Top

'ಧಮ್ ಇದ್ರೆ ಕಾಂಗ್ರೆಸ್ಸಿಗರನ್ನು ಅರೆಸ್ಟ್ ಮಾಡಿ'

ಧಮ್ ಇದ್ರೆ ಕಾಂಗ್ರೆಸ್ಸಿಗರನ್ನು ಅರೆಸ್ಟ್ ಮಾಡಿ
X

ಮಂಗಳೂರು: ತೈಲಬೆಲೆ ಏರಿಕೆ ಹಿನ್ನೆಲೆ, ದೇಶವ್ಯಾಪಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲೂ ಕೂಡ ಪ್ರತಿಭಟನೆ ಜೋರಾಗಿದ್ದು, ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಮಂಗಳೂರು ದಕ್ಷಿಣ ಬಿ.ಜೆ.ಪಿ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದ್‌ ಹಿನ್ನೆಲೆ, ಬಸ್‌ ಇಲ್ಲದ ಕಾರಣ, ಪ್ರಯಾಣಿಕರು ಆಟೋ ಹತ್ತಿದ್ದಕ್ಕೆ, ಪ್ರಯಾಣಿಕರನ್ನು ಆಟೋದಿಂದ ಇಳಿಸಿದ್ದಕ್ಕಾಗಿ, ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ನಾವು ಪ್ರತಿಭಟನೆ ಮಾಡಿದರೆ ನಮ್ಮನ್ನ ಥಟ್ ಅಂತಾ ಅರೆಸ್ಟ್ ಮಾಡ್ತೀರಾ. ಆದ್ರೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರೆ, ಪ್ರಯಾಣಿಕರ ಮೇಲೆ ದಬ್ಬಾಳಿಕೆ ನಡೆಸಿದ್ರೆ ಅರೆಸ್ಟ್ ಮಾಡುವುದಿಲ್ಲ. ನಿಮಗೆ ಧಮ್ ಇದ್ರೆ ಅರೆಸ್ಟ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್‌ಗೆ ಕಾಮತ್ ತರಾಟೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Next Story

RELATED STORIES