ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ : ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ.!

ಬೆಂಗಳೂರು : ನಾಡಿನಾದ್ಯಂತ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಿಲಿಕಾನ್​ ಸಿಟಿ ಜನ್ರು, ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆ.ಆರ್ ಮಾರ್ಕೆಟ್ ನಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು.

ಹೂ -ಹಣ್ಣುಗಳ ಬೆಲೆ ಗಗನೆಕ್ಕೆರಿದ್ರೂ, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಸಂಭ್ರಮದಿಂದಲೇ ಗೌರಿ-ಗಣೇಶ ಪೂಜೆಗೆ ಬೇಕಾದ ಬಾಳೆ ಗಿಡ, ಮಾವಿನ ತೋರಣ. ಅಡಿಕೆ ಮಾಲೆ, ಹೊಂಬಾಳೆ, ಬೇವಿನ ಸೊಪ್ಪು, ಸೇರಿದಂತೆ ಗೌರಿಗೆ ಬಾಗಿನ ಅರ್ಪಿಸಲು ಮಹಿಳೆಯರು ಎಲ್ಲಾ ಪೂಜಾ ಸಾಮಗ್ರಿಗಳನ್ನ ಕೊಂಡು ಕೊಳ್ಳೊದ್ರಲ್ಲಿ ಫುಲ್​ ಬ್ಯುಸಿಯಾಗಿದ್ರು.

ಇನ್ನು ಗೌರಿ-ಗಣೇಶ ಹಬ್ಬದ ಹಿನ್ನಲೆ ನಗರದ ಬಹುತೇಕ ಮಾರ್ಕೆಟ್​ ಗಳಲ್ಲಿ ಹೂ, ಹಣ್ಣುಗಳ ಬೆಲೆ ಏರಿಕೆಯಾಗಿತ್ತು.. ಇನ್ನೂ ಇವತ್ತಿನ ಹಣ್ಣು, ಹೂಗಳ ಬೆಲೆ ಹೇಗಿತ್ತು ಅಂತ ನೋಡೋದಾದ್ರೆ..

ಮಾರುಕಟ್ಟೆಯಲ್ಲಿ ಹೂವಿನ ಬೆಲೆ

  • ಮಲ್ಲಿಗೆ – ಕೆಜಿಗೆ 1000 ರೂ
  • ಕನಕಾಂಬರ- ಕೆಜಿಗೆ 1000 ರೂ
  • ರೋಜ್​​- ಕೆಜಿಗೆ  200ರೂ
  • ಸೇವಂತಿಗೆ- ಕೆಜಿಗೆ 240 ರೂ
  • ಚೆಂಡು ಹೂ – ಕೆಜಿಗೆ 120 ರೂ

ಮಾರುಕಟ್ಟೆಯ ಹಣ್ಣಿಗಳ ಬೆಲೆ

  • ಸೇಬು- ಕೆಜಿಗೆ- 80 ರೂ
  • ದಾಳಿಂಬೆ- ಕೆಜಿಗೆ -80 ರೂ
  • ಮೂಸಿಂಬೆ- ಕೆಜಿಗೆ-60 ರೂ
  • ದ್ರಾಕ್ಷಿ – ಕೆಜಿಗೆ- 60 ರೂ
  • ಸಪೋಟ- ಕೆಜಿಗೆ- 100 ರೂ

ಗೌರಿ-ಗಣೇಶ ಹಬ್ಬದ ಹಿನ್ನಲೆ ಇವತ್ತು ಮಾರ್ಕೆಟ್​ನಲ್ಲಿ ಹಣ್ಣು- ಹೂವುಗಳ ಬೆಲೆಯಲ್ಲೂ ಸಾಕಷ್ಟು ಬೆಲೆ ಏರಿಕೆಯಾಗಿತ್ತು. ಆದ್ರೆ ಹಬ್ಬದ ಜೋಶ್​ನಲ್ಲಿ ಇದ್ಯಾವುದನ್ನ ಲೆಕ್ಕಿಸದ ಮೆಟ್ರೋ ಮಂದಿ ಗೌರಿ-ಗಣೇಶ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಿದ್ರು..

ವರದಿ : ವೀಣಾ ಸಿದ್ದಾಪುರ, ಟಿವಿ5 ಬೆಂಗಳೂರು

Recommended For You

Leave a Reply

Your email address will not be published. Required fields are marked *