ರಾಕಿಂಗ್‌ ಸ್ಟಾರ್‌ ಯಶ್‌ಗೆ ಟಾಂಗ್‌ ಕೊಡ್ತಿದ್ದಾರಾ ಧ್ರುವ ಸರ್ಜಾ..?

ರಾಕಿಂಗ್ ಸ್ಟಾರ್ ಯಶ್​ನ ನಂತ್ರ ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ಸ್ಟಾರ್​ನ ಮತ್ತೊಂದು ಗಡ್ಡದ ಕಥೆ ಶುರುವಾಗಿದೆ. ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಗ್ ಹೇರ್ ಮತ್ತು ಲಾಂಗ್ ದಾಡಿ ಬಿಡೋದ್ರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದು ರಾಕಿಂಗ್ ಸ್ಟಾರ್ ಯಶ್​ಗೆ ಟಾಂಗ್​ ಕೊಡೋಕ್ಕೆ ಅಂತ್ಲೇ ಮಾಡ್ತಿರೋದಾ ಅಥವಾ ಸಿನಿಮಾಗಾಗಿಯಾ ಅನ್ನೋದ್ರ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಮುಂದೆ ಓದಿ..

ರಾಜಾಹುಲಿ ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್​ವುಡ್​ನ ಮಾಸ್ ಮಹಾರಾಜ. ಇದ್ರಲ್ಲಿ ಯಾವುದೇ ಡೌಟ್ ಇಲ್ಲ. ರಾಕಿ ಏನೇ ಮಾಡಿದ್ರು ಡಿಫರೆಂಟ್ ಅನ್ನೋದು ಸಾಕಷ್ಟು ಬಾರಿ ಪ್ರೂವ್ ಆಗಿದೆ. ಅದ್ರಲ್ಲೂ ಯಶ್​ಗಿರೋ ಸಿನಿಮಾ ಪ್ರೀತಿಗೆ ಅವ್ರ ಜರ್ನಿಯೇ ಒಂದು ಬೆಸ್ಟ್ ಎಕ್ಸಾಂಪಲ್.

ಯಶ್ ಅಂದ್ರೆ ಒಂದು ಹವಾ ಇರುತ್ತೆ, ಅವ್ರ ಸಿನಿಮಾಗಳು ಅಂದ್ರೆ ಕ್ರೇಜ್ ಇರುತ್ತೆ. ಇನ್ನು ಇವ್ರ ಸಿನಿಮಾ ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ಶೇಕ್ ಕೂಡ ಆಗುತ್ತೆ. ಅಷ್ಟರ ಮಟ್ಟಿಗೆ ಚಿತ್ರರಂಗದಲ್ಲಿ ಗತ್ತು, ಗಮ್ಮತ್ತು, ಗಾಂಭೀರ್ಯತೆ, ಸ್ಟಾರ್ಡಮ್, ಸಿನಿಪ್ರಿಯರ ಪ್ರೀತಿ, ಅಭಿಮಾನಿಗಳ ಅಭಿಮಾನ ಸಂಪಾದಿಸಿದ್ದಾರೆ ಕನ್ನಡದ ಈ ಮಾಸ್ಟರ್​ಪೀಸ್.

ಅಜಾತ ಶತ್ರು ಯಶ್​ ಮೇಲೇಕೆ ಹೊಸ ಅಪವಾದ..?
ರಾಕಿಗೆ ‘ಭರ್ಜರಿ’ಟಾಂಗ್ ಕೊಟ್ಟಿದ್ದ ಅಕ್ಷನ್ ಪ್ರಿನ್ಸ್..!

ಯೆಸ್… ತಾನಾಯ್ತು ತನ್ನ ಕೆಲಸ ಆಯ್ತು ಅಂತ ಹಗಲಿರುಳು ಸಿನಿಮಾ ಸಿನಿಮಾ ಅಂತ ಬ್ಯುಸಿ ಇರೋ ಯಶ್​ ಚಿತ್ರರಂಗದಲ್ಲಿ ಒಂಥರಾ ಅಜಾತಶತ್ರು. ಇಂತಹ ಯಶ್​ಗೆ ಟಾಂಗ್ ಕೊಡೋ ಅಂತಹ ಕೆಲಸ ಭರ್ಜರಿ ಸಿನಿಮಾದಲ್ಲಿ ನಡೆದಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹದ್ದೂರ್ ಚೇತನ್ ನಿರ್ದೇಶನದ ಭರ್ಜರಿಯಲ್ಲಿ ಯಶ್​ಗೆ ಭರ್ಜರಿಯಾಗೇ ಟಾಂಗ್ ಕೊಡಲಾಗಿತ್ತು.

‘‘ಬೇಡ.. ಈ ಹೊಡೆದಾಟ ಬೇಡ. ಈ ಜಗಳ ನಿಲ್ಲಿಸು. ಈ ದ್ವೇಷ ಸಾಕು ಅಂತೀನಿ. ಆದ್ರೆ, ನೀವು ಇಲ್ಲ, ನಂದೆ ಹವಾ, ನಂದೇ ಹವಾ’ ಅಂತೀರಾ…?” ಅಂತ ವಿಲನ್​ಗಳಿಗೆ ಧ್ರುವ ಹೇಳೋ ಡೈಲಾಗ್ ಯಶ್ ಫ್ಯಾನ್ಸ್​ನ ಕೆರಳಿಸಿತ್ತು. ಆದ್ರೀಗ ಮತ್ತೊಮ್ಮೆ ಅದೇ ರೀತಿಯ ಮತ್ತೊಂದು ಟಾಂಗ್ ಕೊಡೋಕ್ಕೆ ಸಜ್ಜಾಗಿದ್ದಾರೆ. ಅದೇ ಗಡ್ಡದ ಕಥೆ.

ಕಿರಾತಕನಿಗಾಗಿ ಗಡ್ಡದ ಕಥೆಗೆ ಯಶ್ ಫುಲ್ ಸ್ಟಾಪ್..!
ಸ್ಯಾಂಡಲ್​ವುಡ್ ಅಂಗಳದಲ್ಲಿ ಮತ್ತೊಂದು ಗಡ್ಡದ ಕಥೆ..!

ಕೆಜಿಎಫ್ ಚಿತ್ರದಷ್ಟೇ ಸದ್ದು ಮಾಡಿದ ಟಾಪಿಕ್ ಅಂದ್ರೆ ಅದು ಯಶ್ ಗಡ್ಡ. ಹೌದು… ಸಿನಿಮಾಗಾಗಿ ಎರಡು ವರ್ಷದಿಂದ ಲಾಂಗ್ ಹೇರ್ ಹಾಗೂ ಲಾಂಗ್ ದಾಡಿ ಬಿಟ್ಟುಕೊಂಡಿದ್ದ ಯಶ್, ಸಿನಿಮಾ ಶೂಟಿಂಗ್ ಕಂಪ್ಲೀಟ್ ಆದ್ರೂ ಅದಕ್ಕೆ ಕತ್ತರಿ ಹಾಕಿರಲಿಲ್ಲ.

ವರಮಹಾಲಕ್ಷ್ಮೀ ಹಬ್ಬದ ದಿನ ಸೆಟ್ಟೇರಿದ ಕಿರಾತಕ ಸೀಕ್ವೆಲ್​ಗಾಗಿ ಯಶ್ ಒಲ್ಲದ ಮನಸ್ಸಿನಿಂದಲೇ ಕೊನೆಗೂ ತಮ್ಮ ಲಾಂಗ್ ಹೇರ್ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ರು. ಅದ್ರ ವಿಡಿಯೋ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇದೀಗ ಯಶ್ ರೀತಿ ಧ್ರುವ ಸರ್ಜಾ ಕೂಡ ಲಾಂಗ್ ಹೇರ್ ಬಿಟ್ಟು, ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಇದು ಸಿನಿಮಾಗಾಗಿಯೇ ಅನ್ನೋದು ವಿಶೇಷ. ಆದ್ರೆ ಯಶ್​ಗೆ ಟಾಂಗ್ ಕೊಡೋಕ್ಕೆ ಅಂತ್ಲೇ ಬಿಟ್ಟಿದ್ದಾರಾ ಅನ್ನೋದು ಒಂದಷ್ಟು ಮಂದಿಯ ಪ್ರಶ್ನೆಯಾಗಿದೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಗಡ್ಡದ ಕಥೆ ಶುರುವಾಗಿದೆ.

ಪೊಗರು ಚಿತ್ರಕ್ಕಾಗಿ ಯಶ್​ರಂತೆ ತಯಾರಾದ ಧ್ರುವ..!
ಖಾಸಗಿ ಕಾರ್ಯಕ್ರಮಗಳಿಗೆ ನೋ ಎಂದ ಆಕ್ಷನ್ ಪ್ರಿನ್ಸ್

ಭರ್ಜರಿ ನಂತ್ರ ಧ್ರುವ ಕೈಹಾಕಿರೋ ಸಿನಿಮಾ ಪೊಗರು. ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಆಕ್ಷನ್ ಕಟ್​ನಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಮೊದಲ ಹಂತದ ಶೂಟಿಂಗ್ ಮಾಡಿ ಮುಗಿಸಿದೆ. ಹೈಸ್ಕೂಲ್ ಹುಡ್ಗನ ಪಾತ್ರಕ್ಕಾಗಿ ಸುಮಾರು 25ಕೆಜಿ ತೂಕ ಇಳಿಸಿಕೊಂಡಿದ್ದ ಧ್ರುವ, ಚಿಗುರು ಮೀಸೆ ಹುಡ್ಗನಂತೆ ಆಗಿಬಿಟ್ಟಿದ್ರು. ಆದ್ರೀಗ ಎರಡನೇ ಹಂತದ ಶೂಟಿಂಗ್ ಇದೇ ತಿಂಗಳಾಂತ್ಯಕ್ಕೆ ಶುರುವಾಗಲಿದ್ದು, ಮತ್ತೊಂದು ಗೆಟಪ್​ಗಾಗಿ ಬರೋಬ್ಬರಿ 35ಕೆಜಿ ತೂಕ ಹೆಚ್ಚಿಸಿಕೊಳ್ತಿದ್ದಾರಂತೆ.

ಪ್ರತೀ ದಿನ ನಾಲ್ಕೈದು ತಾಸು ಜಿಮ್​ನಲ್ಲಿ ಬೆವರು ಹರಿಸ್ತಿರೋ ಧ್ರುವ, ಒಂದ್ಕಡೆ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ತಿದ್ದಾರೆ. ಮತ್ತೊಂದ್ಕಡೆ ಅದೇ ಪಾತ್ರಕ್ಕಾಗಿ ಲಾಂಗ್ದ ಹೇರ್ ಹಾಗೂ ಉದ್ದನೆಯ ಗಡ್ಡ ಕೂಡ ಬೆಳೆಸ್ತಿದ್ದಾರೆ. ಗೆಟಪ್ ರಿವೀಲ್ ಆಗ್ಬಾರ್ದು ಅನ್ನೋ ಉದ್ದೇಶದಿಂದ ಖಾಸಗಿ ಕಾರ್ಯಕ್ರಮಗಳಿಗೆಲ್ಲಾ ನೋ ಅಂತಿರೋ ಧ್ರುವ, ಇತ್ತೀಚೆಗೆ ನಡೆದ ಕೆಸಿಸಿ ಕ್ರಿಕೆಟ್ ಟೂರ್ನ್​ಮೆಂಟ್​ಗೂ ಬಂದಿಲ್ಲ.

ಆದ್ರೂ ಸಹ ಧ್ರುವ ಗಡ್ಡದ ಕಥೆ ಈಗೀಗ ರಿವೀಲ್ ಆಗ್ತಾ ಇದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರೋ ಫೋಟೋಗಳಿಂದ ಗೆಟಪ್ ರಿವೀಲ್ ಆಗಿದೆ. ಎಲ್ಲೋ ಒಂದು ಕಡೆ ಕೆಜಿಎಫ್​ಗಾಗಿ ಯಶ್ ರೂಪಿಸಿಕೊಂಡಿದ್ದ ಗೆಟಪ್​ನ ಮೀರಿಸೋಕೆ ಧ್ರುವ ಟ್ರೈ ಮಾಡಿದಂತಿದೆ. ಅದೇನೇ ಇರಲಿ, ಅದು ಸಿನಿಮಾಗಷ್ಟೇ ಸೀಮಿತವಾಗಿ ಫ್ಯಾನ್ ವಾರ್ ನಡೆಯದಿದ್ದರಷ್ಟೇ ಸಾಕು ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Recommended For You

Leave a Reply

Your email address will not be published. Required fields are marked *