.. ಈ ಎರಡು ಬಹುನಿರೀಕ್ಷಿತ ಸಿನಿಮಾಗಳ ನಡುವೆ ಬಾಕ್ಸಾಫೀಸ್​​​ನಲ್ಲಿ​​ ಪೈಪೋಟಿ ಏರ್ಪಡ್ತಿದೆ.. ಹಾಗಂತ ಎರಡೂ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗ್ತಿಲ್ಲ.. ಆದ್ರೆ, ದಿ ವಿಲನ್ ಬಾಕ್ಸಾಫೀಸ್​​ ರೆಕಾರ್ಡ್ ಬ್ರೇಕ್​ ಮಾಡೋಕೆ ಕುರುಕ್ಷೇತ್ರ ಟೀಂ ತಯಾರಿ ನಡೆಸ್ತಿರೋದು ಸುಳ್ಳಲ್ಲ.

ಕುರುಕ್ಷೇತ್ರ.. ಕನ್ನಡ ಚಿತ್ರರಂಗದ ಮಹಾ ದೃಶ್ಯಕಾವ್ಯ.. ಬಹಳ ವರ್ಷಗಳ ನಂತ್ರ ಕನ್ನಡದಲ್ಲಿ ನಿರ್ಮಾಣವಾಗಿರೋ ಬಹುತಾರಾಗಣದ ಪೌರಾಣಿಕ ಚಿತ್ರ.. ಬಹುಕೋಟಿ ವೆಚ್ಚದ ಅದ್ದೂರಿ 3D ಸೆಲ್ಯೂಲಾಯ್ಡ್.. ಸೌತ್ ಸಿನಿದುನಿಯಾದಲ್ಲಿ ಹೊಸ ದಾಖಲೆ ಬರೆಯೋಕೆ ಸಜ್ಜಾಗಿರೋ ಕನ್ನಡ ಸಿನಿಮಾ.. ಸ್ಯಾಂಡಲ್​ವುಡ್​ ಬಾಕ್ಸಾಫೀಸ್​ನಲ್ಲಿ ಹೊಸ ದಾಖಲೆ ಬರೆಯೋಕೆ ಸಜ್ಜಾಗಿರೋ ಅಪರೂಪದ ಚಿತ್ರ..

ಮಹಾಕಾವ್ಯ ಮಹಾಭಾರತದ ಕುರುಕ್ಷೇತ್ರ ಕಥೆಯನ್ನ ಆಧರಿಸಿ, ನಾಗಣ್ಣ ನಿರ್ದೇಶಿಸಿರೋ ಸಿನಿಮಾ ಕುರುಕ್ಷೇತ್ರ.. ದುರ್ಯೋಧನನ ಪಾತ್ರವನ್ನ ಕೇಂದ್ರವಾಗಿಸಿಕೊಂಡು ಇಡೀ ಚಿತ್ರವನ್ನ ಕಟ್ಟಿಕೊಟ್ಟಿದೆ ಚಿತ್ರತಂಡ.. ದುರ್ಯೋಧನನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಣ್ಣ ಹಚ್ಚಿದ್ದು, ಚಿತ್ರ ಇನ್ನಿಲ್ಲದ ಕುತೂಹಲ ಕೆರಳಿಸುವಂತೆ ಮಾಡಿದೆ..ದಕ್ಷಿಣ ಭಾರತ ಚಿತ್ರರಂಗದ ಘಟಾನುಘಟಿ ಕಲಾವಿದರು ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದಾರೆ.

ಪದೇ ಪದೇ ಬದಲಾಗ್ತಿದೆ ಕುರುಕ್ಷೇತ್ರ ರಿಲೀಸ್ ಡೇಟ್
ಕಾದು ಕಾದು ಸುಸ್ತಾದ್ರು ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್

ಯೆಸ್​.. ಕುರುಕ್ಷೇತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ತಡವಾಗ್ತಿದ್ದು, ಅಭಿಮಾನಿಗಳು ಕಾದು ಕಾದು ತಣ್ಣಗಾಗಿದ್ದಾರೆ.. ಇಡೀ ಕುರುಕ್ಷೇತ್ರ ಚಿತ್ರ 2D ಮತ್ತು 3D ವರ್ಷನ್​ಗಳಲ್ಲಿ ನಿರ್ಮಾಣವಾಗ್ತಿದೆ.. ವಿಎಫ್​ಎಕ್ಸ್​ ಜೊತೆಗೆ 3D ಪೋಸ್ಟ್​ ಪ್ರೋಡಕ್ಷನ್​​ ವರ್ಕ್ ತಡವಾಗ್ತಿದೆ.. ಅದೇ ಕಾರಣಕ್ಕೆ 3D ಫೈನಲ್ ಕಾಪಿ ರೆಡಿಯಾಗೋಕ್ಕೆ ಸಾಕಷ್ಟು ಸಮಯ ಕೇಳ್ತಿದ್ದು, ಸಿನಿಮಾ ಬಿಡುಗಡೆ ತಡವಾಗ್ತಿದೆ.. ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗದೇ ತಡವಾದ್ರೂ, ಪರವಾಗಿಲ್ಲ ಓಟ್​​ಫುಟ್​​​​ ಅದ್ಭುತವಾಗಿರಬೇಕು ಅನ್ನೋ ಲೆಕ್ಕಾಚಾರದಲ್ಲಿದೆ ಕುರುಕ್ಷೇತ್ರ ಟೀಂ..

ದಾಖಲೆ ಮುರಿಯೋಕೆ ಕುರುಕ್ಷೇತ್ರ ಚಿತ್ರತಂಡದಿಂದ ಸೀಕ್ರೆಟ್ ಪ್ಲಾನ್..!

ಕುರುಕ್ಷೇತ್ರ ಸಿನಿಮಾ ತಡವಾಗ್ತಿರೋದೇನೋ ನಿಜ.. ಆದ್ರೆ ಸಿನಿಮಾ ಬರೋದೇ ಇಲ್ಲ ಅನ್ನೋದೆಲ್ಲಾ ತಪ್ಪಾಗತ್ತೆ.. ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ರಿಲೀಸ್​ ಮಾಡದೇ ಇರೋಕ್ಕಾಗತ್ತಾ..? ನಿರ್ಮಾಪಕರು ಸಿನಿಮಾ ರಿಲೀಸ್​ಗೆ ಸೈಲೆಂಟ್​ ಆಗಿ ಭರ್ಜರಿ ಕಸರತ್ತು ನಡೆಸ್ತಿದ್ದಾರೆ.. ಹಾಕಿರೋ ಬಂಡವಾಳವನ್ನ ಲಾಭದ ಸಮೇತ ವಾಪಸ್ ಪಡೆಯೋಕ್ಕೆ ಸೀಕ್ರೆಟ್ ಪ್ಲಾನ್ ರೂಪಿಸಿದ್ದಾರೆ.. ಅಕ್ಟೋಬರ್​ನಲ್ಲಿ ದಿ ವಿಲನ್ ಸಿನಿಮಾ ತೆರೆಗಪ್ಪಳಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲಿದೆ.. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ದಿ ವಿಲನ್ ಅಬ್ಬರ ಶುರುವಾಗ್ತಿದ್ದು, ಈ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸಾಫೀಸ್​ನಲ್ಲಿ ಹೊಸ ದಾಖಲೆ ಬರೆಯೋದು ಪಕ್ಕಾ..

ರಾಜ್ಯದ 500 ಸ್ಕ್ರೀನ್​ಗಳಲ್ಲಿ ರಾಮ-ರಾವಣರ ಆರ್ಭಟ..!
600 ಸ್ಕ್ರೀನ್​ಗಳಲ್ಲಿ ಶುರು ದುರ್ಯೋಧನನ ದರ್ಬಾರ್..!

ರಾಜ್ಯದ 500 ಸ್ಕ್ರೀನ್​ಗಳು ಸೇರಿದಂತೆ ವಿಶ್ವದಾದ್ಯಂತ 1000 ಸ್ಕ್ರೀನ್​ಗಳಲ್ಲಿ ವಿಲನ್ಸ್ ಅಬ್ಬರ ಶುರುವಾಗಲಿದೆ.. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ದಿ ವಿಲನ್ ಸಿನಿಮಾ ನಿರ್ಮಾಣವಾಗ್ತಿರೋದ್ರಿಂದ ಆಂಧ್ರ, ತಮಿಳುನಾಡಿನ ನೂರಾರು ಸ್ಕ್ರೀನ್​ಗಳಿಗೆ ಸಿನಿಮಾ ಅಪ್ಪಳಿಸಲಿದೆ.. ದಿ ವಿಲನ್ ದಾಖಲೆಯನ್ನ ಮತ್ತೊಂದು ಸಿನಿಮಾ ಬ್ರೇಕ್​ ಮಾಡಲೇಬೇಕಲ್ವಾ..? ಕುರುಕ್ಷೇತ್ರ ಸಿನಿಮಾ ಮೂಲಕ ಅಂತಾದೊಂದು ಪ್ರಯತ್ನದಲ್ಲಿದ್ದಾರೆ ನಿರ್ಮಾಪಕರು..

ಕುರುಕ್ಷೇತ್ರ ಸಿನಿಮಾ 2D ಮತ್ತು 3D ರೂಪದಲ್ಲಿ ತೆರೆಗೆ ಬರ್ತಿದೆ.. ಆದ್ರೆ, ಕನ್ನಡದಲ್ಲಿ ಮಾತ್ರ ಸಿನಿಮಾ ನಿರ್ಮಾಣವಾಗ್ತಿದೆ.. ಅದೇ ಕಾರಣಕ್ಕೆ ದಿ ವಿಲನ್​ಗಿಂತ ಗ್ರ್ಯಾಂಡಾಗಿ ಕುರುಕ್ಷೇತ್ರ ಚಿತ್ರ ರಿಲೀಸ್​ಗೆ ಪ್ಲಾನ್ ಮಾಡಲಾಗ್ತಿದೆ.. ದಿ ವಿಲನ್ ಸಿನಿಮಾ ಬಂದು ಹೋಗ್ತಿದಂತೆ ರಾಜ್ಯದ 600 ಸ್ಕ್ರೀನ್​ಗಳನ್ನ ಬ್ಲಾಕ್ ಮಾಡಿ, ಕುರುಕ್ಷೇತ್ರ ವೈಭವ ತೋರಿಸೋಕೆ ಚಿಂತಿಸಲಾಗ್ತಿದೆ.. ಅಷ್ಟೆ ಅಲ್ಲ ಬೇಡಿಕೆ ಇರುವ ಕಡೆ ಪ್ರತಿದಿನ ನಾಲ್ಕು ಶೋ ಬದಲಾಗಿ 6 ಶೋ ನಡೆಸೋ ಸಿದ್ಧತೆ ನಡೀತಿದೆ.. ಕರ್ನಾಟಕ ಬಾಕ್ಸಾಫೀಸ್​​​ನ ಕುರುಕ್ಷೇತ್ರ ಟೀಮ್ ಟಾರ್ಗೆಟ್ ಮಾಡ್ಕೊಂಡಿದೆ..

ಕುರುಕ್ಷೇತ್ರ ಸಿನಿಮಾ ಇದ್ದಕ್ಕಿದಂತೆ ಸೈಲೆಂಟ್ ಆಗ್ಬಿಡ್ತು ಅಂತ ಎಲ್ಲರೂ ಅಂದುಕೊಂಡಿದ್ದಾರೆ.. ಅದಕ್ಕೆ ಕಾರಣ ಒಂದು ಪೋಸ್ಟ್ ಪ್ರೋಡಕ್ಷನ್​ ತಡವಾಗ್ತಿರೋದಾದ್ರೆ, ಮತ್ತೊಂದು ಸಿನಿಮಾ ರಿಲೀಸ್ ಪ್ಲಾನ್.. ಯೆಸ್​​.. ಸೀಕ್ರೆಟ್​​ ಆಗಿ ರಿಲೀಸ್​​ಗೆ ತಯಾರಿ ಮಾಡ್ಕೊಂಡು ಅಖಾಡಕ್ಕಿಳಿತ್ತಿದೆ ಚಿತ್ರತಂಡ.. ಥಿಯೇಟರ್​​ಗಳಲ್ಲಿ ಭದ್ರ ಕೋಟೆ ಕಟ್ಟಿಕೊಂಡು, ಕುರುಕ್ಷೇತ್ರ ವೈಭವವನ್ನ ಚಿತ್ರಸಿರಕರಿಗೆ ತೋರಿಸೋ ಪ್ರಯತ್ನ ನಡೀತಿದೆ..

ಒಮ್ಮೆ ಫೈನಲ್ ಕಾಪಿ ಸಿಕ್ರೆ, ಆಡಿಯೋ ಲಾಂಚ್ ಮಾಡಿ, ಸಿಲ್ವರ್ ಸ್ಕ್ರೀನ್​ಗೆ ಚಿತ್ರವನ್ನ ತರಲಾಗ್ತುತ್ತೆ.. ಅಷ್ಟೆ ಅಲ್ಲ ದಿ ವಿಲನ್ ಬಾಕ್ಸಾಫೀಸ್​ ದಾಖಲೆ ಮುರಿದು, ಮತ್ತ್ಯಾವುದೇ ಸಿನಿಮಾ, ಹತ್ತಿರ ಕೂಡ ಸುಳಿಯೋಕೆ ಸಾಧ್ಯವಾಗದಂತ ಬಾಕ್ಸಾಫೀಸ್ ದಾಖಲೆ ನಿರ್ಮಾಣ ಮಾಡೋ ಲೆಕ್ಕಾಚಾರ ಶುರುವಾಗಿದೆ.. ಸಾಮಾನ್ಯವಾಗಿ ಪೌರಾಣಿಕ ಸಿನಿಮಾಗಳು ಬರೋದಿಲ್ಲ.. ಆದ್ರೆ, ಸದ್ಯ ಬರ್ತಿರೋ ಕುರುಕ್ಷೇತ್ರ ಸಿನಿಮಾವನ್ನ ಕನ್ನಡ ಚಿತ್ರರಸಿಕರ ನೆನಪಿನಲ್ಲಿ ಉಳಿಯುವಂತೆ ಮಾಡ್ಬೇಕು, ಪರಭಾಷಿಕರು ಈ ಚಿತ್ರದ ಬಗ್ಗೆ ಮಾತನಾಡುವಂತೆ ಮಾಡೋ ಪ್ರಯತ್ನದಲ್ಲಿದೆ ಚಿತ್ರತಂಡ..

ಒಟ್ಟಾರೆ ದುರ್ಯೋಧನನಾಗಿ ದರ್ಶನ್, ಶ್ರೀಕೃಷ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಮನಾಗಿ ಡ್ಯಾನಿಶ್ ಸೇಠ್, ಭೀಷ್ಮನ ಅವತಾರದಲ್ಲಿ ಅಂಬರೀಶ್, ದ್ರೌಪದಿ ಪಾತ್ರದಲ್ಲಿ ಸ್ನೇಹ, ಅರ್ಜುನನಾಗಿ ಸೋನುಸೂದ್, ಅಭಿಮನ್ಯುವಾಗಿ ನಿಖಿಲ್ ಕುಮಾರ್ ಹೀಗೆ ದೊಡ್ಡ ತಾರಾಗಣದ ಕುರುಕ್ಷೇತ್ರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸೋ ಲಕ್ಷಣಗಳು ದಟ್ಟವಾಗಿದೆ..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *