ಸಿದ್ದು ಸರ್ಕಾರದ ವೇಳೆ ಪ್ರಯಾಣ ಭತ್ಯೆ ಹೆಸರಲ್ಲಿ ಕೋಟಿ ಕೋಟಿ ಖರ್ಚು

ಬೆಳಗಾವಿ : ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಮ್ಮ ಸಚಿವರು ಪ್ರಯಾಣ ಭತ್ಯೆ ಹೆಸರಲ್ಲಿ ಸಾರ್ವಜನಿಕರ ಹಣವನ್ನ ಪೋಲು ಮಾಡಿದ್ದಾರೆ. ಸಿದ್ದು ಸಂಪುಟದಲ್ಲಿದ್ದ 52 ಸಚಿವರು ಬರೊಬ್ಬರಿ 24 ಕೋಟಿ 28 ಲಕ್ಷ ರುಪಾಯಿ ಹಣವನ್ನ ಪಡೆದುಕೊಂಡಿದ್ದಾರೆ.

ಅದರಲ್ಲೂ ಸಿಎಂ ಸಿದ್ದರಾಮಯ್ಯಗಿಂತಲೂ ಸಚಿವರಾಗಿದ್ದ ಖಾದರ್. ಮೂವರು ಸಚಿವರ ಕೋಟಿ ಲೆಕ್ಕದಲ್ಲಿ ಪ್ರಯಾಣ ಭತ್ಯೆಯನ್ನ ಪಡೆದುಕೊಂಡಿರುವ ಅಂಶವನ್ನ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ ಬಯಲಿಗೆ ಎಳೆದಿದ್ದಾರೆ ಮುಂದೆ ಓದಿ..

ಹೌದು…. ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಮ್ಮ ಸಚಿವರು ಪ್ರಯಾಣಭತ್ಯೆಗಾಗಿ ಕೋಟಿ ಕೋಟಿ ಹಣವನ್ನ ವೆಚ್ಚ ಮಾಡಲಾಗಿದೆ… ಸಿದ್ದರಾಮಯ್ಯ ಸಂಪುಟದ ಐದು ವರ್ಷದ ಅವಧಿಯಲ್ಲಿ 52 ಜನ ಸಚಿವರು ಅಧಿಕಾರ ವಹಿಸಿಕೊಂಡಿದ್ದರು.. ಹೀಗೆ ಸಚಿವರ ಪ್ರಯಾಣ ಭತ್ಯೆಗಾಗಿ ಸರ್ಕಾರ ಬರೊಬ್ಬರಿ 24 ಕೋಟಿ 28 ಲಕ್ಷ 2864 ರುಪಾಯಿ ಹಣವನ್ನ ವೆಚ್ಚ ಮಾಡಿದೆ..

ಯಾವ ಯಾವ ಸಚಿವರು ಎಷ್ಟು ಎಷ್ಟು ಪ್ರಯಾಣ ಭತ್ಯೆಗಾಗಿ ಖರ್ಚು

  1.  ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ 1 ಕೋಟಿ 56 ಲಕ್ಷದ 8590 ರುಪಾಯಿ ಪಡೆದು ಪ್ರಥಮ ಸ್ಥಾನದಲ್ಲಿ ಇದ್ದಾರೆ.
  2. ಸಚಿವರಾಗಿದ್ದ ರಮಾನಾಥ ರೈ ಅವರು 1 ಕೋಟಿ 56 ಲಕ್ಷ 36321 ರುಪಾಯಿ ಹಣವನ್ನ ಪಡೆದು 2ನೇ ಸ್ಥಾನದಲ್ಲಿದ್ದರೆ.
  3. ಕಾನೂನು ಸಚಿವ ಟಿ.ಬಿ.ಜಯಚಂದ್ರ 99 ಲಕ್ಷ 72 ಸಾವಿರ ರುಪಾಯಿ ಹಣವನ್ನ ಪಡೆದು 2ನೇ ಸ್ಥಾನದಲ್ಲಿ ಇದ್ದಾರೆ.
  4. ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಈ ಮೂವರು ಸಚಿವರು ಹೆಚ್ಚಿನ ಮೊತ್ತವನ್ನ ಪ್ರಯಾಣಭತ್ಯ ರೂಪದಲ್ಲಿ ಪಡೆದುಕೊಂಡಿರುವು ದಾಖಲೆಗಳನ್ನ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ ಬಹಿರಂಗಗೊಳಿಸಿದ್ದಾರೆ.

ಪ್ರತಿ ಕಿಲೋಮಿಟರ್‌ಗೆ ರೂ.15 ಇದ್ದರೇ, ಸಚಿವರು ರೂ.30 ನೀಡಿ ಓಡಾಟ.!

ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇನೋವಾ ಮಾದರಿಯ ಐಷಾರಾಮಿ ಕಾರುಗಳು ಮಾರುಕಟ್ಟೆಯಲ್ಲಿ ಪ್ರತಿ ಕಿ.ಮಿಗೆ 15 ರುಪಾಯಿ ಬಾಡಿಗೆ ಪಡೆಯಲಾಗುತ್ತದೆ. ಆದ್ರೆ ಸರ್ಕಾರದಿಂದ ನಮ್ಮ ಸಚಿವರು ಪ್ರತಿ ಕಿ.ಮೀಗೆ 30 ರುಪಾಯಿ ಅಂತೆ ಬಾಡಿಗೆಯನ್ನ ಪಡೆದುಕೊಂಡಿದ್ದಾರೆ ನೋಡಿ…

ಸರ್ಕಾರದಿಂದಲೇ ಸಚಿವರುಗಳಿಗೆ ವಾಹನ ಮತ್ತು ಇಬ್ಬರು ಚಾಲಕರನ್ನ ನೀಡಿರುತ್ತಾರೆ. ಆದ್ರೂ ನಮ್ಮ ಸಚಿವರು ಪ್ರಯಾಣ ಭತ್ಯೆ ರೂಪದಲ್ಲಿ ಹೆಚ್ಚಿನ ಹಣವನ್ನ ಪಡೆದುಕೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ.

ಒಟ್ಟ್ನಲ್ಲಿ ನಮ್ಮ ಸಚಿವರು ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ್ದ ಹಣವನ್ನ ಹೀಗೆ ಬೇಕಾಬಿಟ್ಟಿ ಪ್ರಯಾಣ ಭತ್ಯೆ ಹೆಸರಿನಲ್ಲಿ ಪಡೆದುಕೊಂಡಿರುವುದು ದುರಂತ.. ಇನ್ನಾದ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪ್ರಯಾಣ ಭತ್ಯೆ ಹೆಸರಿನಲ್ಲಿ ಜನರ ದುಡ್ಡು ಪೋಲಾಗುತ್ತಿರುವುದನ್ನ ತಡಯಬೇಕಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ