Top

ಗೊಂದಲ ಇರೋದು ನಿಜ. ಬಗೆಹರಿಸಿಕೊಳ್ತೀವಿ: ಜಾರಕಿಹೊಳಿ

ಗೊಂದಲ ಇರೋದು ನಿಜ. ಬಗೆಹರಿಸಿಕೊಳ್ತೀವಿ: ಜಾರಕಿಹೊಳಿ
X

ಬೆಳಗಾವಿ ರಾಜಕಾರಣದಲ್ಲಿ ಸ್ವಲ್ಪ ಸಮಸ್ಯೆಯಿದೆ. ರಮೇಶ್ ಮತ್ತು ನನ್ನ ನಡುವೆಯೂ ಸಮಸ್ಯೆ ಇದೆ. ಎಲ್ಲಾ ಸಮಸ್ಯೆ ಬಗೆಹರಿಸಿಕೊಳ್ಳುವ ಶಕ್ತಿ ನಮಗಿದೆ. ಬೇರೆಯವರು ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಸೋಲುಂಟಾಗಿದ್ದರಿಂದ ಅಸಮಾಧಾನಗೊಂಡಿದ್ದು, ಬಿಜೆಪಿಗೆ ವಲಸೆ ಹೋಗುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ನಿನ್ನೆ ನಮ್ಮ‌ ಸಹೋದರನನ್ನ ಭೇಟಿ ಮಾಡಿಲ್ಲ. ಇವತ್ತು ಭೇಟಿ ಮಾಡಿ ಮಾತನಾಡುತ್ತೇನೆ. ನನ್ನ, ರಮೇಶ್ ನಡುವೆ ಕೆಲವು ವಿಷಯದಲ್ಲಿ ಭಿನ್ನಾಬಿಪ್ರಾಯವಿದೆ. ಆದರೆ ನಾವಿಬ್ಬರೂ ಒಂದಾಗಿಯೇ ಇದ್ದೇವೆ ಎಂದರು.

ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆಯಲ್ಲಿ ನಮಗೆ ಮುಖಭಂಗವೇನು ಆಗಿಲ್ಲ. 14ರಲ್ಲಿ 13ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದೇವೆ. ಅಧ್ಯಕ್ಷ ನಮ್ಮದೇ ಆಗಬೇಕಿತ್ತು. ಹಾಗೆಯೇ ಆಯ್ತು. ನಾವು ಅಂದುಕೊಂಡಂತೇಯೇ ಎಲ್ಲವೂ ಆಗಿದೆ. ಹಿಂದೆ ಬಹಳಷ್ಟು ಗೊಂದಲವಿತ್ತು. ಈಗ ಬಗೆಹರಿದಿದೆ ಎಂದು ಅವರು ಸ್ಪಷ್ಟಪಡಿಸಿದರು.

ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸಿಲ್ಲ. ಹೆಬ್ಬಾಳ್ಕರ್ ಹೇಳುವುದರಲ್ಲಿ ಸತ್ಯವಿಲ್ಲ. ಘರ್ಷಣೆಯಾಗಿದ್ದು ನಿಜ,ಗೊಂದಲ ಬಗೆಹರಿದಿದ್ದು ನಿಜ ಎಂದ ಜಾರಕಿಹೊಳಿ, ನಾನು ಮುಖ್ಯಮಂತ್ರಿ ಯಾಕಾಗಬಾರದು? ಇನ್ನು 10 ವರ್ಷಗಳಲ್ಲಿ ಆಗಬೇಕು ಅನ್ನೊ ಆಸೆಯಿದೆ ಎಂದರು.

ನಾನಂತೂ ಲೋಕಸಭಾ ಚುನಾವಣೆಗೆ ನಿಲಲ್ಲ. ನನಗೆ ರಾಜ್ಯ ರಾಜಕಾರಣವೇ ಸಾಕು. ಮೂವರ ಹೆಸರನ್ನ ಕೊಟ್ಟಿರೋದು ನಿಜ. ನಾನು, ರಮೇಶ್, ವಿವೇಕ್ ರಾವ್ ಪಾಟೀಲ್ ಹೆಸರು ಪ್ರಸ್ತಾಪ ಇಟ್ಟಿದ್ದೇವೆ. ಲೋಕಸಭೆಗೆ ಹೋಗಲು ನನಗೆ ಇಷ್ಡವಿಲ್ಲ. ಜಿಲ್ಲೆಯಿಂದ ಎರಡು ಸೀಟು ಗೆಲ್ಲಿಸಿ ಕಳಿಸುವ ಭರವಸೆ ಇದೆ ಎಂದು ಸತೀಶ್ ವಿವರಿಸಿದರು.

2 ವರ್ಷಗಳ ನಂತರ ಸಚಿವ ಸ್ಥಾನ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಅದರಿಂದ ನಾನು ಬೇರೇನು ಮಾಡ್ತಿಲ್ಲ. ಎಐಸಿಸಿ ಕಾರ್ಯದರ್ಶಿ ಸ್ಥಾನವನ್ನೂ ನೀಡಿದ್ದಾರೆ. ಕೆಲವೊಂದು ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿರೋದು ನಿಜ. ಅದನ್ನು ಬಗೆಹರಿಸಿಕೊಳ್ತೀವಿ ಎಂದು ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದರು.

Next Story

RELATED STORIES