ಬಂದ್ನಲ್ಲೂ ಗಮನ ಸೆಳೆದ ವಿನೂತನ ಪ್ರತಿಭಟನೆಗಳು

X
TV5 Kannada10 Sep 2018 6:01 AM GMT
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ವೇಳೆ ರಾಜ್ಯದ ನಾನಾ ಕಡೆ ನಡೆದ ಭಿನ್ನ ಪ್ರತಿಭಟನೆಗಳು ಗಮನ ಸೆಳೆದವು.
ಸಾಮಾನ್ಯವಾಗಿ ಪ್ರತಿಭಟನೆ ಅಂದರೆ ಪ್ರತಿಕೃತಿ ದಹಿಸುವುದು, ಟಯರ್ ಸುಡುವುದು, ಘೋಷಣೆ ಕೂಗುವುದು.. ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಆದರೆ ಅದಕ್ಕಿಂತ ಭಿನ್ನವಾಗಿ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕೆಲವು ಝಲಕ್ ಇಲ್ಲಿದೆ.
ಬೆಂಗಳೂರು, ಮೈಸೂರು ಹಾಗೂ ಮಂಡ್ಯದಲ್ಲಿ ಕಾರನ್ನು ಹಗ್ಗದಿಂದ ಎಳೆಯುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಖಾಲಿ ಗ್ಯಾಸ್ ಸಿಲಿಂಡರ್ ಪಕ್ಕದಲ್ಲಿ ಇಟ್ಟು ಕಟ್ಟಿಗೆ ಬಳಸಿ ಒಲೆ ಹಚ್ಚಿ ಅಡುಗೆ ಮಾಡುವ ಅಣಕು ಪ್ರದರ್ಶನ ಮಾಡಲಾಯಿತು.
ದಾವಣಗೆರೆ ಹಾಗೂ ಹುಬ್ಬಳ್ಳಿಯಲ್ಲಿ ಒಲೆಯ ಮೇಲೆ ಟೀ ಮಾಡಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ರಾಯಚೂರು, ಚಾಮರಾಜನಗರದಲ್ಲಿ ಎತ್ತಿನ ಬಂಡಿ ಮೇಲೆ ಬೈಕ್ಗಳನ್ನು ಇರಿಸಿ ಓಡಿಸುವ ಮೂಲಕ ಸ್ಥಳೀಯರು ಪ್ರತಿಭಟನೆ ನಡೆಸಿದರು.
Next Story