Mr & Mrs ದರ್ಶನ್ ಫೋಟೋಸ್ ವೈರಲ್‌ : ತೆರೆಮೇಲೆ ಅಪ್ಪ- ಮಗನ ಜುಗಲ್​ಬಂದಿ!

ಕುರುಕ್ಷೇತ್ರ ಸಿನಿಮಾ ಮೊದಲು ರಿಲೀಸ್ ಆಗತ್ತಾ..? ಯಜಮಾನನ ದರ್ಬಾರ್ ಮೊದ್ಲು ನಡೆಯುತ್ತಾ..? ಅನ್ನೋ ಗೊಂದಲದ ಮಧ್ಯೆ ಯಜಮಾನ ಸಿನಿಮಾ ಸೆಟ್​ನಿಂದ ಒಂದರ ಮೇಲೊಂದು ಸರ್ಪ್ರೈಸ್ ನ್ಯೂಸ್ ಸಿಕ್ತಿದೆ. ಯಜಮಾನ ಸೆಟ್​​ಗೆ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಭೇಟಿ ಕೊಟ್ಟ ಸುದ್ದಿ ತಣ್ಣಗಾಗೋ ಮೊದಲೇ, ಇನ್ನೊಂದು ಕಲರ್​ಫುಲ್ ಸಮಾಚಾರ ಹೊರಬಿದ್ದಿದೆ ಅದೇನು ಅಂತ ಮುಂದೆ ಓದಿ..

ಯಜಮಾನ.. ಕುರುಕ್ಷೇತ್ರ ನಂತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸ್ತಿರೋ ತಾಜಾ ಸಿನಿಮಾ.. ಪಿ. ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.. ಮೀಡಿಯಾ ಹೌಸ್‌ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಅಡಿ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ ಪಕ್ಕಾ ಫ್ಯಾಮಿಲಿ ಎಂಟ್ರಟ್ರೈನರ್ ಚಿತ್ರ ಯಜಮಾನ.

ಭರದಿಂದ ಸಾಗಿದೆ ಯಜಮಾನ ಸಿನಿಮಾ ಶೂಟಿಂಗ್
ಸೆಟ್​​​​ಗೆ ವಿಜಯಲಕ್ಷ್ಮೀ ದರ್ಶನ್ ಸರ್​​​ಪ್ರೈಸ್ ಎಂಟ್ರಿ

ಯೆಸ್.. ಬಾಕ್ಸಾಫೀಸ್​ ಸುಲ್ತಾನ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕೊನೆ ಹಂತದ ಶೂಟಿಂಗ್ ಭರದಿಂದ ಸಾಗಿದೆ.. ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಾಡೊಂದರ ಚಿತ್ರೀಕರಣ ನಡೀತಿದೆ.. ಮೊನ್ನೆ ಯಜಮಾನ ಸೆಟ್​​ನಲ್ಲಿದ್ದವರಿಗೆ ಅಚ್ಚರಿ ಕಾದಿತ್ತು.. ಶೂಟಿಂಗ್ ಮಧ್ಯೆ ಇದ್ದಕ್ಕಿದಂತೆ ದರ್ಶನ್ ಪತ್ನಿ, ವಿಜಯಲಕ್ಷ್ಮೀ ಸೆಟ್​ನಲ್ಲಿ ಕಾಣಿಸಿಕೊಂಡಿದ್ರು.. ಸೆಟ್​​​ನಲ್ಲಿ ಇದ್ದವರು ಸ್ಟಾರ್ ದಂಪತಿ ಫೋಟೋ ಕ್ಲಿಕ್ಕಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..

ಕೆಲ ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ನಡೆದ ಜಗಳದಿಂದ ಇಬ್ಬರಲ್ಲಿ ಮನಸ್ತಾಪ ಮೂಡಿತ್ತು.. ದರ್ಶನ್‌ ದಂಪತಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಒಟ್ಟಾಗಿ ಇಬ್ಬರೂ ಕಾಣಿಸಿಕೊಂಡಿರಲಿಲ್ಲ.. ದರ್ಶನ್​ ಬರ್ತ್​ಡೇ, ಸಿನಿಮಾ ಕಾರ್ಯಕ್ರಮಗಳು ಹೀಗೆ ಎಲ್ಲೂ ವಿಜಯಲಕ್ಷ್ಮೀ ಹಾಜರಿ ಇರುತ್ತಿರಲಿಲ್ಲ..

ಹಾಗಾಗಿ ಇಬ್ಬರು ದೂರ ದೂರ ಇದ್ದಾರೆ, ಯಾವುದೇ ಮಾತುಕತೆಯಿಲ್ಲ ಅಂತೆಲ್ಲಾ ಗಾಂಧಿನಗರದಲ್ಲಿ ಸುದ್ದಿ ಹರಡಿತ್ತು.. ಆದ್ರೆ ಇದೆಲ್ಲಾ ಸುಳ್ಳು ಸುದ್ದಿ ಅಂತ್ಲೇ ದರ್ಶನ್ ಆಪ್ತಮೂಲಗಳು ಹೇಳ್ತಿದ್ವು.. ಇದೀಗ ಯಜಮಾನ ಸೆಟ್​​ನಲ್ಲಿ ವಿಜಯಲಕ್ಷ್ಮೀ ಕಾಣಿಸಿಕೊಂಡು ಅಂತೆ ಕಂತೆಗಳಿಗೆ ಫುಲ್​ ಸ್ಟಾಪ್ ಇಟ್ಟಿದ್ದಾರೆ..

ಯಜಮಾನ ಸೆಟ್​ಗೆ ಭೇಟಿಕೊಟ್ಟ ವಿಜಯಲಕ್ಷ್ಮೀ ಕೆಲಹೊತ್ತು ದರ್ಶನ್ ಜೊತೆ ಹರಟೆ ಹೊಡೆಯುತ್ತಾ ಕಾಲ ಕಳೆದಿದ್ದಾರೆ.. ಇವರಿಬ್ಬರು ಸೆಟ್​ನಲ್ಲಿ ಕಾಣಿಸಿಕೊಂಡಿರೋ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದ್ದು, ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಖುಷಿಯಾಗಿದ್ದಾರೆ..

‘ಯಜಮಾನ’ ಹಾಡಿಗೆ ಬಣ್ಣ ಹಚ್ಚಿದ ವಿನೀಶ್
ಮತ್ತೆ ತೆರೆಮೇಲೆ ಅಪ್ಪ- ಮಗನ ಜುಗಲ್​ಬಂದಿ

ಸಿನಿಮಾ ಸೆಟ್​ನಲ್ಲಿ ವಿಜಯಲಕ್ಷ್ಮೀ ಕಾಣಿಸಿಕೊಂಡ ಸುದ್ದಿ ಬೆನ್ನಲ್ಲೇ ದರ್ಶನ್ ಪುತ್ರ ವಿನೀಶ್​​​, ಯಜಮಾನ ಚಿತ್ರದಲ್ಲಿ ಬಣ್ಣ ಹಚ್ಚಿರೋ ಸುದ್ದಿ ಹೊರಬಿದ್ದಿದೆ.. ಈ ಹಿಂದೆ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ಅಪ್ಪನ ಜೊತೆ ಖಾಕಿ ತೊಟ್ಟು ವಿನೀಶ್​​ ಕ್ಯಾಮೆರಾ ಮುಂದೆ ನಿಂತಿದ್ದ..

ಶನಿವಾರ ನಡೆದ ಯಜಮಾನ ಹಾಡಿನ ಚಿತ್ರೀಕರಣದಲ್ಲಿ ವಿನೀಶ್​ ಹೆಜ್ಜೆ ಹಾಕಿದ್ದಾನೆ.. ಹಾಗಾಗಿ ಅಭಿಮಾನಿಗಳಿಗೆ ಮತ್ತೊಮ್ಮೆ ಅಪ್ಪ ಮಗನ ಜುಗಲ್​ಬಂದಿ ನೋಡೋ ಅವಕಾಶ ಸಿಕ್ಕಂತಾಗಿದೆ.. ಅಷ್ಟಕ್ಕೂ ವಿನೀಶ್​ಯಾಕೆ ಯಜಮಾನ ಹಾಡಿನಲ್ಲಿ ಕಾಣಿಸಿಕೊಂಡಿದ್ದಾನೆ ಅನ್ನೋದಕ್ಕೆ ಇನ್ನಷ್ಟೆ ಉತ್ತರ ಸಿಗಬೇಕಿದೆ..

ಒಟ್ಟಾರೆ ಯಜಮಾನ ಸೆಟ್​ಗೆ ವಿಜಯಲಕ್ಷ್ಮೀ ಭೇಟಿ ಕೊಟ್ಟಿದ್ದು, ಚಿತ್ರದ ಹಾಡಿನಲ್ಲಿ ದರ್ಶನ್ ತಮ್ಮ ಮಗ ವಿನೀಶ್ ಜೊತೆ ಕಾಣಿಸಿಕೊಳ್ತಿರೋದು ತೂಗುದೀಪ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5