ಸೆ.17ರವರೆಗೆ ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನ ವಿಸ್ತರಣೆ

ನಕ್ಸಲ್ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಗೃಹಬಂಧನದಲ್ಲಿರುವ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ ಅವಧಿಯನ್ನು ಸುಪ್ರೀಂಕೋರ್ಟ್​ ಸೆಪ್ಟೆಂಬರ್ 17ರವರೆಗೆ ವಿಸ್ತರಿಸಿದೆ.

ಕಳೆದ ತಿಂಗಳು ಪುಣೆಯ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಐವರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧನ ಖಂಡಿಸಿದ್ದ ಮಾನವ ಹಕ್ಕುಗಳ ಹೋರಾಟಗಾರರು ಬಿಡುಗಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ವಾರ ಸುದ್ದಿಗೋಷ್ಠಿ ಮಾಡಿದ್ದ ಪೊಲೀಸರು, ರಾಜಕೀಯ ಭಿನ್ನಮತ ಅಥವಾ ಸಿದ್ಧಾಂತ ವಿರೋಧಗಳ ಕುರಿತು ತಮ್ಮ ಆಕ್ಷೇಪ ಇಲ್ಲ. ಆದರೆ ಬಂಧಿತರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಸಾಕ್ಷ್ಯವಿದೆ ಎಂದು ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಗೃಹ ಬಂಧನ ಅವಧಿಯನ್ನು ವಿಸ್ತರಿಸಿತು.

ಸಾಮಾಜಿಕ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೆ ಆಗಸ್ಟ್ 28ರಂದು ದಾಳಿ ಮಾಡಿದ್ದ ಪೊಲೀಸರು ಲ್ಯಾಪ್​ಟಾಪ್​, ಫೋನ್, ಕಂಪ್ಯೂಟರ್ ಮುಂತಾದವುಗಳನ್ನು ವಶಪಡಿಸಿಕೊಂಡಿದ್ದರು.

ಹಿರಿಯ ಪತ್ರಕರ್ತ, ಕವಿ ವರವರ ರಾವ್, ವೆರ್ನೂನ್ ಗೊನ್ಜಾಲ್ವೆಜ್, ಅರುಣ್ ಫೆರೆರಾ, ಸುಧಾ ಭಾರಧ್ವಾಜ್ ಮತ್ತು ಗೌತಮ್ ನಾವಲಕ ಅವರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಪೊಲೀಸ್ ಅಥವಾ ನ್ಯಾಯಾಂಗ ವಶಕ್ಕೆ ನೀಡಲು ನಿರಾಕರಿಸಿದೆ.

Recommended For You

Leave a Reply

Your email address will not be published. Required fields are marked *