Top

ಜೆಡಿಎಸ್ ಸಂಪರ್ಕದಲ್ಲಿ 10 ಬಿಜೆಪಿ ಶಾಸಕರು: ಸಾ.ರಾ. ಮಹೇಶ್ ತಿರುಗೇಟು

ಜೆಡಿಎಸ್ ಸಂಪರ್ಕದಲ್ಲಿ 10 ಬಿಜೆಪಿ ಶಾಸಕರು: ಸಾ.ರಾ. ಮಹೇಶ್ ತಿರುಗೇಟು
X

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಸಹಾ 20 ವರ್ಷ ಬಿಜೆಪಿಯಲ್ಲಿದ್ದವನು. ಈ ರಾಜಕಾರಣ ಮಾಡಲು ನಮಗೂ ಬರುತ್ತದೆ ಎಂದು ಬಿಜೆಪಿ ನಾಯಕರಿಗೆ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್​, ನಮ್ಮ ಶಾಸಕರಲ್ಲಿ ಒಬ್ಬ ಶಾಸಕನನ್ನು ಸೆಳೆಯಲು ಪ್ರಯತ್ನಿಸಿದರೆ ಅದರ ಪರಿಣಾಮವನ್ನು ಬಿಜೆಪಿಯವರು ಎದುರಿಸಬೇಕಾಗುತ್ತದೆ. ಜೆಡಿಎಸ್ ಶಕ್ತಿ ಏನು ಅಂತ ತೋರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡುತ್ತಿದೆ. ಕೆಲ ಮಾಧ್ಯಮದಲ್ಲಿ ಕೆಲವು ಊಹಾಪೋಹಗಳು ಬರುತ್ತಿವೆ. ಕೆಲವು ಬಿಜೆಪಿ ಮುಖಂಡರು ಇನ್ನೂ ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ಅವರು ಬಿಜೆಪಿ ತೊರೆಯಲು ಸಿದ್ಧರಿದ್ದಾರೆ ಎಂದು ಮಹೇಶ್ ನುಡಿದರು.

ನಾವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಕೆಲವರಿಗೆ ಇಲ್ಲ ಸಲ್ಲದ ಆಸೆ ತೋರಿಸಿ ಅಸ್ಥಿರಗೊಳಿಸುವ ಕೆಲ ಪ್ರಯತ್ನ ನಡೆದಿದೆ. ನಮ್ಮದು ಪ್ರಾದೇಶಿಕ ಪಕ್ಷವೇ ಆಗಿರಬಹುದು. ನಮಗೆ ಕೆಲಸ ಮಾಡಲು ಬಿಡಿ ಎಂದು ಸಾ.ರಾ.ಮಹೇಶ್ ನುಡಿದರು.

Next Story

RELATED STORIES