Top

ಭಾರತ್ ಬಂದ್ ಗೆ ರಾಜಧಾನಿಯಲ್ಲೂ ಜನಜೀವನ ಅಸ್ತವ್ಯಸ್ತ

ಭಾರತ್ ಬಂದ್ ಗೆ ರಾಜಧಾನಿಯಲ್ಲೂ ಜನಜೀವನ ಅಸ್ತವ್ಯಸ್ತ
X

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್​ಗೆ ರಾಜಧಾನಿ ಬೆಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಸೌಲಭ್ಯ ಇಲ್ಲದೇ ಜನರು ಪರದಾಡುವಂತಾಯಿತು.

ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಮುಂಜಾನೆ ಕೆಲವು ಒಂದೆರಡು ಖಾಸಗಿ ಬಸ್​ಗಳು ಸಂಚರಿಸಿದರೆ, ಆಟೋ ಚಾಲಕರು ಮನಸೋ ಇಚ್ಚೆ ಹಣ ವಸೂಲಿ ಮಾಡುವ ಮೂಲಕ ಪ್ರಯಾಣಿಕರಿಂದ ಸುಲಿಗೆ ಮಾಡಿದವು.

ಮುಂಜಾಗ್ರತೆ ದೃಷ್ಟಿಯಿಂದ ರಾತ್ರಿಯೇ ಬಸ್ ಗಳನ್ನು ಡಿಪೋಗಳಿಗೆ ಸಾರಿಗೆ ನಿಗಮದ ಬಸ್​ಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ರೈಲು ಸಂಚಾರ ಎಂದಿನಂತೆ ಇದ್ದಿದ್ದರಿಂದ ದೂರದ ಊರುಗಳಿಂದ ನಗರಕ್ಕೆ ಸಾವಿರಾರು ಪ್ರಯಾಣಿಕರು ಆಗಮಿಸಿದರೆ, ಊರಿಗೆ ಹೋಗುವವರು ನಿಗದಿತ ಸಮಯಕ್ಕೆ ರೈಲ್ವೆ ನಿಲ್ದಾಣಕ್ಕೆ ತಲುಪಲು ಪರದಾಡಿದರು.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್​ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಖಾಸಗಿ ಸಾರಿಗೆಗಳಾದ ಓಲಾ, ಉಬರ್​ ಮುಂಜಾನೆ ಕೆಲಸಮಯ ಸಂಚರಿಸಿದರೂ ನಂತರ ಸೇವೆ ಸ್ಥಗಿತಗೊಳಿಸಿದವು.

ಅತ್ಯಂತ ಜನದಟ್ಟಣೆ ಪ್ರದೇಶಗಳಾದ ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ ಮುಂತಾದ ಪ್ರದೇಶಗಳು ಬೆಳಗ್ಗೆಯಿಂದಲೇ ಬಿಕೋ ಎನ್ನುತ್ತಿದ್ದವು. ಸಿನಿಮಾ ಪ್ರದರ್ಶನ ಕೂಡ ರದ್ದುಗೊಂಡಿದ್ದರಿಂದ ಥಿಯೇಟರ್ ಬಳಿ ಯಾರೂ ಕಾಣಿಸಿಕೊಳ್ಳಲಿಲ್ಲ. ಸಣ್ಣಪುಟ್ಟ ಅಂಗಡಿಗಳು ಅಲ್ಲಲ್ಲಿ ತೆರೆದಿದ್ದು ಬಿಟ್ಟರೆ ಮಾಲ್​ಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು.

Next Story

RELATED STORIES