5ನೇ ಟೆಸ್ಟ್​: ರಾಹುಲ್, ರಿಷಭ್​ ಶತಕ, ಭಾರತಕ್ಕೆ ವಿರೋಚಿತ ಸೋಲು

ಆರಂಭಿಕ ಕೆ.ಎಲ್. ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಶತಕಗಳ ಹೊರತಾಗಿಯೂ ಭಾರತ ತಂಡ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 118 ರನ್​ಗಳಿಂದ ಸೋಲುಂಡಿದೆ. ಇದರೊಂದಿಗೆ ಆತಿಥೇಯ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಿಂದ ಗೆದ್ದು ಬೀಗಿತು.

ಗೆಲ್ಲಲು 464 ರನ್​ಗಳ ಕಠಿಣ ಗುರಿ ಪಡೆದ ಭಾರತ ತಂಡ 121 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಜೊತೆಯಾದ ಕೆ.ಎಲ್​. ರಾಹುಲ್ 204 ರನ್​ ಗಳ ಜೊತೆಯಾಟ ನಿಭಾಯಿಸಿದರು. ಆದರೂ ಭಾರತ ಚಹಾ ವಿರಾಮದ ನಂತರ ಸತತ ವಿಕೆಟ್ ಕಳೆದುಕೊಂಡು 345 ರನ್​ಗಳಿಗೆ ಆಲೌಟಾಯಿತು.

ಕೆ.ಎಲ್. ರಾಹುಲ್ 224 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 149 ರನ್ ಬಾರಿಸಿ ಔಟಾದರು. ಇದು ಸರಣಿಯಲ್ಲಿ ಮೊದಲ ಶತಕವಾದರೆ ಒಟ್ಟಾರೆ ಟೆಸ್ಟ್​ನಲ್ಲಿ 5ನೇ ಶತಕವಾಗಿದೆ.

ALSO READ  ಫೈನಲ್​ ಪಂದ್ಯ ಗೆಲ್ಲಲು ಮೋದಿ ಮೊರೆ ಹೋದ ಧೋನಿ

ಮತ್ತೊಂದೆಡೆ ರಿಷಭ್ 146 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ 114 ರನ್ ಸಿಡಿಸಿದರು. ಈ ಮೂಲಕ ರಿಷಭ್ ಇಂಗ್ಲೆಂಡ್ ಸರಣಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತದ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾದರು. ಅಲ್ಲದೇ ಇದು ರಿಷಭ್​ಗೆ ಚೊಚ್ಚಲ ಶತಕವೂ ಹೌದು.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ 332 ಮತ್ತು 8 ವಿಕೆಟ್​ಗೆ 423 ಡಿಕ್ಲೇರ್
  • ಭಾರತ 292 ಮತ್ತು 2ನೇ ಇನಿಂಗ್ಸ್ 345 (ರಾಹುಲ್ 149, ರಿಷಭ್ 114, ಆ್ಯಂಡರ್ಸನ್ 45/3, ರಶೀದ್ 63/2).
  • ಪಂದ್ಯಶ್ರೇಷ್ಠ: ಅಲಿಸ್ಟರ್ ಕುಕ್​
  • ಸರಣಿಶ್ರೇಷ್ಠ: ಸ್ಯಾಮ್ ಕುರಾನ್, ವಿರಾಟ್ ಕೊಹ್ಲಿ