Top

ಗಣೇಶ ಹಬ್ಬಕ್ಕೆ ರಾಕಿಂಗ್ ಸ್ಟಾರ್ ಕೊಟ್ಟೇ ಬಿಟ್ರು ಸ್ವೀಟ್ ನ್ಯೂಸ್..!

ಕೆಜಿಎಫ್​ ಅಡ್ಡಾದಿಂದ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.. ಅದ್ಯಾವಾಗ ಹೈವೋಲ್ಟೇಜ್ ಕೆಜಿಎಫ್​ ಟ್ರೈಲರ್ ರಿಲೀಸ್ ಆಗುತ್ತೆ, ಸಿಲ್ವರ್​ ಸ್ಕ್ರೀನ್ ಮೇಲೆ ಕೆಜಿಎಫ್​​ ರಾಕಿ ದರ್ಬಾರ್ ಶುರುವಾಗೋದ್ಯಾವಾಗ..? ಅಂತ ಕಾಯ್ತಿದ್ದವರಿಗೆ ಕೊನೆಗೂ ಕೆಜಿಎಫ್​​ ಟೀಮ್ ಸ್ವೀಟ್ ನ್ಯೂಸ್ ಕೊಟ್ಟಿದೆ.. ಅದೇ ನ್ಯೂಸ್​ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಾಗಿದೆ..

ಬಾಲಿವುಡ್​ ರೇಂಜ್​ ಕನ್ನಡ ಸಿನಿಮಾ.. ಉಗ್ರಂ ಫೇಮ್ ಪ್ರಶಾಂತ್ ನೀಲ್ ಡೈರೆಕ್ಷನ್.. ರಾಕಿಂಗ್ ಸ್ಟಾರ್ ರಾಕಿಂಗ್​ ಪರ್ಫಾರ್ಮೆನ್ಸ್.. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​​​​ನ ಪ್ರೆಸ್ಟೀಜಿಯಸ್​ ಪ್ರಾಜೆಕ್ಟ್.. ಬಹುಕೋಟಿ ವೆಚ್ಚದ ಬಹುತಾರಾಗಣದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್..

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಕೆಜಿಎಫ್.. ಈ ಕಥೆಯನ್ನ ಇಷ್ಟಪಟ್ಟು, ಚಿತ್ರಕ್ಕಾಗಿ ಎರಡು ವರ್ಷ ತಪಸ್ಸು ಮಾಡಿದ್ದಾರೆ ಯಶ್​​​.. 70ರ ದಶಕದ ಕಾಲಘಟ್ಟದ ಕಥೆಯಲ್ಲಿ ರಾಕಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಗಡ್ ಲುಕ್​ನಲ್ಲಿ ಯಶ್​​​ ಕಾಣಿಸಿಕೊಂಡಿದ್ದಾರೆ.. ಈಗಾಗಲೇ ಮೇಕಿಂಗ್ ಸ್ಟಿಲ್ಸ್, ಪೋಸ್ಟರ್​​​, ಟೀಸರ್​​​​ನಲ್ಲಿ ಕೆಜಿಎಫ್​ ರಾಕಿ ಲುಕ್​​​​ಗೆ ಎಲ್ಲರು ಹುಬ್ಬೇರಿಸಿದ್ದಾರೆ..

ಕೆಜಿಎಫ್​​​ ಚಿತ್ರದಲ್ಲಿ ಶ್ರೀನಿಧಿ ರಮೇಶ್ ಶೆಟ್ಟಿ, ಯಶ್​​ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ಧಾರೆ.. ಇನ್ನುಳಿದಂತೆ ಅಚ್ಯುತ್ ಕುಮಾರ್, ನಾಜರ್, ರಮ್ಯಾ ಕೃಷ್ಣ, ಅನಂತ್ ನಾಗ್, ವಶಿಷ್ಠ ಎನ್ ಸಿಂಹ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸ್ತಿದ್ಧಾರೆ.. ಬಜೆಟ್​, ಮೇಕಿಂಗ್ ಸ್ಟೈಲ್​​ನಿಂದ್ಲೇ ಕೆಜಿಎಫ್​ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ.. ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೆಜಿಎಫ್​ ರಾಕಿ ಕಥೆ ಬರ್ತಿರೋದು ಮತ್ತೊಂದು ವಿಶೇಷ..

ಪ್ರಶಾಂತ್ ನೀಲ್ ಅಂಡ್ ಟೀಮ್ 3 ಭಾಷೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಕೆಜಿಎಫ್​​​ ಚಿತ್ರವನ್ನ ಕಟ್ಟಿಕೊಡ್ತಿದೆ.. ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗದೇ ಅಂದುಕೊಂಡ ರೀತಿಯಲ್ಲೇ ಮೇಕಿಂಗ್, ಪೋಸ್ಟ್​​ ಪ್ರೊಡಕ್ಷನ್​​ ಮಾಡ್ತಿರೋದ್ರಿಂದ ರಿಲೀಸ್ ಕೊಂಚ ತಡವಾಗ್ತಿದೆ..

ರಾಕಿ ದರ್ಬಾರ್ ನೋಡೋಕೆ ಕಾದು ಸುಸ್ತಾಗಿರೋ ಫ್ಯಾನ್ಸ್, ಕೆಜಿಎಫ್​ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೆ..? ಸಿನಿಮಾ ಯಾವಾಗ ರಿಲೀಸ್ ಅಂತ ತಲೆಕೆಡಿಸಿಕೊಂಡಿದ್ರು.. ಕೊನೆಗೂ ಕೆಜಿಎಫ್ ಟ್ರೈಲರ್ ಮತ್ತು ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಟೈಮ್ ಫಿಕ್ಸಾಗಿದೆ..

ಗಣೇಶ ಹಬ್ಬಕ್ಕೆ ಒಂದು ದಿನ ಬಾಕಿಯಿರುವಾಗ್ಲೇ ರಾಕಿಂಗ್ ಸ್ಟಾರ್ ಫ್ಯಾನ್ಸ್​​ಗೆ ಸ್ವೀಟ್ ನ್ಯೂಸ್ ಸಿಕ್ಕಿದೆ.. ಸೆಪ್ಟೆಂಬರ್ 19ಕ್ಕೆ ಕೆಜಿಎಫ್​ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡೋದಾಗಿ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.. ಅದೇ ದಿನ ಕೆಜಿಎಫ್​ ಟ್ರೈಲರ್ ರಿಲೀಸ್ ಆದ್ರೂ ಅಚ್ಚರಿ ಪಡ್ಬೇಕಿಲ್ಲ.. ಇನ್ನೂ ಕೆಜಿಎಫ್​ ಟೀಮ್ ರಿವೀಲ್ ಮಾಡಿರೋ ಹೊಸ ಪೋಸ್ಟರ್​​ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ..

ಇನ್ನೂ ನಿರ್ಮಾಪಕರು ಸೆಪ್ಟೆಂಬರ್​ 19ಕ್ಕೆ ಕೆಜಿಎಫ್​​ ಸಿನಿಮಾ ಅಪ್​ಡೇಟ್ಸ್ ಕೊಡೋದಾಗಿ ಮಾಡಿರೋ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.. ಕೆಜಿಎಫ್​​ ಸಿನಿಮಾ ಸುದ್ದಿ ಟ್ರೆಂಡಾಗಿದೆ.. ಬಾಲಿವುಡ್, ಕಾಲಿವುಡ್​​ ಮಂದಿ ಕೂಡ ಕೆಜಿಎಫ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿ, ಚಿತ್ರಕ್ಕಾಗಿ ಕಾತರದಿಂದ ಕಾಯ್ತಿರೋದಾಗಿ ಬರೆದುಕೊಂಡಿದ್ದಾರೆ.. ಆ ಮೂಲಕ ಕೆಜಿಎಫ್​​ ಸಿನಿಮಾ ದೊಡ್ಡದಾಗಿ ಸೌಂಡ್ ಮಾಡ್ತಿದೆ..

ಎಲ್ಲಾ ಅಂದುಕೊಂಡಂತೆ ಆದ್ರೆ, ನವೆಂಬರ್​ನಲ್ಲಿ ಕೆಜಿಎಫ್​ ಸಿನಿಮಾ ತೆರೆಗೆ ಬರೋ ಸಾಧ್ಯತೆಯಿದೆ.. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಕೆಜಿಎಫ್ ರಾಕಿ ಆರ್ಭಟ ಶುರುವಾಗಲಿದ್ದು, ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES