ಪ. ಬಂಗಾಳದಲ್ಲೂ ಪೆಟ್ರೋಲ್ ಬೆಲೆ 1 ರೂ. ಇಳಿಕೆ: ರಾಜ್ಯದಲ್ಲಿ ಯಾವಾಗ?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ ಮಾಡಿದ ಬೆನ್ನಲ್ಲೇ ಒಂದೊಂದಾಗಿ ರಾಜ್ಯ ಸರಕಾರಗಳು ದರ ಕಡಿತಗೊಳಿಸಲು ಆರಂಭಿಸಿವೆ. ಆದರೆ ಕರ್ನಾಟಕ ಸರಕಾರ ಯಾವಾಗ? ಎಷ್ಟು ಬೆಲೆ ಇಳಿಸುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

ರಾಜಸ್ಥಾನ, ಆಂಧ್ರಪ್ರದೇಶ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರಕಾರ ಕೂಡ 1 ರೂ. ದರ ಇಳಿಕೆ ಘೋಷಿಸಿದೆ.

ಬಿಜೆಪಿ ಆಡಳಿತದ ರಾಜಸ್ಥಾನ ಸರಕಾರ 2.5ರೂ. ಕಡಿತಗೊಳಿಸಿದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ  ಚಂದ್ರಬಾಬು ನಾಯ್ಡು 2 ರೂ. ಇಳಿಸಿದ್ದರು. ಮಂಗಳವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 1 ರೂ. ಇಳಿಕೆ ಘೋಷಿಸಿದ್ದಾರೆ.

ALSO READ  MSIL ಮದ್ಯದಂಗಡಿ ಓಪನ್‌ಗೆ ಮಹಿಳೆಯರ ವಿರೋಧ