`ಕುಕ್ಕಿ'ದ ಇಂಗ್ಲೆಂಡ್ಗೆ ಗೆಲುವಿನ `ರೂಟ್': ಸೋಲಿನ ಭೀತಿಯಲ್ಲಿ ಭಾರತ

ಓವೆಲ್: ಮಾಜಿ ನಾಯಕ ಅಲಿಸ್ಟಕ್ ಅವರ ವಿದಾಯದ ಶತಕ ಹಾಗೂ ಹಾಲಿ ನಾಯಕ ಜೋ ರೂಟ್ ಅವರ ಸಮಯೋಚಿತ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಹಿಡಿತ ಬಿಗಿಗೊಳಿಸಿದೆ. ಭಾರತ ತಂಡ ಇದೀಗ ಆರಂಭಿಕ ಆಘಾತದಿಂದ ತತ್ತರಿಸಿದ್ದು, ಸೋಲು ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
ಪಂದ್ಯದ ನಾಲ್ಕನೇ ದಿನವಾದ ಸೋಮವಾರ 2 ವಿಕೆಟ್ಗೆ 114 ರನ್ ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ 8 ವಿಕೆಟ್ಗೆ 423 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 40 ರನ್ ಹಿನ್ನಡೆ ಅನುಭವಿಸಿದ್ದ ಭಾರತ ಗೆಲ್ಲಲು 464 ರನ್ ಕಠಿಣ ಗುರಿ ಪಡೆದಿದೆ.
ದಿನದಾಂತ್ಯಕ್ಕೆ ಭಾರತ 58 ರನ್ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದಿಂದ ತತ್ತರಿಸಿದೆ. ಭಾರತ ಇದೀಗ 406 ರನ್ ಗಳಿಸಬೇಕಿದ್ದು 7 ವಿಕೆಟ್ ಹೊಂದಿದೆ. ಕ್ರೀಸ್ ನನಲ್ಲಿ 46 ರನ್ ಗಳಿಸಿರುವ ಕೆ.ಎಲ್. ರಾಹುಲ್ (46) ಮತ್ತು ಅಜಿಂಕ್ಯ ರಹಾನೆ (10) ಇದ್ದಾರೆ.
ಆಲಿಸ್ಟರ್ ಕುಕ್ 147 ರನ್ ಬಾರಿಸಿ ಭಾರತ ವಿರುದ್ಧ ಪಾದರ್ಪಣೆ ಮತ್ತು ನಿವೃತ್ತಿ ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು. ಅಲ್ಲದೇ ಈ ಸಾಧನೆ ಮಾಡಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್ ಮನ್ ಹಾಗೂ ಭಾರತ ವಿರುದ್ಧ ಈ ಸಾಧನೆ ಮಾಡಿದ ಮೊದಲಿಗ ಎಂಬ ದಾಖಲೆಗೆ ಪಾತ್ರರಾದರು.
- ಸಂಕ್ಷಿಪ್ತ ಸ್ಕೋರ್
- ಇಂಗ್ಲೆಂಡ್ 332 ಮತ್ತು 2ನೇ ಇನಿಂಗ್ಸ್ 8 ವಿಕೆಟ್ಗೆ 423 (ಕುಕ್ 147, ರೂಟ್ 125, ಹನುಮ 37/3, ಜಡೇಜಾ 179/3).
- ಭಾರತ 292 ಮತ್ತು 3 ವಿಕೆಟ್ಗೆ 58 (ರಾಹುಲ್ ಅಜೇಯ 46, ಆ್ಯಂಡರ್ಸನ್ 23/2).