ಡ್ಯಾಶ್ ಮುಚ್ಕೊಂಡು ಕೆಲಸ ಮಾಡಿ: ರಕ್ಷಿತ್​ ಶೆಟ್ಟಿ ಸ್ನೇಹಿತ ಟ್ವೀಟ್

ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ ಬ್ರೇಕಪ್​ ವಿಚಾರಕ್ಕೆ ಸಂಬಂಧಿಸಿ, ರಕ್ಷಿತ್ ಶೆಟ್ಟಿ ಗ್ಯಾಂಗ್ ಕೊನೆಗೆ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸೋಕೆ ಹೊರಟಿದೆ. ಮಾಧ್ಯಮಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡೋ ಮೂಲಕ ಕಿರಿಕ್ ಪಾರ್ಟಿ ಟೀಂ ನಿಜ ಜೀವನದಲ್ಲೂ ಕಿರಿಕ್ ಶುರು ಮಾಡ್ಕೊಂಡಿದೆ.

ಕಳೆದ ಒಂದು ತಿಂಗಳಿಂದ ಹರಿದಾಡ್ತಿದ್ದ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕಪ್ ಸ್ಟೋರಿಯ ಅಂತೆಕಂತೆಗಳಿಗೆ ಕೊನೆಗೂ ಒಂದು ಸ್ಪಷ್ಟ ರೂಒ ಸಿಕ್ಕಿದೆ. ಖುದ್ದು ರಶ್ಮಿಕಾ ಕುಟುಂಬವೇ ಮದುವೆ ಮುರಿದ ವಿಚಾರವನ್ನ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಟೀಂ ಮಾತ್ರ ಇದನ್ನ ಒಪ್ಪಿಕೊಳ್ಳೋಕೆ ಸಿದ್ಧವೇ ಇಲ್ಲ.

ಮಾಧ್ಯಮಗಳಲ್ಲಿ ರಕ್ಷಿತ್- ರಶ್ಮಿಕಾ ಬ್ರೇಕಪ್ ಸುದ್ದಿ ಬಿತ್ತರವಾಗ್ತಿದ್ದಂತೆ, ಮಾಧ್ಯಮಗಳಿಂದಲೇ ಇದೆಲ್ಲಾ ಆಗಿರೋದು ಅಂತ ನೇರವಾಗಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸ್ತಿದೆ ರಕ್ಷಿತ್ ಟೀಂ.. ರಕ್ಷಿತ್ ಮ್ಯಾನೇಜರ್ ಪ್ರವೀಣ್, ‘ಮೀಡಿಯಾ ಮತ್ತು ಟ್ರಾಲ್ ಪೇಜ್​ನವರು ಡ್ಯಾಶ್ ಮುಚ್ಕೊಂಡು ನಿಮ್ಮ ಕೆಲಸ ನೀವು ಮಾಡಿ’ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ..

ಮತ್ತೊಂದೆಡೆ ರಕ್ಷಿತ್ ಆಪ್ತ ಗೆಳೆಯ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಟಿಆರ್​ಪಿಗಾಗಿ ಮಾಧ್ಯಮಗಳು ವೈಯಕ್ತಿಕ ವಿಚಾರಗಳನ್ನ ವೈಭವೀಕರಿಸ್ತಿದ್ದಾರೆ ಅಂತ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಮಾಧ್ಯಮಗಳನ್ನ  ಫೇಸ್ ಮಾಡೋ ಧೈರ್ಯವಿಲ್ಲದೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಗೆ ಗುಡ್​ಬೈ ಹೇಳಿ, ಇದೀಗ ತಮ್ಮ ಗ್ಯಾಂಗ್ ಮೂಲಕ ಎಗರಾಡ್ತಿರೋದು ನಿಜಕ್ಕೂ ಹೇಡಿತನ..

ಮಾಧ್ಯಮ ಸಮಾಜದ ಕೈಗನ್ನಡಿ. ಇರೋದನ್ನ ಇದ್ದಂಗೆ ಸುದ್ದಿ ಮಾಡೋದು ಮಾಧ್ಯಮ ಧರ್ಮ.. ಇದ್ದಿದ್ದನ್ನ ಇದ್ದಂಗೆ ತೋರಿಸಿದ್ದಕ್ಕೆ ರಕ್ಷಿತ್ ಶೆಟ್ಟಿ ಆಪ್ತರು ಈ ರೀತಿ ಅಬ್ಬರಿಸೋದು ಸರಿಯಲ್ಲ.. ಸೆಲೆಬ್ರೆಟಿಗಳು ಅಭಿಮಾನಿಗಳು ಮಾದರಿ ಆಗ್ಬೇಕು.. ಅದು ಬಿಟ್ಟು ಈ ರೀತಿ ಮಾಡೋದು ಎಷ್ಟು ಸರಿ ನೀವೇ ಹೇಳಿ.

Recommended For You

Leave a Reply

Your email address will not be published. Required fields are marked *