Top

ರಕ್ಷಿತ್​-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣ ಏನು ಗೊತ್ತಾ?

ರಕ್ಷಿತ್​-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣ ಏನು ಗೊತ್ತಾ?
X

ಸೋಲು-ಗೆಲುವು ಅನ್ನೋದು ಒಂಥರಾ ನೀರಿನ ಮೇಲೆ ಗುಳ್ಳೆ ಇದ್ದಂತೆ. ಅದು ಯಾವಾಗ ಏನ್ಬೇಕಾದ್ರೂ ಆಗ್ಬಹುದು ಅನ್ನೋದಕ್ಕೆ ಸ್ಯಾಂಡಲ್​ವುಡ್​ನ ಕಿರಿಕ್ ಜೋಡಿ ತಾಜಾ ಉದಾಹರಣೆ.

2016ರಲ್ಲಿ ಸಿನಿಮಾ ಕ್ಷೇತ್ರಕ್ಕೆ ರಶ್ಮಿಕಾ, ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಮರು ವರ್ಷವೇ ನಿಶ್ಚಿತಾರ್ಥವೂ ಮುಗಿದು ಹೋಯಿತು. ವಿಷಾದ ಅಂದರೆ ಒಂದೇ ವರ್ಷಕ್ಕೆ ಈ ಸಂಬಂಧವೂ ಮುರಿದುಬಿತ್ತು. ಅತ್ಯಂತ ಸುಂದರ ಜೋಡಿ ಎಂದೇ ಹೆಸರಾಗಿದ್ದ ಈ ಜೋಡಿ ಬೇರ್ಪಡುವ ಹಿಂದಿನ ನಿಜವಾದ ಕಾರಣ ಇಲ್ಲಿದೆ.

ಕಳೆದ ಒಂದು ತಿಂಗಳಿಂದ ಹರಿದಾಡುತ್ತಿದ್ದ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿದ್ದಿರುವುದು ಈಗ ಖಚಿತವಾಗಿದೆ. ಪರಸ್ಪರ ಎರಡೂ ಕುಟುಂಬಗಳು ಮಾತುಕತೆ ಮೂಲಕ ನಿಶ್ಚಿತಾರ್ಥವನ್ನು ಮುರಿದುಕೊಂಡಿವೆ. ಇದರಿಂದ ಅಂತೆ ಕಂತೆಗಳಿಗೆ ಕೊನೆಗೂ ತೆರೆ ಬೀಳಲಿದೆ.

ಕೊನೆಗೂ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಲವ್ ಸ್ಟೋರಿಗೆ ತೆರೆಬಿದ್ದಿದೆ. ಸಪ್ತಪದಿಗೂ ಮೊದಲೇ ಇವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದಾದರೂ ಯಾಕೆ ಅಂತ ನೋಡಿದರೆ ಅದಕ್ಕೆ ಕಾರಣವಾಗಿದ್ದು ಮತ್ತದೇ ಗೀತ ಗೋವಿಂದಂ ತೆಲುಗು ಚಿತ್ರದ ಡಿಲೀಡೆಟ್ ಲಿಪ್ ಲಾಕ್ ಸೀನ್.

ಗೀತ ಗೋವಿಂದಂ ಫ್ಯಾಮಿಲಿ ಎಂಟ್ರಟೈನರ್ ಅನ್ನೋದು ರಿಲೀಸ್ ಬಳಿಕ ಗೊತ್ತಾಯ್ತು. ಆದ್ರೆ ರಿಲೀಸ್ ವೇಳೆ ಲೀಕ್ ಆಗಿದ್ದ ರಶ್ಮಿಕಾ-ವಿಜಯ್ ಚುಂಬನದ ದೃಶ್ಯ, ರಕ್ಷಿತ್​ರನ್ನ ಎಲ್ಲಿಲ್ಲದಂತೆ ಕಾಡಿದೆ ಎನ್ನಲಾಗಿದೆ. ಅದೇ ವಿಚಾರವಾಗಿ ಪರಸ್ಪರ ವೈಮನಸ್ಸು ಮೂಡಿ, ಕುಟುಂಬಗಳ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ.

ರಶ್ಮಿಕಾ ಕುಟುಂಬದ ಆಪ್ತ ಮೂಲಗಳ ಪ್ರಕಾರ ರೀಸೆಂಟ್ ಆಗಿ ರಕ್ಷಿತ್ ಹಾಗೂ ರಶ್ಮಿಕಾ ಫ್ಯಾಮಿಲಿಗಳೆರಡೂ ಸೇರಿ ಮದುವೆ ಕೈಬಿಡೋದಾಗಿ ಚರ್ಚಿಸಿವೆಯಂತೆ. ಅಷ್ಟೇ ಅಲ್ಲ, ರಶ್ಮಿಕಾ ಇದೀಗ ಟಾಲಿವುಡ್​ನಲ್ಲಿ ಸ್ಟಾರ್ ಆಗಿ ಶೈನ್ ಆಗ್ತಿದ್ದು, ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ ಮದ್ವೆಗಿಂತ ಕರಿಯಲ್ ಮುಖ್ಯ ಅನ್ನೋ ಉದ್ದೇಶದಿಂದ ಕಿರಿಕ್ ಲವ್​ಗೆ ಕೊನೆಗೂ ಒಂದು ಅಂತ್ಯ ಹಾಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿಕೆ ನೀಡಲು ಇಚ್ಚಿಸದ ರಶ್ಮಿಕಾ- ರಕ್ಷಿತ್ ಹಾಗೂ ಅವ್ರ ಕುಟುಂಬಸ್ಥರು, ಇದು ವೈಯಕ್ತಿಕ ವಿಚಾರ ದಯವಿಟ್ಟು ತಲೆಹಾಕಬೇಡಿ ಅಂತಿದ್ದಾರೆ. ಆದ್ರೆ ಒಂದೊಳ್ಳೆ ನಿರ್ಧಾರ ಕೈಗೊಂಡ ಖುಷಿಯಲ್ಲಿ ರಶ್ಮಿಕಾ ಕುಟುಂಬವಿದೆ ಅನ್ನೋದು ಸದ್ಯದ ಮಾತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಮುಖ್ಯಸ್ಥ, ಟಿವಿ5

Next Story

RELATED STORIES