KSRTC, BMTC ಬಸ್ ದರ ಏರಿಕೆ ಅನಿವಾರ್ಯ : ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಮಂಡ್ಯ : ಪೆಟ್ರೋಲ್ ದರ ಏರಿಕೆ ಖಂಡಿಸಿ ಅನಿವಾರ್ಯವಾಗಿ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. ಬಸ್ ದರವನ್ನು ಶೇ.18ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ನಿನ್ನೆಯಷ್ಟೇ ಮಂಡ್ಯದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಇದಕ್ಕೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸಿದರೇ, ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ಮಾಡಿರುವ ಹಿನ್ನಲೆಯಲ್ಲಿ ಬಸ್ ದರ ಏರಿಕೆ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಈ ಬಗ್ಗೆ ಇಂದು ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬಸ್ ದರ ವನ್ನ ಏರಿಕೆ ಮಾಡುವ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.
ವಿಧಾನಸಭೆ ಚುನಾವಣೆ ಮುನ್ನವೇ 18ರಷ್ಟು ದರ ಏರಿಕೆ ಬಗ್ಗೆ ಇಲಾಖೆಯಲ್ಲಿ ಚಿಂತನೆ ನಡೆದಿತ್ತು. ಚುನಾವಣೆಯ ಬಳಿಕವೂ ನಿರಂತರವಾಗಿ ಪೆಟ್ರೋಲ್ ದರ ಏರಿಕೆ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಹೆಚ್ಚಳ ಮಾಡಲಾಗಿದೆ. ಮುಂದಿನ ವಾರ ಸಿಎಂ ಜೊತೆಗೆ ಮಾತನಾಡಿ ಶೇ. 2ರಷ್ಟು ಇಳಿಕೆ ಮಾಡಿ ಕನಿಷ್ಟ 16ರಷ್ಟಾದರೂ ಹೆಚ್ಚಳ ಮಾಡಿ, ನೂತನ ದರ ಪ್ರಕಟಿಸಲಾಗುವುದು ಎಂದು ಹೇಳಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಈ ಆದೇಶಕ್ಕೆ ಬಿಜೆಪಿಯವ್ರು ಟೀಕೆ ಮಾಡಿದ್ರು ಓಕೆ. ಆದ್ರೆ ಸಮ್ಮಿಶ್ರ ಸರ್ಕಾರದ ಜೆಡಿಎಸ್ ಮಿತ್ರ ಪಕ್ಷ ಕಾಂಗ್ರೆಸ್ ನವರು ಸಹ ಬಸ್ ದರ ಏರಿಕೆಯನ್ನು ಟೀಕಿಸಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ, ಬಸ್ ದರ ಏರಿಕೆಯಲ್ಲಿ ತಕ್ಷಣವೇ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಬಹುದಿತ್ತು.
ಇಲ್ಲವೇ ಸಚಿವ ಸಂಪುಟದಲ್ಲಾದರೂ ಈ ಬಗ್ಗೆ ಚರ್ಚಿಸಬಹುದಿತ್ತು. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷ ತೆಗೆದುಕೊಂಡಿರುವ ನಿರ್ಧಾರವನ್ನು ಟೀಕಿಸಿದ್ರು. ಈ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೂ ಸಹ ಮಾತುಕತೆ ನಡೆಸಿ ಬೆಲೆ ಕಡಿಮೆಗೊಳಿಸಲು ಮನವಿ ಮಾಡೋದಾಗಿ ಹೇಳಿದರು.
ಹೀಗಾಗಿ ಸರ್ಕಾರಿ ಬಸ್ ದರ ಏರಿಕೆಯಲ್ಲೇ, ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿಯವರು ದರ ಏರಿಕೆ ವಿರೋಧಿಸುವುದಕ್ಕಿಂತ, ಆಡಳಿತ ಪಕ್ಷದವರೋ ವಿರೋಧ ವ್ಯಕ್ತಪಡಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ವರದಿ : ಎಂ.ಕೆ.ಮೋಹನ್ ರಾಜ್, ಟಿವಿ5 ಮಂಡ್ಯ
- bmtc Bmtc Bus breaking news bus fare bus fare hick d c tammanna Government Bus kannada news kannada news today karnataka news today ksrtc ksrtc bus latest karnataka news topnews tranport minister d c tammanna tv5 kannada tv5 kannada live tv5 live tv5kannada news ಕೆ ಎಸ್ ಆರ್ ಟಿ ಸಿ ಸರ್ಕಾರಿ ಬಸ್ ದರ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ